ಕ್ರಿಸ್ಮಸ್ ರಜೆ ಹಾಗೂ ವರ್ಷಾಂತ್ಯ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರವಾಸಿಗರ ದಂಡೇ ಆಗಮಿಸುತ್ತಿದ್ದೆ. ಈಗಾಗಲೇ ಬಹುತೇಕ ಹೋಟೆಲ್‌ಗಳ ರೂಮ್‌ಗಳು ಭರ್ತಿಯಾಗಿದ್ದು ಪ್ರಮುಖವಾಗಿ ಅರಮನೆ , ಚಾಮುಂಡಿಬೆಟ್ಟ , ಮೃಗಾಲಯಕ್ಕೆ ಜನರು ಭೇಟಿ ನೀಡುತ್ತಿದ್ದಾರೆ.
ಇನ್ನು ಸಾಲು ಸಾಲು ರಜೆ ಹಿನ್ನಲೆ ಮೈಸೂರಿನ ಪ್ರಸಿದ್ದ ಸಂತ ಫಿಲೋಮಿನಾ ಚರ್ಚ್‌ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ಇದರ ಜೊತೆಗೆ ಮೃಗಾಲಯ , ಅರಮನೆಗೆ ಜನರು ಭೇಟಿ ನೀಡುತ್ತಿದ್ದಾರೆ.
ನ್ಯೂ ಇಯರ್ ಹಾಗೂ ಕ್ರಿಸ್ಮಸ್ ಅಂಗವಾಗಿ ಮೈಸೂರು ಅರಮನೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಅರಮನೆ ಆಡಳಿತ ಮಂಡಳಿಯಿಂದ 10 ದಿನ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಶನಿವಾರ ಸಂಜೆ 5 ಗಂಟೆಗೆ ಫ್ಲವರ್ ಶೋ ಉದ್ಘಾಟನೆಗೊಳ್ಳಲಿದೆ. ಈ ಬಾರಿ ವಿವಿಧ ಬಣ್ಣದ ಪುಷ್ಪಗಳಿಂದ ಹಲವು ಆಕೃತಿ ನಿರ್ಮಾಣವಾಗಿದ್ದು, ಪ್ರಮುಖವಾಗಿ 55 ಅಡಿ ಉದ್ದ, 12 ಅಡಿ ಅಗಲ, 28 ಅಡಿ ಎತ್ತರದ ಕಾಶಿ ವಿಶ್ವನಾಥ ದೇಗುಲ, ಸಾವಿತ್ರಿ ಬಾಯಿ ಫುಲೆ, ನಮೀಬಿಯಾದ ಆಮದಾಗಿರುವ ಚೀತಾಗಳು, ಜಯಚಾಮರಾಜ ಒಡೆಯರ್ ಜೊತೆ ಸರ್.ಎಂ.ವಿಶ್ವೇಶ್ವರಯ್ಯ ಸಂಭಾಷಣೆ ಮಾಡ್ತಿರುವ ಚಿತ್ರಗಳನ್ನು ಸಿದ್ಧಪಡಿಸಲಾಗಿದೆ. ಇನ್ನ ಪ್ರತಿ ನಿತ್ಯ ರಾತ್ರಿ 7 ರಿಂದ 9 ಗಂಟೆಯವರೆಗೆ ಅರಮನೆಗೆ ದೀಪಾಲಂಕಾರ ಇರಲಿದ್ದು, ಡಿಸೆಂಬರ್ 31ರಂದು ರಾತ್ರಿ 11 ರಿಂದ 12 ಗಂಟೆವರೆಗೆ ಪೊಲೀಸ್ ಬ್ಯಾಂಡ್ ನೆರವೇರಲಿದೆ. ಜೊತೆಗೆ ಹೊಸ ವರ್ಷಾಚರಣೆ ಪ್ರಯುಕ್ತ ಶಬ್ಧ ರಹಿತ ಪಟಾಕಿ ಸಿಡಿಸಲು ತೀರ್ಮಾನ ಮಾಡಲಾಗಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಮೃಗಾಲಯ ವಾರದ ರಜೆಯನ್ನು ರದ್ದು ಮಾಡಿದೆ. ಎಂದಿನಂತೆ ಮಂಗಳವಾರ ಕೂಡ ಜೂ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಇದ್ದು, ಮೃಗಾಲಯ ಜೊತೆ ಕಾರಂಜಿ ಕೆರೆಯೂ ಓಪನ್ ಇರಲಿದೆ. ಇನ್ನ ಪ್ರತಿ ಮಂಗಳವಾರ ಮೃಗಾಲಯ, ಕಾರಂಜಿ ಕೆರೆಗೆ ರಜೆ ಇರುತ್ತಿತ್ತು. ಆದ್ರೆ, ಕ್ರಿಸ್ಮಸ್, ನ್ಯೂ ಇಯರ್ ಹಿನ್ನೆಲೆ ಮೈಸೂರಿನತ್ತ ಪ್ರವಾಸಿಗರು ಆಗಮಿಸುತ್ತಿದ್ದು, ರಜಾ ದಿನವೂ ಮೃಗಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ.