ನಾವು ನಕ್ಕಾಗ ಜನ ನೋಡುವುದು ನಮ್ಮ ಹಲ್ಲುಗಳನ್ನು.ನಮ್ಮ ಹಲ್ಲುಗಳು ಸ್ವಚವಾಗಿ ಇರಬೇಕು ಎಂದು ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ವಿವಿಧ ಬಗೆಯ ಪೇಸ್ಟ್ ಗಳನ್ನ ಬಳಸಿ ಹಲ್ಲುಜ್ಜುತ್ತಾರೆ..ಆದ್ರೆ ಕೆಲವರು ಎಷ್ಟೆ ಹಲ್ಲುಗಳನ್ನ ಗುಜ್ಜಿ ಸ್ವಚ್ಛ ಮಾಡಿದ್ರು ಹಳದಿ ಬೆಣ್ಣೆ ಹಾಗೆ ಇರುತ್ತದೆ..

ಹಲ್ಲುಗಳು ಹಳದಿ ಇದ್ದರೆ ನಗಲು ಮುಜುಗರ ಅಥವ ಹಿಂಜರಿಯುತ್ತಾರೆ..ಹಾಗು ಮುಖದ ಅಂದವನ್ನ ಕೆಡಿಸುತ್ತದೆ ಈ ಹಳದಿ ಹಲ್ಲುಗಳು..ನಿಮ್ಮ ಹಲ್ಲುಗಳು ಮುತ್ತಿನಂತೆ ಕಾಣ್ಬೇಕು ಬಿಳಿ ಆಗ್ಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ ನ ನೋಡಿ..
ನಿಂಬೆರಸ ಮತ್ತು ಬೇಕಿಂಗ್ ಸೋಡಾ,
ಹಳದಿ ಹಲ್ಲುಗಳನ್ನ ಬಿಳಿ ಹಲ್ಲುಗಳನ್ನಾಗಿ ಮಾಡುವುದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಗೆ ಅದಕ್ಕೆ ಬೇಕಾದಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹಲ್ಲಿಗೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ .ನಂತರ ಬೆಚ್ಚಗಿನ ನೀರಿನಿಂದ ಬಾಯಿ ತುಳಿಯುವುದರಿಂದ ಬೇಗನೆ ಹಳದಿ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಇದು ತುಂಬಾ ಹಿಂದಿನಿಂದಲೂ ಫಾಲೋ ಮಾಡ್ತಾ ಇರುವ ಒಂದು ಸಿಂಪಲ್ ಟಿಪ್ ಆಗಿದೆ..

ಇದ್ದಿಲು
ಇದ್ದಿಲು ಹಳದಿ ಹಲ್ಲುಗಳನ್ನ ಬಿಳಿ ಹಲ್ಲುಗಳನ್ನಾಗಿ ಮಾಡೋದಕ್ಕೆ ತುಂಬಾನೇ ಸಹಾಯ ಮಾಡುತ್ತೆ.ಹಿಂದಿನ ಕಾಲದಲ್ಲಿ ಇದ್ದಿಲನ್ನ ಟೂತ್ಪೇಸ್ಟ್ ಆಗಿ ಬಳಸುತ್ತಿದ್ದರು.ಹಲ್ಲು ಹುಳುಕು ಇದ್ದರೂ ನಿವಾರಣೆ ಮಾಡುತ್ತದೆ ಹಾಗೂ ಗಟ್ಟಿ ಮುಟ್ಟಾದ ಹಲ್ಲುಗಳು ನಮ್ಮದಾಗುತ್ತದೆ..

ಹಣ್ಣುಗಳ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆ ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆ ಅಥವಾ ನಿಂಬೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲಿಗೆ ಚೆನ್ನಾಗಿ ಉಜ್ಜಿ ನಂತರ ಎರಡು ನಿಮಿಷ ಬಿಟ್ಟು ನಿಮ್ಮ ಮೌತ್ ವಾಶ್ ಮಾಡಿ ಹಲ್ಲುಗಳನ್ನ ಉಜ್ಜೋದ್ರಿಂದ ಬಿಳಿ ಹಲ್ಲುಗಳು ನಿಮ್ಮದಾಗುತ್ತದೆ. ಯಾಕೆ ಅಂತ ಹೇಳಿದ್ರೆ ಈ ಸಿಪ್ಪೆಗಳಲ್ಲಿ ಸಿಟ್ರಿಕ್ ಆಸಿಡ್ ಇರೋದ್ರಿಂದ ನಿಮ್ಮ ಹಲ್ಲುಗಳು ಸಹಾಯ ಮಾಡುತ್ತದೆ.

ಬೇವಿನಕಡ್ಡಿ
ಬೇವಿನ ಕಡ್ಡಿಯನ್ನು ಬಳಸಿ ಹಲ್ಲು ಉಜ್ಜಿದರೆ ಹಳದಿ ಹಲ್ಲುಗಳು ಬಿಳಿಯಾಗುವ ಅಂತಹ ಚಾನ್ಸಸ್ ಹೆಚ್ಚಿರುತ್ತೆ. ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಬ್ರಶ್ ಗಳು ಇರಲಿಲ್ಲ ಆ ಸಂದರ್ಭದಲ್ಲಿ ಬೇವಿನ ಕಡ್ಡಿಯನ್ನು ಉಪಯೋಗಿಸಿ ಹಲ್ಲುಗಳನ್ನು ಉಜ್ಜುತ್ತಾ ಇದ್ದರು. ಇಲ್ಲಿ ಹಲ್ಲುಗಳು ಉಜ್ಜುವುದರ ಜೊತೆಗೆ ವಸಡುಗಳು ಕೂಡ ಗಟ್ಟಿಯಾಗುತ್ತವೆ, ಜೊತೆಗೆ ಕೆಟ್ಟ ವಾಸನೆಯನ್ನು ಕೂಡ ಇದು ತಡೆಯುತ್ತದೆ ಇನ್ನು ಬ್ಯಾಕ್ಟಿರಿಯ ವಿರುದ್ಧ ಕೂಡ ಹೋರಾಡುತ್ತದೆ.

ಇದಲ್ಲದರ ಜೊತೆಗೆ ದಿನಕ್ಕೆ ನೀವು ಎರಡು ಬಾರಿ ಬ್ರಷ್ ಮಾಡಬೇಕು ಬೆಳಗ್ಗೆ ಎದ್ದ ತಕ್ಷಣ ಜೊತೆಗೆ ರಾತ್ರಿ ಮಲಗುವುದಕ್ಕಿಂತ ಮುಂಚೆ. ಹೀಗೇ ಮಾಡುವುದರಿಂದ ಹಳದಿ ಹಲ್ಲು ಬಿಳಿಯಾಗುತ್ತದೆ.ಇದರ ಜೊತೆಗೆ ನಿಮ್ಮ ಹಲ್ಲಿನಲ್ಲಿ ಇರುವಂತಹ ಬ್ಯಾಕ್ಟೀರಿಯವನ್ನ ತೊಡೆದು ಹಾಕುತ್ತದೆ.