ಅನೇಕ ಉಚ್ಚ ನ್ಯಾಯಾಲಯದ ವಿಚಾರಣೆಗಳನ್ನು ಈಗ ವೆಬ್ಕಾಸ್ಟ್ ಮಾಡಲಾಗುತ್ತಿದೆ. ಆನ್ಲೈನ್ ಮೂಲಕ ವಿಚಾರಣೆಗಳನ್ನು ಈಗ ವೀಕ್ಷಿಸಬಹುದಾಗಿದೆ. ನ್ಯಾಯಾಲಯದ ವಿಚಾರಣೆಗಳ ಕ್ಲಿಪ್ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತವಾಗಿದ್ದು, ಅದರ ಒಂದಷ್ಟು ತುಣುಕುಗಳು ಹಾಗಾಗಿಯೇ ಟ್ವೀಟರ್ ನಲ್ಲಿ ಹೊರಬರುತ್ತಿರುತ್ತವೆ. ಪಾಟ್ನಾ ಹೈಕೋರ್ಟ್ನಿಂದ ಅಂತಹ ಒಂದು ಕ್ಲಿಪ್ ಶನಿವಾರ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಬಿಹಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆನಂದ್ ಕಿಶೋರ್ ಅವರು ಬಿಳಿ ಶರ್ಟ್ನಲ್ಲಿ ತೆರೆದ ಕಾಲರ್ನೊಂದಿಗೆ ಹಾಜರಾಗಿದ್ದಕ್ಕಾಗಿ ಪಾಟ್ನಾ ಹೈಕೋರ್ಟ್ನ ನ್ಯಾಯಾಧೀಶರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನ್ಯಾಯಾಲಯದಲ್ಲಿ ನೀವು ಯಾವ ಡ್ರೆಸ್ ಕೋಡ್ ಧರಿಸಬೇಕೆಂದು ನಿಮಗೆ ತಿಳಿದಿಲ್ಲವೇ? ನೀವು ಮಸ್ಸೂರಿಯಲ್ಲಿ ಐಎಎಸ್ ತರಬೇತಿ ಶಾಲೆಗೆ ಹೋಗಲಿಲ್ಲವೇ?” ಎಂದು ಐಎಎಸ್ ಅಧಿಕಾರಿಯ ನ್ಯಾಯಾಧೀಶರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಎರಡು ನಿಮಿಷಗಳ ಕ್ಲಿಪ್ನಲ್ಲಿ ಕೇಳಿದ್ದಾರೆ.

“ಇದೇನು? ಬಿಹಾರ ರಾಜ್ಯದಲ್ಲಿ ಐಎಎಸ್ ಅಧಿಕಾರಿಳಿಗೆ ಏನಾಗಿದೆ? ನ್ಯಾಯಾಲಯಕ್ಕೆ ಹೇಗೆ ಹಾಜರಾಗಬೇಕೆಂದು ಅವರಿಗೆ ತಿಳಿದಿಲ್ಲವೇ? ಕೋಟ್ನಲ್ಲಿ ಫಾರ್ಮಲ್ ಡ್ರೆಸ್ ಎಂದರೆ ಕನಿಷ್ಠ ಕಾಲರ್ ಬಟನ್ ಹಾಕಿರಬೇಕು,” ಎಂದು ತಿಳಿದಿಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದದಾರೆ.
ಬೇಸಿಗೆಯಲ್ಲಿ ಕೋಟ್ ಧರಿಸಲು ಯಾವುದೇ ಅಧಿಕೃತ ಕೋಡ್ ಇಲ್ಲ ಎಂದು ಹೇಳುವ ಮೂಲಕ ಆನಂದ್ ಕಿಶೋರ್ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾದರೂ, “ನೀವು ನ್ಯಾಯಾಲಯಕ್ಕೆ ಬಂದಾಗ ಸರಿಯಾದ ಡ್ರೆಸ್ ಕೋಡ್ ಇರಬೇಕು. ಇದು ಸಿನಿಮಾ ಹಾಲ್ ಅಂದುಕೊಂಡಿದ್ದೀರ?” ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.






