ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ರಸ್ತೆಗೆ ಸಿಎಂ ಸಿದ್ದರಾಮಯ್ಯ (Cm siddaramaiah) ಹೆಸರಿಡುವ ಪ್ರಸ್ತಾಪದ ಬೆನ್ನಲೇ ಇದಕ್ಕೆ ರಾಜ ಮನೆತನದ ವಿರೋಧ ವ್ಯಕ್ತವಾಗಿದೆ. ಸುಮಾರು ನೂರು ವರ್ಷಗಳಿಂದ ಪ್ರಿನ್ಸೆಸ್ ರಸ್ತೆ (Princess road) ಎಂದು ಕರೆಯುವ ರಸ್ತೆಯನ್ನು ಈಗ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಸಲು ತೀರ್ಮಾನಿಸಲಾಗಿದೆ.
ಈ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚರದಲ್ಲಿ ಬಿಜೆಪಿ (Bjp) ನಾಯಕರಲ್ಲ ಗೊಂದಲವಿದೆ . ಒಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಆದ್ರೆ ಸಿದ್ದು ಹೆಸರು ಓಕೆ ಅಂದ್ರೆ.. ಮತ್ತೊಂದೆಡೆ ಹಾಲಿ ಸಂಸದ ಯದುವೀರ್ (Yaduveer) ಈ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಕೊಡಗು ಸಂಸದ ಯದುವೀರ್, ರಾಜಕುಮಾರಿ ಅವರ ಸ್ಮರಣಾರ್ಥ ಈ ರಸ್ತೆಗೆ ಪ್ರಿನ್ಸಸ್ ಹೆಸರಿಡಲಾಗಿದೆ. ಈಗ ಅದನ್ನು ಬದಲಿಸಬೇಡಿ, ಬಹುಶಃ ಪ್ರತಾಪ್ ಸಿಂಹ ಇತಿಹಾಸವನ್ನು ಮರೆತಿದ್ದಾರೆ ಅನ್ನಿಸುತ್ತೆ, ಯಾವುದೇ ಕಾರಣಕ್ಕೂ ರಸ್ತೆಯ ಹೆಸರು ಬದಲಾಗಬಾರದು. ಈ ಬಗ್ಗೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಸಂಸದ ಯದುವೀರ್ ಹೇಳಿದ್ದಾರೆ.