ನಾಳೆ ದೆಹಲಿ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆಮ್ ಆದ್ಮಿ ಪಾರ್ಟಿ ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ ಎನ್ನುವ ಮಾಹಿತಿಗಳು ಬಂದಿವೆ. ಆದರೆ ಬಿಜೆಪಿ ನಾಯಕರು ಮಾತ್ರ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ತುಂಬಾ ಆತ್ಮವಿಶ್ವಾಸದಲ್ಲಿ ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಈ ಹೇಳಿಕೆ ಆಮ್ ಆದ್ಮಿ ಪಾರ್ಟಿ ನಾಯಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತೆ ಅಗಿದೆ. ಆಮ್ ಆದ್ಮಿ ನಾಯಕರ ಈ ಸಂಕಷ್ಟಕ್ಕೆ ಕಾರಣ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಹ್ಯಾಕ್ ಮಾಡುವ ಭೀತಿ. ಬಿಜೆಪಿ ದೇಶಾದ್ಯಂತ ಜಯಭೇರಿ ಬಾರಿಸುತ್ತಾ ಸಾಗಿದಂತೆ ವಿರೋಧ ಪಕ್ಷದ ನಾಯಕರು ಇವಿಎಂ ಮೆಷಿನ್ ಹ್ಯಾಕ್ ಮಾಡಲಾಗುತ್ತಿದೆ ಎನ್ನುವ ಆರೋಪ ಮಾಡಿದ್ದರು. ಇವಿಎಂ ಹ್ಯಾಕ್ ಆಗುತ್ತಿರುವುದರಿಂದಲೇ ನಮಗೆ ಬರಬೇಕಾದ ಮತಗಳೂ ಕೂಡ ಬಿಜೆಪಿ ಪಾಲಾಗುತ್ತಿವೆ ಎಂದು ಆರೋಪಿಸಿದ್ರು. ಇದೀಗ ಅದೇ ಭೀತಿ ಎದುರಾಗಿದೆ.
ಚುನಾವಣೆಗೂ ಮುನ್ನ ಆಮ್ ಆದ್ಮಿ ಪಾರ್ಟಿ ಕೂಡ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಅನ್ನು ಹ್ಯಾಕ್ ಮಾಡಬಹುದು ಎನ್ನುವುದನ್ನು ತೋರಿಸಿದ್ದರು. ಡೆಮೋ ಮಾಡಿ ತೋರಿಸಿದ್ದ ಆಪ್ನ ಎಂಜಿನಿಯರ್ ಟೀಂ ಯಾವುದೇ ಕಾರಣಕ್ಕೂ ಇವಿಎಂ ಮೆಷಿನ್ ಬಳಕೆ ಮಾಡಿ ಚುನಾವಣೆ ಮಾಡದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಮಾತ್ರ ಆಮ್ ಅದ್ಮಿ ಪಾರ್ಟಿಯ ಆರೋಪವನ್ನು ಅಲ್ಲಗಳೆದಿದ್ದರು. ಯಾವುದೇ ಕಾರಣಕ್ಕೂ ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಚುನಾವಣೆ ಮುಕ್ತಾಯವಾದ ಬಳಿಕ ಇವಿಎಂ ಮೆಷಿನ್ ಸ್ಟ್ರಾಂಗ್ ರೂಮ್ ಸೇರಲಿದೆ. ಅದಕ್ಕೂ ಮೊದಲೇ ಚುನಾವಣಾ ಕೇಂದ್ರದಲ್ಲೇ ಅದನ್ನು ಸಂಪರ್ಕ ರಹಿತವನ್ನಾಗಿ ಮಾಡಿ ಸೀಲ್ ಮಾಡಲಾಗುತ್ತದೆ. ಯಾವುದೇ ಇಂಟರ್ನೆಟ್ ಸಂಪರ್ಕ ಇಲ್ಲ ಎಂದ ಮೇಲೆ ಅದನ್ನು ಹ್ಯಾಕ್ ಮಾಡುವುದು ಹೇಗೆ ಎನ್ನುವ ಮರು ಪ್ರಶ್ನೆಯನ್ನು ಹಾಕಿತ್ತು. ಆದರೆ ಇವಿಎಂ ಮೆಷಿನ್ ಬದಲಾವಣೆ ಮಾಡಿದರೆ ಏನು ಮಾಡುವುದು ಎನ್ನುವ ಆತಂಕ ಬೇರೆ ಪಕ್ಷದವರನ್ನು ಕಾಡಲಾರಂಭಿಸಿತ್ತು. ಈ ಅನುಮಾನಕ್ಕೆ ಮತ್ತೊಂದು ಕಾರಣ ಬಿಜೆಪಿ ನಾಯಕ ಕೊಟ್ಟಿದ್ದ ಆ ಒಂದು ಹೇಳಿಕೆ.
ದೆಹಲಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಬಿಜೆಪಿ ನಾಯಕರೊಬ್ಬರು ನೀವು ಬಿಜೆಪಿಗೆ ಮತ ಹಾಕದಿದ್ದರೂ ನಿಮ್ಮ ಮತ ಬಿಜೆಪಿಗೆ ಬರಲಿದೆ ಎಂದಿದ್ದರು. ಆ ಬಳಿಕ ಇವಿಎಂ ಹ್ಯಾಕ್ ಮಾಡಲಾಗುತ್ತೆ ಎನ್ನುವ ಮಾತಿಗೆ ಬಲ ಬಂದಂತಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇವಿಎಂ ಹ್ಯಾಕ್ ಮಾಡುವ ವಿಡಿಯೋ ಶೇರ್ ಮಾಡುವ ಮೂಲಕ ಹ್ಯಾಕ್ ಮಾಡಲಾಗುತ್ತೆ ಎಂಬುದನ್ನು ಬೆಂಬಲಿಸಿದ್ದರು. ಇದೀಗ ಕರ್ನಾಟಕ ಬಿಜೆಪಿ ಕೂಡ ಇದೇ ಅರ್ಥ ಬರುವ ಹಾಗೆ ಟ್ವೀಟ್ ಮಾಡಿದೆ. ಈ ಟ್ವೀಟ್ನ ಅರ್ಥ, ಪ್ರೀತಿಯ ಇವಿಎಂ ನಿನ್ನನ್ನು ಎಲ್ಲಾ ವಿರೋಧ ಪಕ್ಷಗಳು ಮಂಗಳವಾರ ನಿನ್ನನ್ನು ದೂಷಿಸುತ್ತಾರೆ. ನೀನು ಅವರನ್ನು ಕ್ಷಮಿಸಿಬಿಡು. ಯಾಕಂದ್ರೆ ಅವರಿಗೆ ಏನ್ ಮಾಡ್ತಿದ್ದೀವಿ? ಏನನ್ನು ಹೇಳ್ತಿದ್ದೀವಿ ಎನ್ನುವುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಈ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಲಿದೆ ಎಂದಿದೆ. ಆಮ್ ಆದ್ಮಿ ಪಾರ್ಟಿಗೆ ಎದುರಾಗಿರುವ ಇನ್ನೊಂದು ಸಂಕಷ್ಟ ಎಂದರೆ ಚುನಾವಣಾ ಆಯೋಗ ಮತದಾನ ಮುಕ್ತಾಯವಾಗಿ ಒಂದು ದಿನ ಕಳೆದರೂ ಇನ್ನೂ ಕೂಡ ಮತದಾನ ನಡೆದ ಅಂಕಿ ಅಂಶವನ್ನು ಅಧಿಕೃತವಾಗಿ ಘೋಷಣೆ ಮಾಡದೆ ಇರುವುದು. ಕೆಲವು ಕಡೆ ಇಂದು ಸಂಜೆಯವರೆಗೂ ಕೂಡ ಇವಿಎಂ ಮೆಷಿನ್ ಸ್ಟ್ರಾಂಗ್ ರೂಮ್ ಸೇರಿರಲ್ಲ. ಇದೂ ಕೂಡ ಅನುಮಾನ ಹೆಚ್ಚಾಗುವಂತೆ ಮಾಡಿದೆ
ಆಮ್ ಆದ್ಮಿ ಪಾರ್ಟಿ ನಾಯಕರು ಇವಿಎಂ ಮೆಷಿನ್ ಹ್ಯಾಕ್ ಮಾಡುವ ಭೀತಿಗೆ ಒಳಗಾಗಿದ್ದಾರೆ. ಯಾಕೆಂದ್ರೆ ಚುನಾವಣಾ ಆಯೋಗ ಸಂಜೆಯವರೆಗೂ ಶೇಕಡವಾರು ಮತದಾನದ ಅಂಕಿ ಅಂಶವನ್ನು ಘೋಷಣೆ ಮಾಡಿರಲಿಲ್ಲ. ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಚ್ಚರಿಯ ಸಂಗತಿಯಾಗಿದ್ದು, ದೆಹಲಿ ಚುನಾವಣಾ ಆಯೋಗ ಮತದಾನ ಮುಗಿದು 22 ಗಂಟೆಗಳು ಕಳೆದರು ಮತದಾನದ ಶೇಕಡವಾರು ಅಂಕಿ ಅಂಶ ಪ್ರಕಟ ಮಾಡದೆ ಇರುವುದಕ್ಕೆ ಕಾರಣವೇನೆಂದು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದೆ. ಮತದಾನ ಆದ ಬಳಿಕ ಮತವಂಚನೆ ಮಾಡಲು ಅಧಿಕಾರಿಗಳು ಸಾಥ್ ಕೊಡ್ತಿದ್ದಾರಾ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗದ ನಡೆ ಕೂಡ ಅನುಮಾನಕ್ಕೆ ಕಾರಣವಾಗಿದ್ದು, ಚುನಾವಣೆಯಲ್ಲಿ ಎಷ್ಟು ಜನರು ಮತದಾನ ಮಾಡಿದ್ದಾರೆ ಎನ್ನುವ ಅಂತಿಮ ಅಂಕಿ ಅಂಶ ಕೊಡದೆ ಇರುವುದು ಭಾರೀ ಅನುಮಾನ ಮೂಡಿಸಿದೆ. ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಆಮ್ ಆದ್ಮಿ ಪಾರ್ಟಿ ಗೆಲ್ಲಲಿದೆ ಎಂದರೂ ಬಿಜೆಪಿ ನಾಯಕರ ಆತ್ಮವಿಶ್ವಾಸದ ಹಿಂದಿನ ಶಕ್ತಿ ಇವಿಎಂ ಟ್ಯಾಂಪರಿಂಗ್ ಮಾಡೋದಾ..? ಎಂದು ದೆಹಲಿ ಜನರೇ ಪ್ರಶ್ನಿಸುವಂತಾಗಿದೆ.
ಇನ್ನು ಇದೀಗ ಪತ್ರಿಕಾಗೋಷ್ಟಿ ನಡೆಸಿರುವ ಚುನವಣಾ ಆಯೋಗವು ಅಧಿಕತೃ ಅಂಕಿ ಅಂಶಗಳನ್ನು ಪ್ರಕಟಿಸಿದ್ದು ಶೇಕಡಾ 62.59 ಮತದಾರರು ಮತ ಚಲಾಯಿಸಿದ್ದಾರೆಂದು ಹೇಳಿದೆ. ಆದರೆ ಚುನಾವಣೆ ಪ್ರಕ್ರಿಯೆಗಳೆಲ್ಲವೂ ಕೊನೆಗೊಂಡ 24 ತಾಸುಗಳ ನಂತರ ಚುನಾವಣಾ ಆಯೋಗವು ಈ ಪ್ರಕಟನೆಯ;ನ್ನು ಹೊರಡಿಸಿದೆ.