ಇಡೀ ಜಗತ್ತೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ಚಿತ್ರ ಎಂದರೆ ಅದು ಕೆ.ಜಿ.ಎಫ್ ಚಾಪ್ಟರ್-2 ಈ ಚಿತ್ರವನ್ನು ನೋಡಿದ ಅನೇಕರು ನಾಯಕನ ಪಾತ್ರಕ್ಕೆ ಪ್ರಭಾವಿತರಾಗಿವುದು ಉಂಟು. ಅದರೆ, ಇಲ್ಲಿ ಬಾಲಕನೋರ್ವ ಪ್ರಭಾವಿತನಾಗಿ ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ಹೈದರಾಬಾದಿನಲ್ಲಿ ಬಾಲಕನೋರ್ವ ಕೆಜಿಏಪ್ 2 ಚಿತ್ರವನ್ನ ಮೂರು ಭಾರೀ ವೀಕ್ಷಿಸಿ ರಾಕಿ ಭಾಯ್ ಪಾತ್ರಕ್ಕೆ ಪ್ರಭಾವಿತನಾಗಿ ಒಂದು ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ್ದಾನೆ.
ನಾಯಕನ ಪಾತ್ರಕ್ಕೆ ಪ್ರಭಾವಿತನಾದ ಬಾಲಕ ನಿರಂತರವಾಗಿ ಒಂದು ಪ್ಯಾಕ್ ಸಿಗರೇಟ್ ಸೇದಿದ್ದಾನೆ ನಂತರ ತೀವ್ರ ಗಂಟಲು ನೋವು ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಗಮನಿಸಿದ ಪೋಷಕರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ ಸೂಕ್ತ ಚಿಕಿತ್ಸೆ ನೀಡಿದ ನಂತರ ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಶ್ವಾಸಕೋಶ ತಜ್ಞ ರೋಹಿತ್ ರೆಡ್ಡಿ ಸಿನಿಮಾಗಳು ಸಮಾಜದ ಮೇಲೆ ಹೆಚ್ಚು ಪ್ರಭಾವವನ್ನ ಬೀರುತ್ತವೆ ಸಿಗರೇಟ್, ತಂಬಾಕು ಹಾಗು ಂದ್ಯ ಸೇವನೆಯಂತಹ ದೃಶ್ಯಗಳನ್ನು ವೈಭವೀಕರಿಸಬಾರದು. ಇಂತಹ ವಿಚಾರಗಳ ಬಗ್ಗೆ ಚಿತ್ರತಂಡದವರು ಎಚ್ಚರ ವಹಿಸಬೇಕು ಎಂದಿದ್ದಾರೆ.
ಬಾಲಕನ ವಿಚಾರಕ್ಕೆ ಬಂದರೆ ಅವನು ರಾಕಿ ಭಾಯ್ ಪಾತ್ರಕ್ಕೆ ಪ್ರಭಾವಿತನಾಗಿ ಈ ಕೆಲಸ ಮಾಡಿದ್ದಾನೆ. ಅವನಿಗೆ ಆಪ್ತ ಸಮಾಲೋಚಕರು ತಿಳಿಹೇಳಿದ್ದು ಮುಂದೆ ಈ ರೀತಿ ಮಾಡದಂತೆ ತಿಳುವಳಿಕೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.