• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಯಮುನಾ ನದಿ.. ವಿಷ.. ಕೇಜ್ರಿವಾಲ್‌ಗೆ ಮೋದಿ ಪ್ರಶ್ನೆ.. ಆಯೋಗ ನೋಟಿಸ್

ಕೃಷ್ಣ ಮಣಿ by ಕೃಷ್ಣ ಮಣಿ
January 30, 2025
in ದೇಶ, ರಾಜಕೀಯ, ಶೋಧ
0
ಯಮುನಾ ನದಿ.. ವಿಷ.. ಕೇಜ್ರಿವಾಲ್‌ಗೆ ಮೋದಿ ಪ್ರಶ್ನೆ.. ಆಯೋಗ ನೋಟಿಸ್
Share on WhatsAppShare on FacebookShare on Telegram

ದೆಹಲಿ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಆಮ್‌ ಆದ್ಮಿ ಹಾಗು ಬಿಜೆಪಿ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಯಮುನಾ ನದಿ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಜಟಾಪಟಿ ತಾರಕಕ್ಕೇರಿದೆ. ಅರವಿಂದ್‌‌ ಕೇಜ್ರಿವಾಲ್‌ ಹೇಳಿದ ವಿಷದ ಮಾತು ಬಿಜೆಪಿ ನಾಯಕರನ್ನು ಸಿಡಿದೇಳುವಂತೆ ಮಾಡಿದೆ.. ಹರಿಯಾಣದಿಂದ ದೆಹಲಿಗೆ ಹರಿಯುವ ಯಮುನಾ ನದಿ ನೀರಿಗೆ ಅಲ್ಲಿನ ಬಿಜೆಪಿ ಸರ್ಕಾರ ವಿಷ ಹಾಕಿದೆ ಅಂತ 2 ದಿನಗಳ ಹಿಂದೆ ಅರವಿಂದ್‌ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ರು.. ಇದೇ ಮಾತು ಈಗ ದೆಹಲಿ ಚುನಾವಣೆಯಲ್ಲಿ ಬೆಂಕಿ ಹೊತ್ತಿಸಿದೆ..

ADVERTISEMENT

ದೆಹಲಿಗೆ ಬರುವ ನೀರಿಗೆ ಹರಿಯಾಣದ ಬಿಜೆಪಿ ಸರ್ಕಾರ ವಿಷ ಹಾಕ್ತಿದೆ. ದೆಹಲಿಯ ಜನರನ್ನ ಸಾಯಿಸೋಕೆ ಬಿಜೆಪಿ ಹೊರಟಿದೆ. ಜನರು ಸತ್ತರೆ ಅದನ್ನ ಎಎಪಿ ಸರ್ಕಾರದ ಮೇಲೆ ಹಾಕಲು ಹುನ್ನಾರ ಮಾಡಿದೆ. ಇಷ್ಟು ಕೆಟ್ಟಮಟ್ಟಕ್ಕೆ ಬಿಜೆಪಿ ಇಳಿಯಬಾರದು ಎಂದು ಹೇಳಿದ್ದರು. ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡುತ್ತ ಕೇಜ್ರಿವಾಲ್‌ ವಿರುದ್ಧ ಸಿಡಿಮಿಡಿಗೊಂಡ್ರು. ಯಮುನಾ ನದಿ ನೀರನ್ನ ನಾನೂ ಕುಡಿಯುತ್ತೇನೆ.. ಇಂತಹ ಪವಿತ್ರವಾದ ನೀರಿಗೆ ಹರಿಯಾಣ ಬಿಜೆಪಿ ಸರ್ಕಾರ ವಿಷ ಬೆರೆಸುತ್ತದೆಯೇ ಅಂತ ಪ್ರಶ್ನಿದ್ರು..

ದೆಹಲಿಯ ಮಾಜಿ ಸಿಎಂ ಆರೋಪ ಮಾಡ್ತಿದ್ದಾರೆ. ಹರಿಯಾಣ ಜನ್ರ ಮೇಲೆ ಕೆಟ್ಟ ಆರೋಪ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅವರು ಕಂಗಾಲಾಗಿದ್ದಾರೆ. ಹರಿಯಾಣದ ಮಕ್ಕಳು, ಸಂಬಂಧಿಕರು ದೆಹಲಿಯಲ್ಲಿಲ್ವಾ..? ಅವರ ಮಕ್ಕಳಿಗೆ ಅವರೇ ನೀರಲ್ಲಿ ವಿಷ ಹಾಕ್ತಾರ? ಅಂತಾ ಪ್ರಶ್ನೆ ಮಾಡಿದ್ದಾರೆ. ಹರಿಯಾಣದಿಂದ ಬರುವ ನೀರನ್ನ ದೆಹಲಿ ಜನ ಕುಡೀತಿದ್ದಾರೆ. ಕಳೆದ 11 ವರ್ಷದಿಂದ ಈ ಪ್ರಧಾನಮಂತ್ರಿಯೂ ಅದೇ ನೀರು ಕುಡಿಯೋದು. ನ್ಯಾಯಾಧೀಶರು, ನ್ಯಾಯಮೂರ್ತಿ, ಸಂಸದರು ಕುಡಿತಿದ್ದಾರೆ ಎಂದಿದ್ದಾರೆ.

P Rajeev :  Vijayendra ವಿರುದ್ಧ  ದೂರು ಕೊಡಲಿ.. ತಪ್ಪೇನಿದೆ #pratidhvani

ಇನ್ನು ನೀವೆಲ್ಲಾ ಫ್ರಂಚ್‌ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಗ್ಗೆ ನೀವು ಕೇಳಿರ್ತೀರಾ? ಅವರು ಪ್ರಸಿದ್ಧ ದರೋಡೆಕೋರರಾಗಿದ್ದರು. ಜನರನ್ನ ವಂಚಿಸೋದ್ರಲ್ಲಿ ಆತ ಪರಿಣಿತನಾಗಿದ್ದ. ಪ್ರತಿ ಬಾರಿಯೂ ಜನರು ಮೋಸ ಹೋಗುತ್ತಿದ್ದರು. ಅಂತವರ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಿರಿ ಎನ್ನುವ ಮೂಲಕ ಅರವಿಂದ್‌ ಕೇಜ್ರಿವಾಲ್‌ ಜನರನ್ನ ಮಾತಿನಲ್ಲಿ ಮಂತ್ರ ಮುಗ್ದರನ್ನಾಗಿಸಿ ಮತ ಪಡೆದು ಮೋಸ ಮಾಡ್ತಿದ್ದಾರೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ನಡುವೆ ಯಮುನಾ ನದಿಗೆ ಹರಿಯಾಣ ಬಿಜೆಪಿ ವಿಷ ಬೆರೆಸ್ತಿದೆ ಅನ್ನೋ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಅರವಿಂದ್ ಕೇಜ್ರಿವಾಲ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ..

Tags: delhi yamuna river pollutionpollution in yamuna riverpollution in yamuna river picturespollution level in yamuna riverpollution yamuna rivertoxic foam floats in yamuna rivertoxic foam in yamuna rivertoxic foam yamuna riverwater pollution in yamunayamuna pollution issueyamuna riveryamuna river foamyamuna river ghat in delhiyamuna river indiayamuna river pollutionyamuna river toxic foamyamuna toxic foam
Previous Post

ಪ್ರಯಾಗ್‌ರಾಜ್‌ ದುರಂತ ಅಚಾತುರ್ಯದಿಂದ ನಡೆದಿದೆ.. HDK

Next Post

ಸೂರ್ಯಕುಮಾರ್ ಯಾದವ್ ತೊಡಗಿದ ವಿವಾದ: ಆಯ್ಕೆ ನೀತಿಯ ಕುರಿತು ಚರ್ಚೆ

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಸೂರ್ಯಕುಮಾರ್ ಯಾದವ್ ತೊಡಗಿದ ವಿವಾದ: ಆಯ್ಕೆ ನೀತಿಯ ಕುರಿತು ಚರ್ಚೆ

ಸೂರ್ಯಕುಮಾರ್ ಯಾದವ್ ತೊಡಗಿದ ವಿವಾದ: ಆಯ್ಕೆ ನೀತಿಯ ಕುರಿತು ಚರ್ಚೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada