ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (Vijayendra) ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಯತ್ನಾಳ್, ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ.
ಬಿವೈ ವಿಜಯೇಂದ್ರರನ್ನು ಕೆರಳಿಸುವಂತೆ ಮಾತನಾಡಿರುವ ಯತ್ನಾಳ್ , ವಿಜಯೇಂದ್ರ ಹೊರಗಡೆ ಮಾತ್ರ ಯಡಿಯೂರಪ್ಪನನ್ನು (Yediyurappa) ಪೂಜ್ಯ ತಂದೆಯವರು ಎನ್ನುತ್ತಾರೆ. ಆದ್ರೆ ಮನೆಯೊಳಗೆ ಮುದಿಯ ಅಂತ ಬೈಯುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ.
ಒಂದೆಡೆ ರಮೇಶ್ ಜಾರಕಿಹೊಳಿ (Ramesh jarakiholi), ಮತ್ತೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ನಿತ್ಯ ನಿರಂತರವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಬಚ್ಚಾ ಎಂಬ ಪದ ಬಳಕೆ ಮಾಡಿ ಸುದ್ದಿಯಾಗಿದ್ದರು.