5ನೇ ಹಂತದ ಅನ್‌ಲಾಕ್ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ. ಅಕ್ಟೋಬರ್ 15ರ ನಂತರ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರಗಳಿಗೆ ಅವಕಾಶವನ್ನು ನೀಡಲಾಗಿದೆ. ಮಲ್ಟಿಪ್ಲೆಕ್ಸ್‌ಗಳು, ಸಿನಿಮಾ ಥಿಯೆಟರ್‌ಗಳನ್ನು ತೆರೆಯಲೂ ಅವಕಾಶ ನೀಡಲಾಗಿದೆ.
ಶಾಲೆಗಳನ್ನು ತೆರೆಯಲು ಅವಕಾಶ ನೀಡಿದ್ದರೂ, ಆನ್‌ಲೈನ್ ಶಿಕ್ಷಣಕ್ಕೆ ಸಾಧ್ಯವಾದಷ್ಟು ಒತ್ತು ನೀಡಬೇಕೆಂದು ಗೃಹ ಇಲಾಖೆ ತಿಳಿಸಿದೆ. ಶಾಲೆಗಳ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ ನಂತರ ಶಾಲೆಗಳನ್ನು ತೆರೆಯುವ ನಿರ್ಧಾರ ತೆಗೆದುಕೊಳ್ಳಬೇಕು ಹಾಗೂ ತೆರೆಯಲಾಗುವ ಶಾಲೆಗಳಲ್ಲಿ, ಕೋವಿಡ್ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿ ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಒಳಗೆ ಹಾಗೂ ಅಂತರ್‌ರಾಜ್ಯ ಪ್ರಯಾಣಕ್ಕೆ ರಾವುದೇ ನಿರ್ಬಂಧಗಳನ್ನು ವಿಧಿಸಬಾರದು ಎಂದು ಮಾರ್ಗಸೂಚಿ ಹೇಳಿದೆ. ಅಂತರ್‌ರಾಜ್ಯ ಸರಕು ಸಾಗಾಣಿಕೆಗಳಿಗೂ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬಾರದು ಎಂದು ಕೇಂದ್ರ ಹೇಳಿದೆ. ಇದಕ್ಕಾಗಿ ಯಾವುದೇ ರೀತಿಯ ವಿಶೇಷವಾದ ಪರವಾಣಿಗೆಯ ಅಗತ್ಯವಿಲ್ಲ ಎಂದು ಹೇಳಿದೆ.




ಇನ್ನು, ಅಂತರಾಷ್ಟ್ರೀಯ ವಿಮಾನ ಸೇವೆಗಳು ಅನ್‌ಲಾಕ್ 5 ರಲ್ಲಿ ಆರಂಭವಾಗುವುದಿಲ್ಲ. ಗೃಹ ಇಲಾಖೆ ಸೂಚಿಸಿದ ವಿಮಾನಗಳನ್ನು ಹೊರತುಪಡಿಸಿ ಬೇರಾವ ವಿಮಾನಗಳು ಕಾರ್ಯಾಚರಣೆಯನ್ನು ಆರಂಭಿಸಲು ಅನುಮತಿ ನೀಡಲಾಗಿಲ್ಲ.
ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದ ಅನುಮತಿಯಿಲ್ಲದೇ ಲಾಕ್‌ಡೌನ್ ಹೇರುವುದನ್ನು ಕೂಡಾ ನಿರ್ಬಂಧಿಸಲಾಗಿದೆ.











