ಬೆಂಗಳೂರು (Bengaluru): 2024 ರ ಲೋಕಸಭಾ ಚುನಾವಣೆಯಲ್ಲಿ (Loksabha Election) ಸ್ಪರ್ಧಿಸುತ್ತಿರುವ ಡಾ.ಸಿ.ಎನ್ ಮಂಜುನಾಥ್ (Dr.C.N.Manjunath) ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು
ಸದ್ಯದಲ್ಲೇ ಬಿಜೆಪಿ (BJP) ಪಕ್ಷ ಸೇರ್ಪಡೆಯಾಗಲಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಪಕ್ಷ ಸೇರ್ಪಡೆಯಾಗಬೇಕು. ನಾವು ಪಕ್ಷ ಸೇರ್ಪಡೆಯಾಗುವುದೇ ಟ್ರೆಂಡ್ ಆಗಬೇಕು ಎಂಬುದಾಗಿ ಡಾ.ಮಂಜುನಾಥ್ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಂತ್ರ ರೂಪಿಸಿದ್ದರು.
ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರದಿಂದ ಡಾ.ಸಿ.ಎನ್.ಮಂಜುನಾಥ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು-ಕೊಡಗು (Mysuru -Kodagu) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಡಾ.ಮಂಜುನಾಥ್, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಹೆಸರು ಮಾಡಿದ್ದಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ರಾಜಮನೆತನದವರು.
ಇಂತಹ ಇಬ್ಬರು ಗಣ್ಯರು ಅಧಿಕೃತವಾಗಿ ಬಿಜೆಪಿಯಿಂದ ಇದೀಗ ಟಿಕೆಟ್ ಪಡೆದಿರುವುದು ಸಾಮಾನ್ಯ ವಿಚಾರವೇ ಅಲ್ಲ. ಹೀಗಾಗಿ, ಈ ಇಬ್ಬರು ನಾಯಕರು ಕೂಡ ದೆಹಲಿ ಮಟ್ಟದಲ್ಲೇ ಪಕ್ಷ ಸೇರ್ಪಡೆಯಾದ್ರೆ ಉತ್ತಮ ಎಂಬುದು ಅವರವರ ಅನಿಸಿಕೆ, ಅಭಿಪ್ರಾಯ.
ದೆಹಲಿ ನಾಯಕರ ಮಟ್ಟದಲ್ಲೇನೋ ಸರಿ. ಆದ್ರೆ ಸೇರ್ಪಡೆ ಯಾವಾಗ ಮಾಡಿಕೊಳ್ಳುವುದು? ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿಯೇ ಪಕ್ಷ ಸೇರ್ಪಡೆಯಾದ್ರೆ ಬೆಲೆ ಇರಲಿದೆ. ಒಬ್ಬರು ರಾಜಮನೆತನದವರು, ಇನ್ನೊಬ್ಬರು ವೈದ್ಯಕೀಯ ಲೋಕದಲ್ಲಿ ಅಪಾರ ಹೆಸರು ಗಳಿಸಿರುವವರು. ಇಲ್ಲಿ ಪಕ್ಷ ಸೇರ್ಪಡೆ ಆಗುವುದರಿಂದ ಅಂತಹ ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ.
ಹೀಗಾಗಿ, ಒಂದು ದೆಹಲಿಗೆ ಹೋಗಿ ಸೇರೋಣ. ಇಲ್ಲವಾದ್ರೆ, ಮಾರ್ಚ್ 20 ರೊಳಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸೇರ್ಪಡೆಯಾಗೋಣ ಎಂದು ಅಂದಾಜಿಸಿರುವ ಉಭಯ ನಾಯಕರು.
#karnataka #bengaluru #mysuru #loksabhaelection #bjp