ಮೇ 26ರ ಸಂಜೆ 5 ಗಂಟೆಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ರಾಜ್ಯದಲ್ಲಿ 101 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ 101 ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 2,283 ತಲುಪಿದೆ. ಇದುವರೆಗೂ 748 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 44 ತಲುಪಿದೆ. ಸಕ್ರಿಯವಾಗಿರುವ 1489 ಪ್ರಕರಣದಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಒಟ್ಟು ಪ್ರಕರಣದಲ್ಲಿ 81 ಪ್ರಕರಣಗಳು ಅಂತರಾಜ್ಯ ಮೂಲದಿಂದ ಬಂದವು. 4 ಪ್ರಕರಣಗಳು ಅಂತರಾಷ್ಟ್ರೀಯ ಪ್ರಯಾಣದ ಹಿನ್ನಲೆ ಹೊಂದಿದೆ. ರಾಜ್ಯದಲ್ಲಿ ಇದುವರೆಗೂ 2,28,914 ಮಂದಿಯನ್ನು ಪರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಪತ್ತೆ ಮಾಡಲಾಗಿರುವ 2283 ಪ್ರಕರಣಗಳಲ್ಲಿ 9 ಪ್ರಕರಣಗಳು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಅವರಿಗೆ ಕರ್ನಾಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.