
ಬಿಜೆಪಿಯ ಅಂತರಿಕ ಕಲಹದ ಬಂಡಾಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧ ಗುಡುಗಿದ್ದರು. ಅಡ್ಜೆಸ್ಟ್ಮೆಂಟ್ ರಾಜಕಾರಣಿಗಳು ಅಂತ ಟೀಕಿಸುವ ಯತ್ನಾಳ್, ದೆಹಲಿಗೂ ಹೋಗಿ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ರು..

ಫೆಬ್ರವರಿ 10ಕ್ಕೆ ದೆಹಲಿಯಲ್ಲಿ ಇದ್ದಾಗಲೇ ಬಸನಗೌಡ ಪಾಟೀಲ್ ಯತ್ನಾಳ್‌ಗೆ ರಾಷ್ಟ್ರೀಯ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. 72 ಗಂಟೆಯಲ್ಲಿ ಉತ್ತರ ಕೊಡಿ ಅಂತೇಳಿತ್ತು. ಆದರೆ ನೋಟಿಸ್‌ನಿಂದ ಸಿಟ್ಟಿಗೆದ್ದಿದ್ದ ಯತ್ನಾಳ್, ಆರ್ಎಸ್ಎಸ್ ನಾಯಕರ ಸೂಚನೆ ಮೇರೆಗೆ 8 ದಿನದ ಬಳಿಕ ಉತ್ತರ ಕೊಟ್ಟಿದ್ದಾರೆ. 72 ಗಂಟೆ ಬದಲು 192 ಗಂಟೆಗಳ ಬಳಿಕ ಅಂದ್ರೆ 8 ದಿನಗಳಾದ್ಮೇಲೆ 12 ಪುಟಗಳ ಸವಿವರವಾದ ಉತ್ತರವನ್ನ ನೀಡಿದ್ದಾರೆ.
ಹೈಕಮಾಂಡ್ ನಾಯಕರ ನೋಟಿಸ್‌ಗೆ ಯತ್ನಾಳ್ ಉತ್ತರ ಕೊಟ್ಟಿದ್ದಾರೆ. ಆದರೆ ಪತ್ರದಲ್ಲಿ ಉತ್ತರಕ್ಕಿಂತ ಸಿಟ್ಟು, ಬೇಸರ, ಸಿಟ್ಟಿನ ಮಾತುಗಳನ್ನು 12 ಪುಟಗಳ ತುಂಬಾ ಬರೆದಿದ್ದಾರೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಾಗೂ ಯಡಿಯೂರಪ್ಪ ಸೇರಿ ಬಿಜೆಪಿಯೊಳಗಿನ ಎಲ್ಲಾ ಲೋಪದೋಷಗಳನ್ನೂ ಯತ್ನಾಳ್, ವರಿಷ್ಠ ನಾಯಕರಿಗೂ ತಿಳಿಸಿದ್ದಾರೆ. ಜೊತೆಗೆ ನೋಟಿಸ್ ಕೊಟ್ಟಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.

ನನಗೆ ಕೊಟ್ಟಿರುವ ನೋಟಿಸ್ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಪ್ರಭಾವ ಪ್ರೇರಿತವಾದ ನೋಟಿಸ್ ಎಂದಿರುವ ಯತ್ನಾಳ್, ಬಿಜೆಪಿ ಪಕ್ಷಕ್ಕಾಗಿ ದುಡಿಯೋರಿಗೆ ನೋಟಿಸ್ ಕೊಟ್ಟಿದ್ದೀರಾ..? ಪಕ್ಷ ವಿರೋಧಿಗಳಿಗೆ ಇಲ್ಲಿವರೆಗೂ ಒಂದು ನೋಟಿಸ್ ಕೊಟ್ಟಿಲ್ವಲ್ಲಾ ಯಾಕೆ..? ಅಂತಾ ಪ್ರಶ್ನೆ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷ ಸೋಲಿಸಿದವರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ.