ಬಿಜೆಪಿ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ಥ್ರೋ ತರ ಬಳಸಿಕೊಂಡಿದೆ. ಬಿಜೆಪಿ ಕೃತಜ್ಞತೆ ಇಲ್ಲದ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರ ಬಗ್ಗೆ ಟೀಕಿಸಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಮೇಲ್ಮಟ್ಟದಲ್ಲಿರುವ ಆ ಇಬ್ಬರಿದ್ದಾರಲ್ಲ ಅವರು ಮಾರ್ವಾಡಿಗಳು. ಅವರು ವ್ಯಾಪಾರ ದೃಷ್ಟಿಯಿಂದಲೇ ನೋಡ್ತಾರೆ.
ಉಪಯೋಗಿಸಿಕೊಂಡ ಮೇಲೆ ಮೂಲೆ ಗುಂಪು ಮಾಡ್ತಾರೆ. ಯಡಿಯೂರಪ್ಪ ನವರು ರಿಮೋಟ್ ಕಂಟ್ರೋಲ್ ಅಷ್ಟೇ. ಅವರ ಮಗನಿಗೂ 100% ಟಿಕೆಟ್ ಕೊಡಲ್ಲ.ವೀರಶೈವರು ಈಗಲಾದ್ರೂ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಬಿಜೆಪಯವರು ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಕೊಡಗಿನಲ್ಲಿ ಮುಸ್ಲಿಂ ಯುವಕನ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಅಸಹ್ಯಕರವಾದ ಸಂದೇಶಗಳನ್ನ ಹರಿಬಿಟ್ಟಿದ್ದಾರೆ. ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿರೋದು ಬಿಜೆಪಿ ಮುಖಂಡನ ಪುತ್ರ. ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪೊನ್ನಪ್ಪನ ಮಗ ದಿವಿನ್ ಬೂಪಯ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ. ಇವರು ಎಂಎಲ್ಸಿ ರವಿ ಕುಶಾಲಪ್ಪ, ಕೆಜಿ ಬೋಪಯ್ಯ ಮತ್ತು ಪ್ರತಾಪ್ ಸಿಂಹ ಅವರ ಆಪ್ತರಾಗಿದ್ದಾರೆ. ಇವರ ಕುಮ್ಮಕ್ಕಿನಿಂದ ಇಂತಹ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ..? ಎಂದು ಪ್ರಶ್ನಿಸಿದ್ದಾರೆ.
ಇದರ ಹಿಂದೆ ಇರುವ ಕುಮ್ಮಕ್ಕು ನೀಡುವ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಿ ದ್ವೇಷದ ರಾಜಕೀಯ ಮಾಡ್ತಾ ಇದ್ದಾರೆ ಇವರನ್ನು ಬಂಧಿಸಬೇಕು ಎಂದು ಎಂ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿಯವರ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಸುಳ್ಳು ಹೇಳುವುದನ್ನ ಬಿಡಬೇಕು. ನಾವು ಹಿಟ್ ಅಂಡ್ ರನ್ ಕೇಸ್ ಮಾಡಲ್ಲ. ಕಾಂಗ್ರೆಸ್ ಸರ್ಕಾರ 2015 ಮಾರ್ಚ್ 17 ರಂದೇ ಶಿಫಾರಸ್ಸು ಮಾಡಿತ್ತು. ಈಗ ನಾನು ಮಾಡಿದ್ದು ಅಂಥಾ ಪ್ರತಾಪ್ ಸಿಂಹ ಕೊಚ್ಚಿಕೊಳ್ತಾರೆ. ನಾನು ಪ್ರೆಸ್ ಮೀಟ್ ಮಾಡಿದ್ರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದೂರು ಕೊಡ್ತಿರಾ. ನಿಮಗೆ ಮಾನ ಇದ್ರೆ ತಾನೇ ಮಾನನಷ್ಟ ಆಗೋದು. ನಿಮ್ಮ ಸುಳ್ಳುಗಳನ್ನ ಪ್ರತಿದಿನ ಎಕ್ಸ್ಪೋಸ್ ಮಾಡುತ್ತೇವೆ ಎಂದು ಹರಿಹಾಯ್ದಿದ್ದಾರೆ.