ಯ್ಯೂಟುಬ್‌ದಲ್ಲಿ ವಿಡಿಯೋ ಮಾಡ್ತಾ ಜನಸಾಮಾನ್ಯರಲ್ಲಿ ಗುರುತಿಸಿಕೊಂಡಿದ್ದ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್, ಮತ್ತು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಗಳನ್ನು ಹುಡುಕುತ್ತಿದ್ದೇವೆ. ಅವರನ್ನು ಹಿಡಿದು ತನಿಖೆ ಮಾಡುತ್ತೇವೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನ್ ಎನ್ ಶಶಿಕುಮಾರ್ ಹೇಳಿದರು.

ಈಗಾಗಲೇ ಹುಡುಗಿ ತಂದೆ ತಾಯಿ ದೂರು ನೀಡಿದ್ದಾರೆ. ಅದನ್ನು ಪರಿಗಣಿಸಿ ತನಿಖೆ ಮಾಡುತ್ತೇವೆ. ಆ ಹುಡುಗಿ ಎಲ್ಲೊ ಇದ್ದು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಅವರ ಹುಟುಕಾಟ ಆರಂಭವಾಗಿದೆ. ಸಿಕ್ಕ ನಂತರ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದರು.

ಪ್ರವಾದಿ ಮೊಹಮ್ಮದ ಪೈಗಂಬರ್ ರವರ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹಗಳು ಗದಗನಲ್ಲಿ ನಡೆಸಲಾಯಿತು. ನಗರದ ವಿವೇಕಾನಂದ ರಸ್ತೆಯಲ್ಲಿರುವ ಈದಗಾ ಮೈದಾನದಲ್ಲಿ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅದ್ಯಕ್ಷತೆಯನ್ನು NWKRTC ಉಪಾಧ್ಯಕ್ಷ ಪೀರಸಾಬ ಕೌತಾಳ್ ವಹಿಸಿದ್ರು. ಗದಗನ ವೀರೇಶ್ವರ ಪುಣ್ಯಾಶ್ರಮದ ಪಿಠಾಧೀಪತಿಗಳಾದ ಕಲ್ಲಯ್ಯಜ್ಜನವರು ಹಾಗೂ ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅವರು ದಿವ್ಯ ಸಾನಿಧ್ಯ ವಹಿಸಿದ್ರು. ಮುಖ್ಯ ಅತೀಥಿಗಳಾಗಿ ಮಾಜಿ ಶಾಸಕರಾದ ಡಿ ಆರ್ ಪಾಟೀಲ್, ಮೊಹಮ್ಮದ ನಿಜಾಮುದ್ದೀನ್ ಖಾಸ್ತ್ರೀ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ ಸೇರಿದಂತೆ ಧರ್ಮ ಗುರುಗಳು ಹಾಗೂ ಗಣ್ಯರು ಭಾಗಿಯಾಗಿದ್ರು. ಸುಮಾರು 30 ಕ್ಕೂ ಅಧಿಕ ಹಿಂದೂ-ಮುಸ್ಲಿಂ ಜೋಡಿಗಳ ವಿವಾಹವನ್ನು ಅವರ ಧರ್ಮಗುರುಗಳ ಸಮ್ಮುಖದಲ್ಲಿ ನೆರವೆರಿಸಲಾಯ್ತು. ಹಿಂದೂ ಜೋಡಿಗಳ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ಮಂತ್ರ ಹೇಳಿ ವಧುಗಳಿಗೆ ತಾಳಿ ಕಟ್ಟಿಸಲಾಯ್ತು. ಇನ್ನು ಮುಸ್ಲಿಂ ಸಮುದಾಯದ ಮುದುಮಕ್ಕಳಿಗೆ ಅವರ ಧರ್ಮ ಗುರುಗಳ ಮೂಲಕ ಮುಸ್ಲಿಂ ಸಂಪ್ರದಾಯದಂತೆ ವಿವಾಹ ಮಾಡಿಸಲಾಯ್ತು. ಒಟ್ನಲ್ಲಿ ಸಂತ ಶರಣರು ಓಡಾಡಿದ ಈ ನೆಲದಲ್ಲಿ ಜಾತಿ-ಧರ್ಮ ಅಂತ ಕಿತ್ತಾಡುವ ಮನಸುಗಳಿಗೆ ಈ ಸಾಮೂಹಿಕ ಮದುವೆ ಮಾದರಿಯಾಯಿತು.