
ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸೋಮಣ್ಣ ಆಯ್ಕೆ..?
ಯತ್ನಾಳ್ ಮರಳಿ ಬಿಜೆಪಿಗೆ..?

ಬಿಜೆಪಿ ಪಕ್ಷದಲ್ಲಿ ದಿನದಿಂದ ದಿನಕ್ಕೆ ಆಂತರಿಕ ಕಚ್ಚಾಟಗಳು ಹೆಚ್ಚಾಗುತ್ತಲೇ ಇದೆ. ರಾಜ್ಯ ನಾಯಕರುಗಳು ಎರಡೆರಡು ಬಾರಿ ಸಭೆ ನಡೆಸಿ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಯತ್ನಿಸಿದ್ದರೂ ಕೋಪ ಶಮನ ಸಾಧ್ಯವಾಗಲಿಲ್ಲ.
ದೆಹಲಿಯ ಹೈಕಾಂಡ್ ಮಟ್ಟದಲ್ಲೂ ಎಚ್ಚರಿಕೆ ನೀಡಿದ್ರು ನಾಯಕರು ಕ್ಯಾರೆ ಅನ್ನಲಿಲ್ಲ. ಇಲ್ಲಿ ಎರಡು ಬಣಗಳ ಬಡಿದಾಟ ವೇಗ ಹೆಚ್ಚಿಸಿಕೊಂಡಿದೆ. ರೆಬೆಲ್ ನಾಯಕರ ಬಣದ ಜೆಎಂ ಸಿದ್ದೇಶ್ವರ್ ಅವರ ಟೀಂ ಶತಾಯ ಗತಾಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬಿ.ವೈ.ಜಯೇಂದ್ರ ಅವರನ್ನು ಮುಂದು ವರೆಸಬಾರದು ಎಂಬ ಜಿದ್ದಿಗೆ ಬಿದ್ದಿದೆ. ಈ ನಡುವೆ ಬಿಜೆಪಿಯಿಂದ ಉಚ್ಚಾಟನೆ ಆಗಿರುವ ಬವನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕದ ಜನತೆಗೆ ಶುಭ ಸುದ್ದಿ ಎಂದು ಸೂಚನೆಯನ್ನು ನೀಡಿದ್ದಾರೆ.

ಹೌದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭ ಸುದ್ದಿ. -ನಿಮ್ಮ ಫೈರ್ ಬ್ರ್ಯಾಂಡ್ Basanagouda Patil Yatnal ಅಂತ ಬರೆದುಕೊಂಡಿದ್ದಾರೆ. ಇದರ ಅರ್ಥ ಏನು..? ಸೋಮಣ್ಣ ಅವರು ಬಿಜೆಪಿ ಅಧ್ಯಕ್ಷರಾಗುತ್ತಿದ್ದಾರೆ ಎನ್ನುವುದಾ ಅಥವಾ ಯತ್ನಾಳ್ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರಾ..? ಎನ್ನುವ ಚರ್ಚೆಗಳು ನಡೆಯುತ್ತಿದೆ.












