• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆದಿವಾಸಿ ಬುಡಕಟ್ಟು ಸಮುದಾಯಗಳ ಹಕ್ಕು, ಅಧಿಕಾರ, ಅಭಿವೃದ್ಧಿಯ ಒಳನೋಟ

by
September 13, 2020
in ಕರ್ನಾಟಕ
0
ಆದಿವಾಸಿ ಬುಡಕಟ್ಟು ಸಮುದಾಯಗಳ ಹಕ್ಕು
Share on WhatsAppShare on FacebookShare on Telegram

ಭಾರತದ ಸಂಸ್ಕೃತಿ, ಪರಂಪರೆ ಇರುವುದೇ ಭಿನ್ನತೆಯ ಬೆಡಗಿನಲ್ಲಿ, ವಿವಿಧ ಪ್ರದೇಶ, ಭಾಷೆ ರೂಢಿ ಸಂಪ್ರದಾಯಗಳಿರುವಂತೆ, ಅನೇಕ ಬಗೆಯ ಬುಡಕಟ್ಟು ಜನಾಂಗಗಳಿದ್ದು, ಪ್ರಪಂಚದ್ಯಾದಂತ ಸುಮಾರು 4000 ವಿವಿಧ ಬುಡಕಟ್ಟು ಪಂಗಡಗಳು ವಾಸಿಸುತ್ತಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ತಿದ್ದುಪಡಿ) ಆದೇಶ ಕಾಯಿದೆ 1976 ಮತ್ತು 1991ರ 39 ರ ಪ್ರಕಾರ ಕನಾಟಕ ರಾಜ್ಯದಲ್ಲಿ 50 ಬಗೆಯ ಜನಾಂಗೀಯ ಗುಂಪುಗಳನ್ನು ಪರಿಶಿಷ್ಟ ಪಂಗಡ ಸಮುದಾಯಗಳು ಎಂದು ಸೂಚಿಸಲಾಗಿದೆ. ಎರಡು ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ)ಗಳನ್ನು ಜೇನುಕುರುಬ ಹಾಗೂ ಕೊರಗ ಸಮುದಾಯ ಹಾಗೂ ಅರಣ್ಯ ಅಧಾರಿತ ಬುಡಕಟ್ಟುಗಳಾದ ಸೋಲಿಗ, ಬೆಟ್ಟ ಕುರುಬ, ಪಣಿಯರವ, ಪಂಜರಿಯರವ, ಕುಡಿಯ, ಮಲೆಕುಡಿಯ, ಇರುಳಿಗ, ಹಸಲ, ಗೌಡ್ರು, ಸಿದ್ದಿ ಸಮುದಾಯದವರು ರಾಜ್ಯದ ಅರಣ್ಯದಂಚಿನಲ್ಲಿ ಹಲವಾರು ದಶಕಗಳಿಂದ ಜೀವನ ನಡೆಸುತ್ತಿದ್ದಾರೆ. ಉಳಿದ ವಾಲ್ಮೀಖಿ, ನಾಯಕ ಸೇರಿದಂತೆ 38 ಬುಡಕಟ್ಟು 81 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರ ಭಾಷೆ, ಸಂಸ್ಕೃತಿ, ಜ್ಞಾನ, ಆಚಾರ ವಿಚಾರಗಳಲ್ಲಿ ವ್ಯತ್ಯಾಸವಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯ 6,10,95,297 ಇದ್ದು, ಇದರಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ಇದೆ, ಎಸ್ ಟಿ ಜನಸಂಖ್ಯೆಯು ರಾಜ್ಯ ಜನಸಂಖ್ಯೆಯ ಶೇಕಡ 6.95 ರಷ್ಟಿದ್ದರೆ, ದೇಶದ ಜನಸಂಖ್ಯೆಯು 10,42,81,034 (8.6%) ರಷ್ಟಿದೆ. ರಾಜ್ಯದ ಪರಿಶಿಷ್ಟ ಪಂಗಡ ಜನಸಂಖ್ಯೆ ಶೇಕಡವಾರು ಪ್ರಮಾಣದಲ್ಲಿ ಅತಿ ಹೆಚ್ಚು 10.6%, (4,51.406) ಬಳ್ಳಾರಿ ಜಿಲ್ಲೆ ಹೊಂದಿದೆ. ರಾಯಚೂರು 8.6%. (3,67,071), ಎರಡನೇ ಸ್ಥಾನದಲ್ಲಿದೆ. ಮೈಸೂರು 7.8% (3,34,547), ಚಿತ್ರದುರ್ಗ 7.1% (3,02,554). ಬೆಳಗಾವಿ 6.9%, ಬೀದರ್, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ, ಈ ಏಳು ಜಿಲ್ಲೆಗಳು ರಾಜ್ಯದ ಪರಿಶಿಷ್ಟ ಪಂಗಡದ ಜನಸಂಖ್ಯೆಯಲ್ಲಿ ಶೇಕಡ 52 ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ 23 ಜಿಲ್ಲೆಗಳು ಶೇಕಡ 48 ರಷ್ಟು ಪಾಲನ್ನು ಹಂಚಿಕೊಂಡಿವೆ.

ಪರಿಶಿಷ್ಟ ಪಂಗಡದ ಲಿಂಗಾನುಪಾತವು 1000 ಪುರುಷರಿಗೆ 990 ಮಹಿಳೆಯರಿದ್ದಾರೆ, ಇದು ಭಾರತದ ಸರಾಸರಿ 964 ಗಿಂತ, ರಾಜ್ಯದ ಲಿಂಗಾನುಪಾತಕ್ಕಿಂತ (929) ಹೆಚ್ಚಿದೆ. ಇದು ಅವರು ಮಹಿಳೆಯರಿಗೆ ನೀಡುವ ಮಹತ್ವವಾಗಿದೆ. ಕರ್ನಾಟಕದ ಪರಿಶಿಷ್ಟ ಪಂಗಡಗಳ ಸಾಕ್ಷರತೆಯು ಕಳವಳಕ್ಕೆ ಕಾರಣವಾಗಿದೆ. ಇವರ ಸಾಕ್ಷರತೆಯ ಪ್ರಮಾಣ 2001 ರಲ್ಲಿ ಶೇಕಡ 48.3 ರಷ್ಟಿದ್ದದ್ದು. 2011 ರಲ್ಲಿ 53.9 ಕ್ಕೆ ಏರಿದೆ. ರಾಜ್ಯದ ಸಾಕ್ಷರತೆಯ ದರ ಶೇಕಡ 5 ಇದೆ.

ಆದಿವಾಸಿ ಬುಡಕಟ್ಟು ಜನಾಂಗಗಳ ವಸ್ತುಸ್ಥಿತಿ;

ಪರಿಶಿಷ್ಟ ಪಂಗಡದ ಜನರು ತಮ್ಮದೇ ಆದ ಅನನ್ಯ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಹೊಂದಿದ್ದಾರೆ. ಅವರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆ ಇತರ ಗುಂಪುಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ.ಒಟ್ಟು ಜನಸಂಖ್ಯೆಯ ಶೇಕಡ 50.26 ಜನರು ಕೆಲಸಗಾರರಾಗಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಬಹುಪಾಲು ಜನರು ಬಡತನ ರೇಖೆಗಿಂತ ಕೆಳಗೆ ಮತ್ತು ಅವಕಾಶ ಕೊರತೆಗಳಿಂದ ಇರುವುದನ್ನು ಕಾಣಬಹುದಾಗಿದೆ.

2002ರ ಡಾ.ನಂಜುಡಪ್ಪ ವರದಿಯು ಎಸ್ ಟಿ ಜನಾಂಗದ ಪ್ರಾದೇಶಿಕ ಹಿಂದುಳಿದಿರುವಿಕೆ ನಡುವಿನ ಅಸಮತೋಲನವನ್ನು ಎತ್ತಿ ತೋರಿಸಿದೆ. ಎಸ್.ಟಿ ಸಮುದಾಯವು ಕಡಿಮೆ ಸ್ವತ್ತಿನ ಮೂಲವನ್ನು ಹೊಂದಿದೆ. ಬಡತನ ವ್ಯಾಪಕವಾಗಿ ಹರಡಿದೆ. ನಿರುದ್ಯೋಗ ದರ ಹೆಚ್ಚಿದೆ. ಶೈಕ್ಷಣಿಕ ಸೌಕರ್ಯಗಳ ಮತ್ತು ಸೇವೆಗಳ ಲಭ್ಯತೆ ಕಡಿಮೆ ಪ್ರಮಾಣದಲ್ಲಿದೆ. ಇವೆಲ್ಲವೂ ಸಮುದಾಯದ ಸ್ಥಿತಿಯ ದುರ್ಬಲತೆಯನ್ನು ತೋರಿಸಿವೆ (ಕರ್ನಾಟಕ ಸರ್ಕಾರ 2002) ಕರ್ನಾಟಕ ಮಾನವ ಅಭಿವೃದ್ಧಿ ವರದಿ 2005 ರಲ್ಲಿ ಇದೇ ರೀತಿಯ ವೀಕ್ಷಣೆಯನ್ನು ನೀಡುತ್ತದೆ. ಇತರೆ ಗುಂಪುಗಳಿಗಿಂತ ವಿವಿಧ ಅಭಿವೃದ್ಧಿ ಸೂಚಕಗಳಿಗೆ ಸಂಬಂಧಿಸಿದಂತೆ ಮತ್ತು ಹೆಚ್ಚು ಬಡತನ ಹಾಗೂ ವಂಚಿತ ಸಮುದಾಯವಾಗಿದೆ ಎಸ್.ಟಿ ಸಮುದಾಯವು ಕೆಳಗಿದೆ.

ಮಾನವ ಅಭಿವೃದ್ಧಿ ಸ್ಥಿತಿಯು ರಾಜ್ಯದ ಇತರೆ ಜನಾಂಗಕ್ಕಿಂತ ಒಂದು ದಶಕಕ್ಕೂ ಹೆಚ್ಚು ಹಿಂದಿದೆ ಎಂದಿದೆ. ಪರಿಶಿಷ್ಟ ಪಂಗಡಗಳಲ್ಲಿ ಶ್ರಮಿಕರ ಪಾಲು ಒಟ್ಟು ಜನಸಂಖ್ಯೆಯ ಶೇಕಡ 3.50. ಈ ಶ್ರಮಿಕರಲ್ಲಿ ಸುಮಾರು ಶೇಕಡ 15 ರಷ್ಟು ಮಂದಿ ಕೃಷಿಕರಾಗಿ, ಶೇಕಡ 15.59 ಕೃಷಿ ಕಾರ್ಮಿಕರಾಗಿದ್ದಾರೆ. ಯಾವುದೇ ಉದ್ಯೋಗ ಮಾಡುತ್ತಿದ್ದರು ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಸಾಮಾನ್ಯ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳು ಕೂಡ ಇದರ ಜೊತೆಗೆ ಬೆರತುಕೊಂಡಿದೆ. ಇವರು ವಾಸಿಸುವ ಜಾಗ ಜಮೀನು ಮಾಲೀಕರಾಗಿದ್ದವರು, ಬಲಾಡ್ಯರ ಒತ್ತಡಕ್ಕೊಳಗಾಗಿ ಬುಡಕಟ್ಟು ಜನಾಂಗಗಳು ಕಮ್ಮ ಒಡೆತನದಲ್ಲಿದ್ದ ನೆಲದಲ್ಲೇ ಕೂಲಿಗಳಾಗಿ ಪರಿವರ್ತರಾಗುತ್ತಿದ್ದಾರೆ.

ಇವರು ವಾಸಿಸುವ ಪ್ರದೇಶಗಳಲ್ಲಿ ಯಾವುದೇ ಲಿಖಿತ ಭೂ ದಾಖಲೆಗಳು ಲಭ್ಯವಿಲ್ಲ ಮತ್ತು ಭೂ ಕಂದಾಯ ಪಾವತಿಯು ಆಗಿರುವುದಿಲ್ಲ. ಈ ಭೂ ದಾಖಲೆಗಳ ಕೊರತೆಯು ಬಡ ಹಿಡುವಳಿದಾರರಿಗೆ ಅಭದ್ರತೆಯನ್ನುಂಟು ಮಾಡುತ್ತಿದ್ದು, ಸುಸ್ಥಿತಿಯಲ್ಲಿರುವ ಕೆಲವೇ ಜನರು ಭೂಮಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಡ ಕೃಷಿಕರ ಬೇಸಾಯದ ಉತ್ಪನ್ನ ಪಡೆಯಲು ತಡೆಯೊಡ್ಡುತ್ತಿದ್ದಾರೆ.

ಪರಿಶಿಷ್ಟರ ಶೋಷಣೆ ಬಗ್ಗೆ ಒಂದು ದೀರ್ಘ ಇತಿಹಾಸವೇ ಇದೆ, ಲೇವಾದೇವಿಗಾರರು ಯಾವುದೇ ಉದ್ದೇಶಕ್ಕಾದರೂ ಹಣವನ್ನು ಸಾಲ ನೀಡುತ್ತಾರೆ. ಇದನ್ನು ತೀರಿಸಲು ಬಹು ದೂರ ಪ್ರದೇಶಗಳಿಗೆ ವಲಸೆ ಹೋಗಿ ಕೆಲಸ ನಿರ್ವಹಿಸಿ ತೀರಿಸಲು ಹೆಣಗುತ್ತಿದ್ದಾರೆ. ಹೀಗೆ ಇದರ ದುರ್ಬಳಕೆ ಮಾಡಿಕೊಂಡು ಕೆಟ್ಟ ಪದ್ಧತಿಗಳ ಮೂಲಕ ಬುಡಕಟ್ಟು ಅರ್ಥ ವ್ಯವಸ್ಥೆಯನ್ನು ನಾಶಗೊಳಿಸಿದ್ದಾರೆ. ಇದರ ಫಲವೇ ಭೂ ಪರಾಧೀನತೆ ಹಾಗೂ ಸಾಲದ ಹೊರೆ. ಈ ಸ್ಥಿತಿ ಇವರನ್ನು ದಿವಾಳಿಯತ್ತ ತಳ್ಳಿದೆ, ಆರ್ಥಿಕ ಅಭಿವೃದ್ಧಿ ಮತ್ತು ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಬಹು ಉದ್ದೇಶಿತ ಸಂಘಗಳನ್ನು ರಚಿಸಿದ್ದರು ಇವುಗಳ ಅಸಮರ್ಥತೆಯಿಂದಾಗಿ ನಿರ್ವಹಣೆ ನಿರಾಶದಾಯಿಕವಾಗಿದೆ. ಸರ್ಕಾರದ ಅಭಿವೃದ್ಧಿ ಪರಿಶ್ರಮಗಳು ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಮೇಲೆ ಅಂತಹ ಗುರುತರವಾದ ಯಾವುದೇ ಪ್ರಭಾವ ಬೀರಿದಂತೆ ಕಂಡುಬರುವುದಿಲ್ಲ.

ಪರಿಶಿಷ್ಟ ಪಂಗಡದವರಿಗೆ ರಾಜಕೀಯ ಪ್ರಾತಿನಿದ್ಯ:

2015 ರಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 93,465 ಸದಸ್ಯರುಗಳಿದ್ದು, ಇದರಲ್ಲಿ ಎಸ್ ಟಿ ಚುನಾಯಿತ ಸದಸ್ಯರು 10,687, ಫೆಬ್ರವರಿ 2016 ರಲ್ಲಿ ನಡೆದ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಒಟ್ಟು 3,903 ಸದಸ್ಯರಲ್ಲಿ, 387 ಎಸ್ ಟಿ ಸದಸ್ಯರು, ಒಟ್ಟು ಜಿಲ್ಲಾ ಪಂಚಾಯತಿ 1,083 ಒಟ್ಟು ಸದಸ್ಯರು, ಇದರಲ್ಲಿ 95 ಎಸ್ ಟಿ ಸದಸ್ಯರು, ವಿಧಾನಸಭೆಯ 224 ಶಾಸಕರಲ್ಲಿ 18 ಎಸ್ ಟಿ ಶಾಸಕರು, ಒಬ್ಬರು ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಲೋಕಸಭೆಯಲ್ಲಿ 2 ಸದಸ್ಯರಿದ್ದಾರೆ.

ಸಂವಿಧಾನದ ಹಕ್ಕು ಹಾಗೂ ಕಾಯಿದೆಗಳು: ‌

ಸಂವಿಧಾನದಲ್ಲಿ ನೀಡಲಾಗಿರುವ ಈ ಎಲ್ಲ ಹಕ್ಕುಗಳ ಜೊತೆಗೆ ಆದಿವಾಸಿಗಳು ವಿಶಿಷ್ಟವಾದ ಜನಾಂಗವಾಗಿರುವುದರಿಂದ ವಿಶೇಷ ಹಕ್ಕು ನೀಡಲಾಗಿದೆ. ಸಂವಿಧಾನದ 342 ನೇ ವಿಧಿಯ ಪ್ರಕಾರ ಹಕ್ಕುಗಳು ಮತ್ತಿತರ ವಿಷಯಗಳು, 330 ಮತ್ತು 332 ವಿಧಿಗಳ ಪ್ರಕಾರ ಸಂಸತ್ ಮತ್ತು ರಾಜ್ಯಗಳ ವಿಧಾನ ಸಭೆಗಳಲ್ಲಿ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ, ವಿಧಿ 19(5) ಪ್ರಕಾರ ಸಾಮಾನ್ಯ ನಾಗರಿಕರು, ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಆಸ್ತಿ ಖರೀದಿಸುವುದು ಅಥವಾ ಮುಕ್ತವಾಗಿ ವಾಸಿಸುವ ಹಕ್ಕನ್ನು ನಿರ್ಬಂಧಿಸಲಾಗಿದೆ. ವಿಧಿ 29 ಪ್ರಕಾರ ಬುಡಕಟ್ಟು ಜನಾಂಗದ ಭಾಷೆ, ಉಪಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ವಿಧಿ 14(4) ಪ್ರಕಾರ ರಾಜ್ಯ ಸರ್ಕಾರಗಳು ಸಾಮಾನ್ಯ ಮೀಸಲಾತಿ ಜಾರಿಗೊಳಿಸುವ ಹಕ್ಕು ಹೊಂದಿವೆ, ಜೊತೆಗೆ 16(4) ರ ಪ್ರಕಾರ ಬುಡಕಟ್ಟು ಜನಾಂಗದವರಿಗೆ ಉದ್ಯೋಗ ಮತ್ತು ನೇಮಕಾತಿಯಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ನೌಕರಿ, ಅರೆ ಸರ್ಕಾರಿ ನೌಕರಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇಕಡ 75ರಷ್ಟು ಹುದ್ದೆಗಳು ಮತ್ತು ಸೀಟುಗಳನ್ನು ಮೀಸಲಿರಿಸಲಾಗಿದೆ. ಇದನ್ನು ರಾಜ್ಯ ಸರ್ಕಾರ ಸರಿಯಾಗಿ ಜಾರಿಗೊಳಿಸಿಲ್ಲ. ಇದಕ್ಕಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿಯವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ದಾವಣಗೆರೆಯಿಂದ ಬೆಂಗಳೂರು ವರೆಗೂ ಪಾದಯಾತ್ರೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಲು ಕಾರಣಭೂತರಾಗಿ, ಇವರ ಆಯೋಗವು ಮುಖ್ಯಮಂತ್ರಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಸ್ವಾಮೀಜಿಯವರು ಮೀಸಲಾತಿ ಹೆಚ್ಚಳ ಜಾರಿಗೊಳಿಸುವ ನಿರ್ಧಾರ ತಡ ಆಗಿರುವುದರಿಂದ, ಇಂದು ಸಹ 7.5 ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ಸಮುದಾಯವು ಸ್ವಾಮೀಜಿಯವರ ನೇತೃತ್ವದಲ್ಲಿ ಇದಕ್ಕಾಗಿ ಹೋರಾಟ ನಡೆಸುತ್ತಿದೆ. ಪರಿಶಿಷ್ಟ ಪಂಗಡ ಜನಾಂಗಗಳ ಅಭಿವೃದ್ಧಿ ಎಂದರೆ ಎಸ್ ಟಿ ಜನಾಂಗದವರನ್ನು ಬುಡಕಟ್ಟೇತರ ಜನಾಂಗದ ಜೊತೆ ವಿಲಿನಗೊಳಿಸುವುದೆಂದೇ ತಿಳಿದು ಸರ್ಕಾರ ಕಾರ್ಯ ನಿವಹಿಸುತ್ತಿದೆ. ಬುಡಕಟ್ಟು ಅಭಿವೃದ್ಧಿ ಎಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಇವರು ಇತರರೊಡನೆ ಬೆರೆತು ಹೋಗಬೇಕೆಂಬುದೇ ಆಶಯ, ಜಾಗತೀಕರಣವನ್ನು ಮೆಟ್ಟಿನಿಲ್ಲಲು ಬುಡಕಟ್ಟು ಜನಾಂಗಗಳನ್ನು ಬಲಶಾಲಿಗಳನ್ನಾಗಿ ಮಾಡಬೇಕಾಗುತ್ತದೆ.

ಆದಿವಾಸಿ ಬುಡಕಟ್ಟು ಜನಾಂಗಗಳ ಸಬಲೀಕರಣಕ್ಕೆ ಆಗಬೇಕಾದ್ದು: ‌

ರಾಜ್ಯದಲ್ಲಿ ಇಂದಿಗೆ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇಕಡ 6 ಇದ್ದರೂ, ಮೀಸಲಾತಿ ಲಭ್ಯವಾಗಿರುವುದು ಶೇಕಡ 3 ಮಾತ್ರ ಅದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಕಲ್ಪಿಸಲು ನ್ಯಾ.ನಾಗಮೋಹನ್ ದಾಸ್ ವರದಿ ಅನುಷ್ಠಾನಗೊಳ್ಳಬೇಕು.

ಅದಿವಾಸಿಗಳು ಹಾಗೂ ಅರಣ್ಯಾಧಾರಿತ ಬುಡಕಟ್ಟುಗಳ ಅರಣ್ಯ ಹಕ್ಕು ಕಾಯಿದೆ 2006, ಜಮೀನು ಕಾಯಿದೆ 2013, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯಿದೆ 1989,ಇವುಗಳು ಸರಿಯಾದ ಅನುಷ್ಠಾನವಾಗಲು ಆದಿವಾಸಿಗಳ ಸಲಹಾ ಸಮಿತಿ ರಚಿಸುವುದು. ಆದಿವಾಸಿಗಳ ಪಾರಂಪರಿಕ ವಸ್ತು, ಪದಾರ್ಥಗಳನ್ನು ಸಂರಕ್ಷಿಸಲು ಆದಿವಾಸಿ ಮ್ಯೂಸಿಯಂ ಸ್ಥಾಪಿಸುವುದು. ಬುಡಕಟ್ಟು ಜನರು ವಾಸ ಮಾಡುವ ಪ್ರದೇಶಗಳಲ್ಲಿ ಪ್ರತ್ಯೇಕ ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ಕುಮರಿ ಬೇಸಾಯದ ಜೊತೆಗೆ, ಕೃಷಿ ವ್ಯವಸಾಯಕ್ಕೆ ಬೇಕಾದ ಸಲಕರಣೆಗಳು, ರಸ ಗೊಬ್ಬರ ಹಾಗೂ ತಂತ್ರಜ್ಞಾನವನ್ನು ಒದಗಿಸುವುದು.

ಈಗಿರುವ ಆಶ್ರಮ ಶಾಲೆಗಳನ್ನು ಮುಚ್ಚಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಶಾಲೆಗಳನ್ನು ತೆರೆದು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವುದು, ಲೇವಾದೇವಿಗಾರರ ದುರ್ಬಳಕೆಯನ್ನು ತಡೆಗಟ್ಟಲು ಇವರಿಗಾಗಿ ಪ್ರತ್ಯೇಕ ಸಹಕಾರ ಸಂಘ ಸ್ಥಾಪಿಸಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಈಗಿರುವ ಕರ್ನಾಟಕ ಜೀವನೋಪಾಯ ಸಂಜೀವಿನಿ ಕಾರ್ಯಕ್ರಮವನ್ನು ಇದರೊಟ್ಟಿಗೆ ತಂದು ಅನುಷ್ಠಾನಗೊಳಿಸುವುದು. ಆರೋಗ್ಯ ಹಕ್ಕು, ಆಹಾರ ಭದ್ರತೆ ಹಾಗೂ ಉದ್ಯೋಗ ಸಿಗುವಂತೆ ಖಾತ್ರಿಪಡಿಸಿಕೊಳ್ಳುವುದು, ಅರ್ಹ ಆದಿವಾಸಿಗಳಿಗೆ ಭೂ ಮೋಜಣಿಯನ್ನು ನಡೆಸಿ ಪಹಣಿ ಪತ್ರವನ್ನು ವಿತರಿಸುವುದು, ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ದಲ್ಲಾಳಿಗಳು ಮತ್ತು ಏಜೆಂಟರಿಂದ ಮೂಲನಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು.

ಸಂವಿಧಾನದ 5ನೇ ಮತ್ತು 6 ನೇ ಶೆಡ್ಯೂಲ್ ನಲ್ಲಿ ಬುಡಕಟ್ಟು ಹಕ್ಕುಗಳಿಗೆ ಖಾತರಿ ನೀಡಲಾಗಿದೆ. ಪಂಚಾಯತ್‌ (ಪರಿಶಿಷ್ಟ ಪ್ರದೇಶಕ್ಕೆ ವಿಸ್ತರಣೆ) ಕಾಯ್ದೆ-ಪೆಸಾ ಬುಡಕಟ್ಟು ಜನಾಂಗದವರಿಗೆ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸ್ವಯಂ ಆಡಳಿತದಲ್ಲಿ ಸಾಕಷ್ಟು ಅಧಿಕಾರ ಒದಗಿಸಿದೆ. ಇದು ಅಭಿವೃದ್ಧಿಯ ತಳಹದಿಯಾಗಿದೆ. ಆದಿವಾಸಿಗಳ ಸಂಸ್ಕೃತಿ, ಮೌಲ್ಯಗಳು, ಜೀವನ ಶೈಲಿ, ಮುಖ್ಯವಾಗಿ ನಿಸರ್ಗದ ನೀರು, ನೆಲ, ಅರಣ್ಯದ ಬದುಕುವ ಹಕ್ಕು ಉಳಿಸಿಕೊಂಡು, ಮುಕ್ತ ವಾತವರಣ, ವಿಚಾರಗಳಿಗೆ ಆದ್ಯತೆ ನೀಡುವುದು, ಮುಖ್ಯ ನಿರ್ಧಾರಗಳಲ್ಲಿ ಅವರ ಒಪ್ಪಿಗೆ ಪಡೆದು, ಪರಿಸರ ಉಳಿಸುವ ಅಭಿವೃದ್ಧಿ ಬೇಕಾಗಿದೆ. ಸಂವಿಧಾನದಲ್ಲಿ ಆದಿವಾಸಿ ಬುಡಕಟ್ಟು ಜನಾಂಗಗಳ ಯೋಗಕ್ಷೇಮ ಮತ್ತು ಹಿತವನ್ನು ಕಾಪಾಡುವ ಕಾನೂನುಗಳ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ. ಭೂಮಿ ಮತ್ತು ಅರಣ್ಯ ಕುರಿತಾದ ಬುಡಕಟ್ಟು ಜನರ ಹಕ್ಕುಗಳನ್ನು ನಾವೆಲ್ಲರೂ ಗೌರವಿಸಬೇಕಾಗಿದೆ. ಉತ್ತಮ ಜೀವನ, ಘನತೆಯಿಂದ ಬದುಕುವುದಕ್ಕಾಗಿ ವಿಶ್ವ ಸಂಸ್ಥೆಯು ಸೆಪ್ಟೆಂಬರ್ 1 ಅಂತರ ರಾಷ್ಟ್ರೀಯ ಆದಿವಾಸಿಗಳ ಹಕ್ಕು/ ಅಧಿಕಾರ ಸ್ಥಾಪನಾ ಘೋಷಣಾ ದಿನದಂದು ನಾವೆಲ್ಲರೂ ಸಮುದಾಯವನ್ನು ಕಾರ್ಯಶೀಲಗೊಳಿಸಲು ಪಣತೊಡಬೇಕಾಗಿದೆ.

ಲೇಖಕರು- ಡಾ.ರಾಜೇಂದ್ರಪ್ರಸಾದ್ ಪಿ, ಎಂಎಸ್‌ಡಬ್ಲೂ, ಪಿಹೆಚ್‌ಡಿ

ಹಿರಿಯ ಸಂಶೋಧಕರು-ಗ್ರಾಸ್‌ರೂಟ್ಸ್‌ ರಿಸರ್ಚ್‌ ಆಂಡ್‌ ಅಡ್ವಕಸಿ ಮೂವ್‌ಮೆಂಟ್‌, ಮೈಸೂರು

Tags: ಆದಿವಾಸಿಪರಿಶಿಷ್ಟ ಜಾತಿಬುಡಕಟ್ಟು ಜನಾಂಗ
Previous Post

ಮುಂಬೈಯಲ್ಲೊಬ್ಬ ಬಂಡಾಯ ಚಿತ್ರಗಾರ, ಅನಾಮಧೇಯತೆಯೇ ಈತನ ಅಸ್ತಿತ್ವ..

Next Post

ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ಪೀಠದಲ್ಲಿ ವಿಚಾರಣೆ ಆರಂಭಿಸಲು ಅರ್ಜಿ ಸಲ್ಲಿಸಿದ ಪ್ರಶಾಂತ್‌ ಭೂಷಣ್‌

Related Posts

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
0

ಉಗಾಂಡ ದೇಶದ ಜಿಟೊ ಕಿಡ್ಸ್ ಜೊತೆಗೆ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ . ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ...

Read moreDetails
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

November 2, 2025
ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 2, 2025
ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!

ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!

November 2, 2025
Next Post
ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ಪೀಠದಲ್ಲಿ ವಿಚಾರಣೆ ಆರಂಭಿಸಲು ಅರ್ಜಿ ಸಲ್ಲಿಸಿದ ಪ್ರಶಾಂತ್‌ ಭೂಷಣ್‌

ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ಪೀಠದಲ್ಲಿ ವಿಚಾರಣೆ ಆರಂಭಿಸಲು ಅರ್ಜಿ ಸಲ್ಲಿಸಿದ ಪ್ರಶಾಂತ್‌ ಭೂಷಣ್‌

Please login to join discussion

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.
Top Story

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

by ಪ್ರತಿಧ್ವನಿ
November 2, 2025
ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ
Top Story

ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ

by ಪ್ರತಿಧ್ವನಿ
November 2, 2025
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ
Top Story

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

by ಪ್ರತಿಧ್ವನಿ
November 2, 2025
ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!
Top Story

ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!

by ಪ್ರತಿಧ್ವನಿ
November 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada