• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಯಮುನಾ ನದಿ ನೀರು ವಿಷವಲ್ಲವೇ..? ಕುಡಿದು ಸಾಬೀತು ಮಾಡಿ..

ಕೃಷ್ಣ ಮಣಿ by ಕೃಷ್ಣ ಮಣಿ
January 31, 2025
in Uncategorized
0
ಯಮುನಾ ನದಿ ನೀರು ವಿಷವಲ್ಲವೇ..? ಕುಡಿದು ಸಾಬೀತು ಮಾಡಿ..
Share on WhatsAppShare on FacebookShare on Telegram

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಮುನಾ ನದಿ ವಿಚಾರ ಭಾರೀ ಸದ್ದು ಮಾಡ್ತಿದೆ. ಕಳೆದ 3 ದಿನದ ಹಿಂದೆ ಅರವಿಂದ ಕೇಜ್ರಿವಾಲ್​​ ಯಮುನಾ ನದಿಗೆ ಹರಿಯಾಣ ಬಿಜೆಪಿಯವರು ವಿಷ ಬೆರೆಸ್ತಿದ್ದಾರೆ ಅನ್ನೋ ಹೇಳಿಕೆ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದರು. ಸಾರ್ವಜನಿಕ ಸಮಾವೇಶದಲ್ಲಿ ನಾನು ಕೂಡ ಯಮುನಾ ನದಿ ನೀರನ್ನೇ ಕುಡೀತಿನಿ ಅಂತಾ ವಾಗ್ದಾಳಿ ಮಾಡಿದ್ದರು. ಇಲ್ಲಿರೋ ಜನರು, ನ್ಯಾಯಮೂರ್ತಿಗಳು, ಸಂಸದರು ಸೇರಿದಂತೆ ಪ್ರತಿಯೊಬ್ಬರು ಯಮುನಾ ನದಿ ನೀರನ್ನೇ ಕುಡಿಯೋದು ಅಂತ ತಿರುಗೇಟು ನೀಡಿದ್ರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಆಯೋಗ.

ADVERTISEMENT

ಯಮುನಾ ನದಿ ನೀರು ಕಲುಷಿತ ಆಗಿದೆ ಅದಕ್ಕೆ ಹರಿಯಾಣ ಕಾರಣ ಅನ್ನೋದು ಅರವಿಂದ್‌ ಕೇಜ್ರಿವಾಲ್ ಅವರ ಆರೋಪದ ಹಿಂದಿನ ಉದ್ದೇಶ. ಆದರೆ ಹರಿಯಾಣದಲ್ಲಿ ವಿಷ ಹಾಕಲಾಗುತ್ತಿದೆ ಅನ್ನೋ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ನೀಡಿತ್ತು. ಇದೇ ಪ್ರಕರಣದ ವಿಚಾರವಾಗಿ ಅರವಿಂದ್‌ ಕೇಜ್ರಿವಾಲ್‌ಗೆ 2ನೇ ನೋಟಿಸ್​​ ಜಾರಿ ಮಾಡಿತ್ತು. ಆ ಕಾರಣಕ್ಕೆ ಕೇಂದ್ರ ಚುನಾವಣಾ ಆಯುಕ್ತರಿಗೆ ಅರವಿಂದ್‌ ಕೇಜ್ರಿವಾಲ್​ ಚಾಟಿ ಬೀಸಿದ್ದಾರೆ. ಎಲೆಕ್ಷನ್​ ಕಮೀಷನರ್​ ರಾಜಕೀಯ ಮಾಡ್ತಿದ್ದಾರೆ. ರಾಜೀನಾಮೆ ಕೊಟ್ಟು ಈಗಲೂ ದೆಹಲಿ ಚುನಾವಣೆ​ಗೆ ಸ್ಪರ್ಧಿಸಲಿ ಅಂತ ಚುನಾವಣಾ ಮುಖ್ಯ ಆಯುಕ್ತರ ವಿರುದ್ಧ ಗುಡುಗಿದ್ದಾರೆ.

Auto Driver : ಆಟೋ ಡ್ರೈವರ್ ಗಳನ್ನು ಕರೆದು ವಾರ್ನ್ ಮಾಡಿದ ಟ್ರಾಫಿಕ್ ಪೊಲೀಸ್ #pratidhvani

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​​ ಎಲ್ಲಾ ರಾಜಕಾರಣಿಗಳಿಗೂ ಯಮುನಾ ನದಿ ವಿಷಯುಕ್ತವಾಗಿದೆ. ಅದೇ ನೀರನ್ನ ನಿಮಗೆ ಕಳುಹಿಸಿಕೊಡ್ತೀವಿ. ಜನರ ಮುಂದೆ ನೀವು ಆ ನೀರನ್ನು ಕುಡಿದು ತೋರಿಸಿ ಅಂತ ಸವಾಲ್​ ಹಾಕಿದ್ದಾರೆ. ಬಿಜೆಪಿಯವರಿಗಷ್ಟೇ ಅಲ್ಲ ರಾಹುಲ್ ​ಗಾಂಧಿಗೂ ಬಾಟೆಲ್ ಕಳುಹಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸಂಸದರು ಈ ಬಾಟೆಲ್​ ತೆಗೆದುಕೊಂಡು ಹೋಗ್ತಾರೆ. ಮೊದಲನೆಯದು ಅಮಿತ್ ಶಾಗೆ, ಎರಡನೆಯದ್ದು ವೀರೇಂದ್ರ ಸಚ್‌ದೇವರಿಗೆ, ಮೂರನೇಯದು ನಯಾಬ್ ಸೈನಿಯವರಿಗೆ, 4ನೇ ಬಾಟೆಲ್ ರಾಹುಲ್ ಗಾಂಧಿ ಕಳಿಸಿಕೊಡ್ತಿದ್ದೀವಿ. ಈ ನೀರು ವಿಷಕಾರಿಯಲ್ಲ ಅಂತ ಸಾಬೀತುಪಡಿಸಲಿ. ಈ ನೀರನ್ನ ಅವರು ಜನರೆದುರು ಕುಡಿದು ತೋರಿಸಿಲಿ ಎಂದಿದ್ದಾರೆ.

ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದು, ರಾಜೀವ್‌ ಕುಮಾರ್‌ ಅವರಿಗೆ ನಿವೃತ್ತಿ ಕಾಲ ಹತ್ತಿರವಾಗ್ತಿದೆ. ನಿವೃತ್ತಿ ಆದ್ಮೇಲೆ ಹೊಸ ಕೆಲಸ ಹುಡುಕುತ್ತಿದ್ದಾರೆ. ಪ್ರಜಾಪ್ರಭುತ್ವವನ್ನ ಅವರಷ್ಟು ಯಾರೂ ಹಾಳು ಮಾಡಿಲ್ಲ. ರಾಜಕೀಯ ಮಾಡೋದು ಆಯೋಗದ ಕೆಲಸವಲ್ಲ ಎಂದಿದ್ದಾರೆ. ಇನ್ನು ರಾಜೀವ್ ಕುಮಾರ್ ಅವರಿ​ಗೂ 3 ಬಾಟಲ್​ ಕಳಿಸ್ತೀವಿ. ಮುಂದಿನ ಮೂರು ದಿನಗಳಲ್ಲಿ ನನ್ನನ್ನ ಬಂಧಿಸ್ತಾರೆ ಅಂತ ಗೊತ್ತಿದೆ. ಆದ್ರೆ ಅದಕ್ಕೂ ಮೊದಲು ಈ ನೀರನ್ನ ಕುಡಿದು ವಿಷ ಅಲ್ಲ ಸಾಬೀತುಪಡಿಸಲಿ. ಹಾಗಾದರೆ ನಾವು ಮಾತಾಡಿದ್ದು ತಪ್ಪು ಅಂತ ಒಪ್ಪಿಕೊಳ್ತೀವಿ ಎಂದಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಎಎಪಿ ನಾಯಕರು ಬಿಜೆಪಿ ಮುಖ್ಯ ಕಚೇರಿಗೆ ಯಮುನಾ ನದಿ ನೀರಿನ ಬಾಟೆಲ್​ ತೆಗೆದುಕೊಂಡು ಹೋದಾಗ ಪೊಲೀಸರು ಅನುಮತಿ ನೀಡಿಲ್ಲ.

Tags: Arvind Kejriwalarvind kejriwal on yamuna riverdelhi yamuna riverdelhi yamuna river pollutionKejriwalkejriwal accuses bjp of poisoning yamuna waterkejriwal on yamunakejriwal on yamuna waterkejriwal yamuna poisonyamunayamuna pollutionyamuna riveryamuna river controversyyamuna river delhiyamuna river foamyamuna river poisoningyamuna river pollutionyamuna river systemyamuna water
Previous Post

ಸಿಎಂ ವಿರುದ್ಧ ದೂರು ಕೊಟ್ಟ ಸ್ನೇಹಮಯಿ ಕೃಷ್ಣಗೆ ಜೈಲು ಶಿಕ್ಷೆ..!

Next Post

ಜೈಲು ಪಾಲಗ್ತರಾ ಸ್ನೇಹಮಯಿ ಕೃಷ್ಣ..?! ಇಂದು ಶಿಕ್ಷೆ ಪ್ರಕಟಿಸಲಿರುವ ಕೋರ್ಟ್ ! 

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ಮುಡಾ ಕೇಸ್ CBI ವರ್ಗಾವಣೆಗೆ ಕೋರ್ಟ್ ಮೊರೆ – ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು..? 

ಜೈಲು ಪಾಲಗ್ತರಾ ಸ್ನೇಹಮಯಿ ಕೃಷ್ಣ..?! ಇಂದು ಶಿಕ್ಷೆ ಪ್ರಕಟಿಸಲಿರುವ ಕೋರ್ಟ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada