
ಅವಳ ಸಹೋದರನ ರಾಜಕಾರಣದ ಏಳು ಬೀಳುಗಳೊಂದಿಗೆ ನಿಂತವಳು. ಸಾಂಕೇತಿಕವಾಗಿ ಪ್ಯಾಲೇಸ್ಟೇನ್ ಹೆಸರು ಅಚ್ಚಾಗಿದ್ದ ಬ್ಯಾಗ್ ಒಂದನ್ನು ಒಯ್ಯುವ ನಂತರ ಬಾಂಗ್ಲಾದೇಶದ ಹೆಸರಿದ್ದ ಬ್ಯಾಗ್ ಒಯ್ಯುವ ಆಕೆಯ ನಿಲುವನ್ನು ನೀವೆಲ್ಲಾ ಪ್ರಶಂಶಿಸಲೇಬೇಕು. ರಾಜಕೀಯ ಪಕ್ಷಕಗಳು ತಮ್ಮ ಅಸ್ಥಿತ್ವಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು (Priyanka Gandhi Vadra) ಹೆಗ್ಗುರುತಾಗಿಸಿಕೊಂಡಿದ್ದಾರೆ. ಅನೇಕಾನೇಕ ವಿವಾದಗಳೊಂದಿಗೆ ಪ್ರತಿಯೊಬ್ಬರೂ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ.
ಈ ಸಂದರ್ಭದಲ್ಲಿ ನಾನೊಂದು ನೈಜ ಘಟನೆಯನ್ನು ನೆನಪುಮಾಡಿಕೊಡುತ್ತೇನೆ. ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಾಮನಿರ್ದೇಶನ ಮಾಡಲು (Congress) ಅಲ್ಲಿಗೆ ತೆರಳುವ ಮುನ್ನ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ, ಮಾಜಿ ಎ ಐ ಸಿ ಸಿ ಅಧ್ಯಕ್ಷರೂ ಆಗಿದ ಶ್ರೀ ನಿಜಲಿಂಗಪ್ಪನವರ ಬಂಗಲೆಗೆ ಭೇಟಿ ನೀಡುವುದಾಗಿ ಸ್ಥಳೀಯ ಪೊಲೀಸರು ನಿಜಲಿಂಗಪ್ಪನವರಿಗೆ ಸುದ್ಧಿ ತಲುಪಿಸುತ್ತಾರೆ. ೯೮ ರ ಇಳಿವಯಸ್ಸಿನಲ್ಲಿ ಅವರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದ ಸಹಾಯಕರನ್ನು ವಿಶೇಷವಾಗಿ ಅವರ ಅಸಂಬಂಧಿ ಮಂಜು ಅವರನ್ನು ಬರಹೇಳಿದ ನಿಜಲಿಂಗಪ್ಪ ಅವರು ಬರುವ ಅತಿಥಿಗಳಾದ ಸೋನಿಯಾ, ಎಸ್.ಎಂ. ಕೃಷ್ಣ ಇನ್ನಿತರೆ ಅಧಿಕಾರಿಗಳಿಗೆ ಟೀ ಕೊಡಲು ಒಳ್ಳೇ ಕಪ್ ಸಾಸರ್ ಇದಿಯಾ ನೋಡು ಎಂದು ಹೇಳುತ್ತಾರೆ. ಇದ್ದ ನಾಲ್ಕೈದು ಕಪ್ ಸಾಸರ್ ಜೊತೆ ಇನ್ನೊಂದಷ್ಟು ತಂದು ಸ್ವಚ್ಛವಾಗಿಟ್ಟಿರಲು ಸೂಚಿಸುತ್ತಾರೆ. ಇಷ್ಟಲ್ಲದೆ ಅವರ ಸಣ್ಣ ಗ್ರಂಥಾಲಯದಲ್ಲಿ ಭಾರತದ ಸಂವಿಧಾನ ದ ಪ್ರತಿ ಇದೆಯಾ ನೋಡು ಎಂದು ಹೇಳುತ್ತಾರೆ. ಅಲ್ಲಿಯೇ ಇದ್ದ ಹಳೆಯ ಸಂವಿಧಾನದ ಪ್ರತಿಯನ್ನು ದೂಳೊಡೆದು ಟೇಬಲ್ ಮೇಲಿಡಲು ಸೂಚಿಸುತ್ತಾರೆ.

ಹಲವು ಗಣ್ಯರೊಂದಿಗೆ ಬಂದ ಸೋನಿಯಾ ಅವರನ್ನು ಕಂಡ ಕೂಡಲೇ ನಿಜಲಿಂಗಪ್ಪ ಅವರು ಸೋನಿಯಾ ಅವರ ಮಕ್ಕಳು ಮತ್ತು ಇಡೀ ಕುಟುಂಬದ ಕುಶಲೋಪರಿ ವಿಚಾರಿಸುತ್ತಾರೆ. ಗಾಂಧಿ ಮತ್ತು ಸರ್ಧಾರ ಪಟೇಲರ ಅನುಯಾಯಿಯಾದ ನಿಜಲಿಂಗಪ್ಪನವರು ಈ ರೀತಿಯಾಗಿ ಮಾತನಾಡುವುದು ಸಾಮಾನ್ಯ ಶೈಲಿಯಾಗಿತ್ತು! ಕ್ಷಣ ಕಾಲ ಮಾತು-ಕತೆ ಮುಗಿದ ಮೇಲೆ ಸಂವಿಧಾನದ ಪ್ರತಿಯನ್ನು ಕೈಗೆತ್ತಿಕೊಂಡ ನಿಜಲಿಂಗಪ್ಪ ಸೋನಿಯಾ ಅವರಿಗೆ ಬಳುವಳಿಯಾಗಿ ನೀಡುತ್ತಾರೆ. ಬಳಿಕ ಮ್ಯಾಡಮ್ ನೀವೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿದ್ದೀರಿ, ನಾನೂ ಅಧ್ಯಕ್ಷನಾಗಿದ್ದವನು, ಭಾರತದ ಜನರ ಬಗ್ಗೆ ಕಾಳಜಿ ಮಾಡುವ, ಸರ್ಕಾರದ ನೀತಿಗಳನ್ನು ರೂಪಿಸಲು ಚಿಂತಿಸಬೇಕಾದ ಜವಾಬ್ಧಾರಿಯುತ ಸ್ಥಾನವದು. ನಾವು ಕಾಂಗ್ರೆಸ್ಸಿಗರು ಈವರೆಗೆ ಸಂವಿಧಾನದ ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಊರ್ಜಿತ ಮಾಡಲು ಸೋತಿದ್ದೇವೆ. ಈಗ ನಿಮ್ಮ ಮುಂದೆ ಇದೊಂದು ಸವಾಲಿದೆ. ಕೇಂದ್ರ ಸರ್ಕಾರಗಳು ಸಂವಿಧಾನದ ಮೂಲಭೂತ ಹಕ್ಕುಗಳಿಗಿಂತಾ ಹೆಚ್ಚಾಗಿ ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಜಾರಿ ಮಾಡಲು ಬೇಕಾದ ನೀತಿಗಳನ್ನು ರೂಪಿಸುವಂತೆ ನೀವು ಮಾಡಬೇಕು. ಅದು ನಿಮ್ಮ ಜವಾಬ್ಧಾರಿ ಎಂದು ಹೇಳುತ್ತಾರೆ.

ಅಂದು ಸೋನಿಯಾ ಗಾಂಧಿ ಅವರಿಗೆ ನಿಜಲಿಂಗಪ್ಪ- ಸಂವಿಧಾನವನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಡೈರೆಕ್ಟೀವ್ ಪ್ರಿನ್ಸಿಪಲ್ಸ್ ಜಾರಿ ಮಾಡಬೇಕು ಎಂಬ ಪಾಠ ಮಾಡಿದ್ದರು. ಕೆಲವೇ ದಿನಗಳಲ್ಲಿ ಸೋನಿಯಾ ಅವರ ಇಟಲಿ ಪೌರತ್ವದ ಕುರಿತು ಕಾಂಟ್ರೊವರ್ಸಿ ಹೆಚ್ಚಾದಾಗ ನಿಜಲಿಂಗಪ್ಪ ಅವರು ಆಕೆ ಪ್ರಧಾನಿ ಆಗಲು ಸಂವಿಧಾನದ ತೊಡಕಿಲ್ಲ ಎಂಬ ವಿಷಯವನ್ನು ಪತ್ರಿಕೆಗಳಿಗೆ ಖುದ್ದು ಬಿಡುಗಡೆ ಮಾಡಿದ್ದರು. ಇಂಥ ಕಾಂಗ್ರೆಸ್ ನ ಇತಿಹಾಸವನ್ನು ಸುಲಭಕ್ಕೆ ಮರೆಯಲು ಸಾಧ್ಯವೇ…
