ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ದಿನದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೆಲವು ಸಚಿವರು ಅಸಮಧಾನ ವ್ಯಕ್ತಪಡಿಸಿದ್ದರು. ಕೆಲವು ದಿನದ ಹಿಂದೆ ಸಂಪುಟಕ್ಕೆ ಹೊಸದಾಗಿ ಏಳು ಜನ ಸಚಿವರನ್ನು ನೇಮಕ ಮಾಡಿಕೊಂಡು ಖಾತೆಯನ್ನು ನೀಡಲಾಗಿತ್ತು. ಈ ವೇಳೆ ಹಳಬರ ಖಾತೆ ಅದಲು ಬದಲುಗೊಂಡಿತ್ತು. ಈ ಬೆಳವಣಿಗೆಯ ವಿರುದ್ಧ ಸಚಿವರು ಅಸಮಾಧಾನ ಹೊರಹಾಕಿದ ಬೆನ್ನಲೆ, ಸಿಎಂ ಈ ವಿಚಾರ ಗಂಭೀರವಾಗಿ ಪರಿಗಣಿಸಿ ಮತ್ತೆ ಕೆಲವರ ಖಾತೆ ಬದಲಾಯಿಸಿದ್ದಾರೆ.
ಈ ಹಿಂದೆ ಆರೋಗ್ಯ ಮತ್ತು ವೈದ್ಯಕೀಯ ಖಾತೆಯನ್ನು ಸಚಿವ ಸುಧಾಕರ್‌ಗೆ ನೀಡಲಾಗಿತ್ತು. ಹೊಸಬರಿಗೆ ಖಾತೆ ಹಂಚಿಕೆ ವೇಳೆ ಸಚಿವ ಸುಧಾಕರ್ ಬಳಿಯಿದ್ದ ವೈದ್ಯಕೀಯ ಖಾತೆ ಕೈತಪ್ಪಿತ್ತು. ಈ ಸಂಬಂಧ ಸಚಿವ ಸುಧಾಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ವೈದ್ಯಕೀಯ ಖಾತೆ ಸುಧಾಕರ್ ಕೈ ಸೇರಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಸಚಿವರಾಗಿ ಮುಂದುವರೆದಿದ್ದಾರೆ.
ಮಾಧುಸ್ವಾಮಿಯ ಖಾತೆಕೂಡ ಬದಲಾವಣೆಗೊಂಡಿದ್ದರಿಂದ ಮುಖ್ಯಮಂತ್ರಿ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದಲ್ಲದೆ. ರಾಜೀನಾಮೆ ನೀಡುದಾಗಿ ಹೇಳಿದ್ದರು. ಹಿಂದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗು ಸಣ್ಣ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿಗೆ ಖಾತೆ ಬದಲಾವಣೆಗೊಂಡಾಗ ವೈದ್ಯಕೀಯ ಶಿಕ್ಷಣ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಬ್ದಾರಿ ನೀಡಲಾಗಿತ್ತು. ಇದು ಮಾಧುಸ್ವಾಮಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರವಾಸೋದ್ಯಮ ಮತ್ತು ಪರಿಸರ ವಿಜ್ಞಾನ ಖಾತೆ ನೀಡಿದ್ದ ಆನಂದ್‌ಸಿಂಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಜ್, ವಕ್ಫ್ ಖಾತೆಕೊಟ್ಟು ಅಸಮಾಧಾನಗೊಂಡ ಸಚಿವ ಮಾಧುಸ್ವಾಮಿಗೆ ಪ್ರವಾಸೋದ್ಯಮ ಮತ್ತು ಪರಿಸರ ವಿಜ್ಞಾನ ಖಾತೆ ನೀಡಿ ಸಚಿವರ ಅಸಮಾಧಾನವನ್ನು ಸಿಎಂ ಯಡಿಯೂರಪ್ಪ ತೃಪ್ತಿಪಡಿಸಿದ್ದಾರೆ.