
ದೆಹಲಿ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಆಮ್ ಆದ್ಮಿ ಹಾಗು ಬಿಜೆಪಿ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಯಮುನಾ ನದಿ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಜಟಾಪಟಿ ತಾರಕಕ್ಕೇರಿದೆ. ಅರವಿಂದ್ ಕೇಜ್ರಿವಾಲ್ ಹೇಳಿದ ವಿಷದ ಮಾತು ಬಿಜೆಪಿ ನಾಯಕರನ್ನು ಸಿಡಿದೇಳುವಂತೆ ಮಾಡಿದೆ.. ಹರಿಯಾಣದಿಂದ ದೆಹಲಿಗೆ ಹರಿಯುವ ಯಮುನಾ ನದಿ ನೀರಿಗೆ ಅಲ್ಲಿನ ಬಿಜೆಪಿ ಸರ್ಕಾರ ವಿಷ ಹಾಕಿದೆ ಅಂತ 2 ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ರು.. ಇದೇ ಮಾತು ಈಗ ದೆಹಲಿ ಚುನಾವಣೆಯಲ್ಲಿ ಬೆಂಕಿ ಹೊತ್ತಿಸಿದೆ..

ದೆಹಲಿಗೆ ಬರುವ ನೀರಿಗೆ ಹರಿಯಾಣದ ಬಿಜೆಪಿ ಸರ್ಕಾರ ವಿಷ ಹಾಕ್ತಿದೆ. ದೆಹಲಿಯ ಜನರನ್ನ ಸಾಯಿಸೋಕೆ ಬಿಜೆಪಿ ಹೊರಟಿದೆ. ಜನರು ಸತ್ತರೆ ಅದನ್ನ ಎಎಪಿ ಸರ್ಕಾರದ ಮೇಲೆ ಹಾಕಲು ಹುನ್ನಾರ ಮಾಡಿದೆ. ಇಷ್ಟು ಕೆಟ್ಟಮಟ್ಟಕ್ಕೆ ಬಿಜೆಪಿ ಇಳಿಯಬಾರದು ಎಂದು ಹೇಳಿದ್ದರು. ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡುತ್ತ ಕೇಜ್ರಿವಾಲ್ ವಿರುದ್ಧ ಸಿಡಿಮಿಡಿಗೊಂಡ್ರು. ಯಮುನಾ ನದಿ ನೀರನ್ನ ನಾನೂ ಕುಡಿಯುತ್ತೇನೆ.. ಇಂತಹ ಪವಿತ್ರವಾದ ನೀರಿಗೆ ಹರಿಯಾಣ ಬಿಜೆಪಿ ಸರ್ಕಾರ ವಿಷ ಬೆರೆಸುತ್ತದೆಯೇ ಅಂತ ಪ್ರಶ್ನಿದ್ರು..

ದೆಹಲಿಯ ಮಾಜಿ ಸಿಎಂ ಆರೋಪ ಮಾಡ್ತಿದ್ದಾರೆ. ಹರಿಯಾಣ ಜನ್ರ ಮೇಲೆ ಕೆಟ್ಟ ಆರೋಪ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅವರು ಕಂಗಾಲಾಗಿದ್ದಾರೆ. ಹರಿಯಾಣದ ಮಕ್ಕಳು, ಸಂಬಂಧಿಕರು ದೆಹಲಿಯಲ್ಲಿಲ್ವಾ..? ಅವರ ಮಕ್ಕಳಿಗೆ ಅವರೇ ನೀರಲ್ಲಿ ವಿಷ ಹಾಕ್ತಾರ? ಅಂತಾ ಪ್ರಶ್ನೆ ಮಾಡಿದ್ದಾರೆ. ಹರಿಯಾಣದಿಂದ ಬರುವ ನೀರನ್ನ ದೆಹಲಿ ಜನ ಕುಡೀತಿದ್ದಾರೆ. ಕಳೆದ 11 ವರ್ಷದಿಂದ ಈ ಪ್ರಧಾನಮಂತ್ರಿಯೂ ಅದೇ ನೀರು ಕುಡಿಯೋದು. ನ್ಯಾಯಾಧೀಶರು, ನ್ಯಾಯಮೂರ್ತಿ, ಸಂಸದರು ಕುಡಿತಿದ್ದಾರೆ ಎಂದಿದ್ದಾರೆ.
ಇನ್ನು ನೀವೆಲ್ಲಾ ಫ್ರಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಗ್ಗೆ ನೀವು ಕೇಳಿರ್ತೀರಾ? ಅವರು ಪ್ರಸಿದ್ಧ ದರೋಡೆಕೋರರಾಗಿದ್ದರು. ಜನರನ್ನ ವಂಚಿಸೋದ್ರಲ್ಲಿ ಆತ ಪರಿಣಿತನಾಗಿದ್ದ. ಪ್ರತಿ ಬಾರಿಯೂ ಜನರು ಮೋಸ ಹೋಗುತ್ತಿದ್ದರು. ಅಂತವರ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಿರಿ ಎನ್ನುವ ಮೂಲಕ ಅರವಿಂದ್ ಕೇಜ್ರಿವಾಲ್ ಜನರನ್ನ ಮಾತಿನಲ್ಲಿ ಮಂತ್ರ ಮುಗ್ದರನ್ನಾಗಿಸಿ ಮತ ಪಡೆದು ಮೋಸ ಮಾಡ್ತಿದ್ದಾರೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ನಡುವೆ ಯಮುನಾ ನದಿಗೆ ಹರಿಯಾಣ ಬಿಜೆಪಿ ವಿಷ ಬೆರೆಸ್ತಿದೆ ಅನ್ನೋ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಅರವಿಂದ್ ಕೇಜ್ರಿವಾಲ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ..