ರಾಂಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾದ ಘೋಷಣೆ ಆಗಿದೆ. ಯಶ್ ಹೊಸ ಸಿನಿಮಾದ ಹೆಸರು ಟಾಕ್ಸಿಕ್. ಈ ಸಿನಿಮಾಕ್ಕಾಗಿ ಅಭಿಮಾನಿಗಳು 1 ವರ್ಷ ಅಂದರೆ 2025ರ ಏಪ್ರಿಲ್ 10ರವರೆಗೂ ಕಾಯಬೇಕಾಗುತ್ತದೆ.
ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಮೂಲಕ ನಟ ಯಶ್ ಕೂಡಾ ಸಿನಿಮಾ ನಿರ್ಮಾಣ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಯಶ್ ಕೂಡಾ ಹೂಡಿಕೆ ಮಾಡಿದ್ದಾರೆ.
ಸಿನಿಮಾದ ಟೈಟಲ್ ಮತ್ತು ಬಿಡುಗಡೆ ದಿನಾಂಕ ಎರಡನ್ನೂ ಒಟ್ಟೊಟ್ಟಿಗೆ ಘೋಷಣೆ ಮಾಡಿರುವ ಕೆವಿಎನ್ ಪ್ರೊಡಕ್ಷನ್ ಅದಕ್ಕಾಗಿಯೇ 1 ನಿಮಿಷ 17 ಸೆಕೆಂಡ್‌ಗಳ ಟೈಟಲ್ ರಿವೀಲ್ ಟೀಸರ್‌ನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಈ ಟೈಟಲ್ ಟೀಸರ್‌ನಲ್ಲೂ ರಾಂಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್‌ನಂತೆ ಗಡ್ಡ ಬಿಟ್ಟಿದ್ದಾರೆ. ಬಾಯಲ್ಲಿ ಸಿಗಾರ್ ಇದೆ. ಹೆಗಲ ಮೇಲೆ ಬಲವಾದ ಕಬ್ಬಿಣದ ಆಯುಧವಿದೆ. ತಲೆಗೊಂಡು ಕೌ ಬಾಯ್ ಟೋಪಿ, ಹೀಗೆ ರಗಡ ಲುಕ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.







