2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲಕ್ಕೆ ಮೊದಲ ಹಂತದ ತೆರೆ ಬಿದ್ದಿದೆ. ಕಾಂಗ್ರೇಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, ರಾಗಾ ಈ ಬಾರಿಯೂ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.

ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಮತ್ತು ವಯನಾಡು ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ, ಅಮೇಥಿಯಲ್ಲಿ ಸೋತು ವಯನಾಡಲ್ಲಿ ಗೆಲುವು ಸಾಧಿಸಿದ್ದರು . ಈಗ ಅವರು ಮತ್ತೆ ಕೇರಳದಿಂದಲೇ ಲೋಕಸಭೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಆದ್ರೆ ಈ ಬಾರಿಯೂ ಅಮೇಥಿಯಿಂದ ಸ್ಪರ್ಧಿಸೋ ಮನಸ್ಸು ಮಾಡ್ತಾರಾ ?? ಆ ಬಗ್ಗೆ ಕಾಂಗ್ರೇಸ್ ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.

ಅಮೇಥಿ, ರಾಯ್ ಬರೇಲಿ ಜೊತೆಗೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು . ಅಮೇಠಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪರವಾಗಿ ಸ್ಪರ್ಧೆ ಮಾಡುತ್ತಿದ್ದರು . ತಾಯಿ 2004 ರಲ್ಲಿ ಚುನಾವಣೆಯಿಂದ ಹಿಂದೆ ಸರಿದ ನಂತರ , ಮಗ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗ್ತಾರೆ.

ಹೀಗೆ 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧೆ ಮಾಡಿ ಸುಮಾರು 55,000 ಮತಗಳ ಅಂತರದಿಂದ ಸೋಲನುಭವಿಸಬೇಕಾಯ್ತು. ಉತ್ತರ ಪ್ರದೇಶದ ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಅಮೇಥಿಯಲ್ಲಿ ಸ್ಮೃತಿ ಕೇಸರಿ ಪತಾಕೆ ಹಾರಿಸಿ ರಾಹುಲ್ ಗಾಂಧಿಗೆ ಶಾಕ್ ಕೊಟ್ಟಿದ್ರು.
ಈ ಸೋಲು ರಾಗಾ ಮೇಲಿನ ಟೀಕೆಗಳು ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಮೃತಿ ಮಂದನಾರನ್ನ ಎದುರಿಸಲಿದ್ದಾರಾ ಅಥವಾ ತಾವೇ ಹೆದರಿ ಫಲಾಯನ ಮಾಡಲಿದ್ದಾರಾ ಎಂಬ ಚರ್ಚೆ ಗರಿಗೆದರಿರುವಾಗ್ಲೇ ರಾಹುಲ್ ಗಾಂಧಿ ವೈಯನಾಡಿನಿಂದ ಸ್ಪರ್ಧೆ ಮಾಡೋದು ಖಿಚಿತವಾಗಿದ್ದು, ಅಮೇಥಿಯಿಂದ ರಾಗ ಹಿಂದೆ ಸರಿದ್ರಾ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.






