ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ಅವರನ್ನು ಕರಿಯಾ ಕುಮಾರಸ್ವಾಮಿ ಎಂದು ವರ್ಣ ನಿಂದನೆ ಮಾಡಿದ್ದಕ್ಕೆ ಮೈಸೂರಿನಲ್ಲಿ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರು ನಿಮಗೆ ಅವಕಾಶ ಕೊಟ್ಟರಲ್ಲ ಅವಾಗ ಕುಮಾರಸ್ವಾಮಿ ಅವರ ಬಣ್ಣ ಗೊತ್ತಾಗಲಿಲ್ವಾ..? ಮೆಕ್ಕಾಗೆ ಹೋಗುವಾಗ ನಿಮ್ಮ ತಾಯಿ ಆಶೀರ್ವಾದ ಪಡೆಯುವ ಜೊತೆಗೆ ಕುಮಾರಣ್ಣನ ಕಾಲಿಗೆ ಬಿದ್ದು ಹೋದರಲ್ಲ, ಅವಾಗ ಅವರ ಬಣ್ಣ ಗೊತ್ತಿರಲಿಲ್ಲಾ..? ಬಣ್ಣ ತಂದೆ ತಾಯಿಯಿಂದ ಬರುವ ಬಳುವಳಿ. ನಾವೆಲ್ಲರೂ ಪೂಜಿಸುವ ದೇವರು ವಿಷ್ಣು, ಕೃಷ್ಣ, ರಾಮ ಎಲ್ಲರೂ ಕಪ್ಪು ಬಣ್ಣ. ನಾವೆಲ್ಲರೂ ಮೂಲತಃ ದ್ರಾವಿಡರು ಎಂದಿದ್ದಾರೆ. ಇನ್ನು ನಿಮ್ಮ ಮೆಕ್ಕಾ ಮದಿನದಲ್ಲಿರುವ ಕಾಬ ಬಣ್ಣ ಯಾವುದು.? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಬಣ್ಣದ ಬಗ್ಗೆ ಲಘುವಾಗಿ ಮಾತನಾಡಿದ್ದ ಸಚಿವ ಜಮೀರ್ ವಿರುದ್ಧ ನಾಗಮಂಗಲದ ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಮಾಜಿ ಶಾಸಕ ಸುರೇಶ್‌ಗೌಡ, ಸಚಿವರು ತಮ್ಮ ತೆವಲಿಗೆ ರಾಜಕಾರಣವನ್ನ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ. ಜನ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ. ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರನ್ನ ಹಿಡಿತದಲ್ಲಿ ಇಟ್ಕೊಳ್ಳಬೇಕು. ಸರ್ಕಾರ ಇಷ್ಟೊತ್ತಿಗೆ ಸುಮೋಟೊ ಕೇಸ್ ದಾಖಲು ಮಾಡಬೇಕಿತ್ತು. ಬೇರೆಯವರಿಗೆ ಭಯ ಬರುವಂತೆ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕರಿಯಾ ಕುಮಾರಸ್ವಾಮಿ ಎಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಮೈಸೂರಿನಲ್ಲಿ ಕ್ಷಮೆ ಕೇಳಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ. ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ಪ್ರೀತಿಯಿಂದ ಅವರು ಕುಳ್ಳ ಎಂದಾಗ ನಾನು ಪ್ರೀತಿಯಿಂದಲೇ ಕರಿಯಣ್ಣ ಎನ್ನುತ್ತಿದ್ದೆ. ಅದನ್ನಷ್ಟೇ ಹೇಳಿದ್ದೇನೆ. ಅವರ ಮೇಲೆ ಗೌರವವಿದೆ ಎಂದಿದ್ದಾರೆ.
ಚನ್ನಪಟ್ಟನದಲ್ಲಿ ಜಮೀರ್ ನೀಡಿದ್ದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಸಾಧ್ಯತೆ ಇರುವ ಕಾರಣದಿಂದ ಕಾಂಗ್ರೆಸ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಹೀಗಾಗಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ಜಮೀರ್ ಅಹ್ಮದ್ ಖಾನ್ ಕ್ಷಮೆ ಕೋರಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಅಷ್ಟೇ ಸ್ಪಷ್ಟನೆ ನೀಡಿದ್ದ ಜಮೀರ್ ಕ್ಷಮಾಪಣೆ ಕೇಳಿರಲಿಲ್ಲ. ಆದರೆ ಒಂದು ದಿನದಲ್ಲಿ ಕರಿಯಾ ಕುಮಾರಸ್ವಾಮಿ ಅನ್ನೋ ಹೇಳಿಕೆಯ ಎಫೆಕ್ಟ್ ಕಾಂಗ್ರೆಸ್‌ಗೆ ಅರ್ಥ ಆಗಿದೆ ಎನ್ನಲಾಗ್ತಿದೆ. ನಾಳಿನ ಮತದಾನದಲ್ಲಿ ಹೆಚ್ಚು ಕಡಿಮೆ ಆದರೆ ಖಂಡಿತವಾಗಿಯೂ ಜಮೀರ್ ಕಾರಣ ಅನ್ನೋ ಕೂಗು ಚನ್ನಪಟ್ಟಣ ಕಾಂಗ್ರೆಸ್‌ನಲ್ಲಿ ಕೇಳಿ ಬರ್ತಿದೆ. ಇದೇ ಕಾರಣಕ್ಕೆ ಜಮೀರ್ ಕ್ಷಮೆ ಕೇಳಿದ್ದಾರೆ.