
KGF ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಿತ್ರದ ಹೀರೋಯಿನ್ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಂಡಿತ್ತು. ಇದ್ಯಾವುದೋ ಅಧಿಕೃತ ಮಾಹಿತಿ ಆಗಿರಲಿಲ್ಲ. ಈಗ ಕರೀನಾ ಸಿನಿಮಾದಲ್ಲಿ ಇರಲ್ಲ ಎನ್ನುವ ದೊಡ್ಡ ಸುದ್ದಿ ಬಲ್ಲ ಮೂಲಗಳಿಂದ ಬಂದಿದೆ. ಕರೀನಾ ಮತ್ತು ಯಶ್ ಅವರ ಡೇಟ್ಸ್ ಹೊಂದಿಕೆಯಾಗಲಿಲ್ಲ ಹೀಗಾಗಿ ಸಿನಿಮಾದಿಂದ ಕರೀನಾ ಹೊರ ನಡೆದಿದ್ದಾರೆ. ಇಬ್ಬರ ಡೇಟ್ಸ್ ಮ್ಯಾಚ್ ಆಗದ ಹಿನ್ನೆಲೆಯಲ್ಲಿ ಕರೀನಾ ಅವರು ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್ನಿಂದ ಹೊರಬಂದಿದ್ದಾರೆ ಎಂದು ಸುದ್ದಿಯಾಗಿದೆ. ಇದೀಗ ಇವರ ಜಾಗಕ್ಕೆ ಬೇರೆಯವರನ್ನು ಹುಡುಕಲು ಚಿತ್ರತಂಡ ರೆಡಿಯಾಗಿದೆ ಎನ್ನಲಾಗುತ್ತಿದೆ. ಆ ಜಾಗಕ್ಕೆ ನಟಿ ನಯನತಾರ ಬರೋ ನಿರೀಕ್ಷೆ ಇದೆ.


ಅಷ್ಟಕ್ಕೂ ಕರೀನಾ ಇದರಲ್ಲಿ ನಾಯಕಿಯಾಗಿರಲಿಲ್ಲ. ಯಶ್ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬಂದಿದೆ.

ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಕಿಯಾರಾ ನಾಯಕಿಯಾಗಲಿದ್ದಾರೆ ಎಂದು ಸುದ್ದಿಯಾಗುತ್ತಿದ್ದರೂ, ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಕಿಯಾರಾ ನಟಿಸುವುದು ನಿಜವಾಗಿದ್ದರೆ, ಕಿಯಾರಾ ಅಡ್ವಾಣಿ ಅವರಿಗೂ ಇದು ಮೊದಲ ಕನ್ನಡ ಸಿನಿಮಾ ಆಗಲಿದೆ. ಅವರು ಈಗಾಗಲೇ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಸದ್ಯ, ಕಿಯಾರಾ ಈಗಾಗಲೇ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ನಲ್ಲಿ ಶೂಟಿಂಗ್ ಶುರುವಾದಾಗಿನಿಂದ ಸಿಕ್ಕಾಪಟ್ಟೆ ಸೀಕ್ರೆಟ್ ಮೆಂಟೇನ್ ಮಾಡಿರೋ ಟಾಕ್ಸಿಕ್ ಟೀಮ್ ಇನ್ನಷ್ಟೇ ಎಲ್ಲವನ್ನೂ ಅಧಿಕೃತಗೊಳಿಸಬೇಕಿದೆ.