ಇದು ಆ್ಯಪ್ ಯುಗ. ತಿನ್ನೋ ಊಟದಿಂದ ಹಿಡಿದು ಹಾಕೋ ಬಟ್ಟೆಯವರೆಗೂ ಸಿಟಿ ಜನ ಆ್ಯಪ್‌ಗಳ ಮೇಲೆ ಜಮರು ಡಿಪೆಂಡ್ ಆಗಿದ್ದಾರೆ. ಅದ್ರಲ್ಲೂ ಆಟೋ ಅಂದ ಕೂಡಲೇ, ನಾಲಗೆಯಿಂದ ಹೊರಡೋ ಮಾತೇ ಓಲಾ ಉಬರ್. ಈ ದೈತ್ಯ ಸಂಸ್ಥೆಗಳಿಗೆ ಇದೀಗ ಟಕ್ಕರ್ ಕೊಡೋಕೆ ಹೊಸ ಆ್ಯಪ್ ರೆಡಿಯಾಗ್ತಿದೆ. ಆಶ್ಚರ್ಯ ಅಂದ್ರೆ ಈ ಆ್ಯಪ್ ಶುರು ಮಾಡ್ತಿರೋದೆ ಆಟೋ ಚಾಲಕರು.
ರಾಜಧಾನಿ ಬೆಂಗಳೂರು ಟ್ರಾನ್ಸ್‌ಪೋರ್ಟೇಷನ್ ವಿಚಾರದಲ್ಲಿ ಸಾಕಷ್ಟು ಹೆಗ್ಗಳಿಕೆ ಪಡೆದುಕೊಂಡಿದೆ. ಅದ್ರಲ್ಲೂ ಆಟೋ ಸರ್ವೀಸ್ ಕೊಡ್ತಿರೋ ಓಲಾ ಊಬರ್‌ಗೆ ಸಿಟಿ ಜನ ಅಡಿಕ್ಟ್ ಆಗಿದ್ದಾರೆ. ಆದ್ರೆ ಓಲಾ ಉಬರ್ ಪ್ರಯಾಣಿಕರಿಗೆ ಟೋಪಿ ಹಾಕ್ತಿರೋ ವಿಚಾರ ಬಟಾಬಯಲಾಗಿದೆ. ಆರ್‌ಟಿಓ ಕಾನೂನನ್ನು ಪಾಲಿಸದೆ ಎರಡು ಕಿ.ಮೀ. ಡಿಸ್ಟೆನ್ಸ್‌ಗೂ ನೂರು ರೂಪಾಯಿ ಚಾರ್ಜ್ ಮಾಡ್ತಿರೋ ಬಗ್ಗೆ ದೂರುಗಳು ಕೇಳಿ ಬರ್ತಿದೆ. ಕೇವಲ ಪ್ರಯಾಣಿಕರು ಮಾತ್ರವಲ್ಲ. ಸದ್ಯ ಆಟೋ ಚಾಲಕರು ಕೂಡಾ ಓಲಾ ಉಬರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಮಗಂತೂ ಇವ್ರ ಸಹವಾಸ ಬೇಡ ಅಂತ ತಮ್ಮದೇ ಆ್ಯಪ್ ಶುರು ಮಾಡ್ತಿದ್ದಾರೆ. ಅದೇ ನಮ್ಮ ಯಾತ್ರೆ ಆ್ಯಪ್.
ನಮ್ಮ ಯಾತ್ರೆ ಆ್ಯಪ್‌ನಲ್ಲಿ ನೇರವಾಗಿ ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ಸಂಪರ್ಕ ಇರುತ್ತೆ. ಮಿನಿಮಮ್ 40 ರೂ.ನಿಂದ ಗ್ರಾಹಕರು ಆಟೋ ಬುಕ್ ಮಾಡಬಹುದು. ಒಬ್ಬ ಚಾಲಕ ಪಿಕಪ್ ಚಾರ್ಜ್ ಅಂತ 30 ರೂ.ವರೆಗೂ ಮಾತ್ರ ಏರಿಸಬಹುದು. ಅದಕ್ಕೂ ಮೇಲೆ ಏರಿಸಲು ಸಾಧ್ಯವಿಲ್ಲ. ಪ್ರಯಾಣಿಕರಿಗೆ ಚಾಲಕರು ನೀಡುವ ಹಣದ ಮಾಹಿತಿ ನೇರವಾಗಿ ಸಿಗಲಿದೆ. ಆ್ಯಪ್‌ನಲ್ಲಿ ಪ್ರಯಾಣಿಕರೇ ಕಡಿಮೆ ದರ ತೋರಿಸುವ ಚಾಲಕರನ್ನು ಆಯ್ಕೆ ಮಾಡಿಕೊಳ್ಳಬಹುದು.

ನವೆಂಬರ್ 1 ರಿಂದ ಜನರಿಗೆ ನಮ್ಮ ಯಾತ್ರೆ ಆ್ಯಪ್ ಪ್ರಯಾಣಿಕರ ಸೇವೆಗೆ ಸಿಗಲಿದೆ. ಈ ಆ್ಯಪ್ ಬಳಸಿ ಪ್ರಯಾಣಿಕರು ಅತಿ ಕಡಿಮೆ ಬೆಲೆಯಲ್ಲಿ ಡೆಸ್ಟಿನೇಷನ್ ರೀಚ್ ಆಗಬಹುದು. ಯಾಕೆಂದ್ರೆ, ಇಲ್ಲಿ ಮಧ್ಯವರ್ತಿಗಳು ಇರೋದಿಲ್ಲ. ಎರಡು ಕಿ.ಮೀ.ದೂರದ ಪ್ರಯಾಣಕ್ಕೆ 40 ರೂಪಾಯಿ ಕೊಟ್ರೆ ಸಾಕಾಗುತ್ತೆ. 30 ರೂ ಮೀಟರ್ ಚಾರ್ಜ್ ಆದ್ರೆ 10 ರೂ ಪಿಕ್ ಅಪ್ ಚಾರ್ಜ್ ಕೊಡಬೇಕಾಗುತ್ತೆ ಪ್ರಯಾಣಿಕರಿಗೆ ಸುಲಿಗೆ ಮಾಡಬಾರದು ಎಂದು ಕೊಕ್ಕೆ ಹಾಕಲಾಗಿದೆ. ಒಟ್ಟಾರೆ ತಮ್ಮದೇ ಹೊಸ ಆ್ಯಪ್ ಬರ್ತಿರೋ ಕಾರಣ ಈಗಾಗಲೇ ಸಾಕಷ್ಟು ಚಾಲಕರು ಓಲಾ ಉಬರ್ ಆ್ಯಪ್‌ನಿಂದ ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಯಾತ್ರೆ ಆ್ಯಪ್ ಮೂಲಕ ಸಿಟಿ ಪ್ರಯಾಣಿಕರಿಗೆ ಸರ್ವೀಸ್ ಕೊಡಲು ನಿರ್ಧಾರ ಮಾಡಿದ್ದು, ಕೆಲವೇ ದಿನದಲ್ಲಿ ಜನರು ಇದರ ಸದುಪಯೋಗ ಪಡೆಯಬಹುದು.












