ಬಿದ್ದು ಗಾಯವಾಗುವುದು ಸಾಮಾನ್ಯ ಕೆಲವು ಬಾರಿ ಗಾಯಗಳು ಚಿಕ್ಕದಾಗಿದ್ದರೆ ಇನ್ನು ಹಲವು ಬಾರಿ ದೊಡ್ಡದಾಗಿರುತ್ತದೆ ಆದರೆ ಗಾಯಗಳು ವಾಸಿಯಾದ್ರು ಕಲೆಗಳು ಹಾಗೆ ಉಳಿದಿರುತ್ತವೆ. ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಸೈಕಲ್ ಹೊಡೆಯುವಾಗ ಬಿದ್ದು ಗಾಯ ಮಾಡಿಕೊಳ್ಳುವುದು ಹೆಚ್ಚು. ಅದರ ಜೊತೆಗೆ ದೊಡ್ಡವರು ಅಪಘಾತದಲ್ಲಿ ಗಾಯಗೊಂಡದೆ ಕೆಲವು ಬಾರಿ ಆ ಮಾರ್ಗಗಳು ಕೂಡ ಹೋಗೋದಿಲ್ಲ. ಬಿದ್ದು ಗಾಯವಾದ ಕಲೆಗಳನ್ನು ಶಮನ ಮಾಡುವುದಕ್ಕೆ ಈ ಸಿಂಪಲ್ ಮನೆಮದ್ದುಗಳನ್ನ ಬಳಸಿ.
ತೆಂಗಿನ ಎಣ್ಣೆ
ಬಿದ್ದು ಗಾಯವಾಗಿದ್ದರೆ ತೆಂಗಿನ ಎಣ್ಣೆಯನ್ನು ಪ್ರತಿದಿನ ಅದರ ಮೇಲೆ ಹಚ್ಚುವುದರಿಂದ ನೋವು ಹಾಗೂ ಗಾಯ ತಕ್ಷಣಕ್ಕೆ ನಿವಾರಣೆಯಾಗುತ್ತದೆ ಒಣಗುತ್ತದೆ ಹಾಗೂ ಕಲೆಗಳು ಕೂಡ ಉಳಿಯುವುದಿಲ್ಲ. ಈ ಗಾಯವನ್ನ ಹೋಗಲಾಡಿಸುವುದಕ್ಕೆ ಸ್ವಲ್ಪ ದಿನಗಳು ಬೇಕಾಗುತ್ತದೆ ಆದರೆ ತಪ್ಪದೇ ಪ್ರತಿದಿನ ತೆಂಗಿನ ಎಣ್ಣೆಯನ್ನು ಹಚ್ಚುವುದು ಉತ್ತಮ.
ನಿಂಬೆಹಣ್ಣು
ಬಿದ್ದಗಾಯ ಒಣಗಿದ ನಂತರ ಪ್ರತಿ ದಿನ ಗಾಯದ ಗುರುತಿನ ಮೇಲೆ ನಿಂಬೆಹಣ್ಣಿನ ರಸವನ್ನ ಹಚ್ಚಿ.ಇದರಲ್ಲಿ ಸಿಟ್ರಿಕ್ ಅಂಶ ಇರುವುದರಿಂದ ಕಲೆಗಳನ್ನ ತಕ್ಷಣಕ್ಕೆ ಶಮನ ಮಾಡುತ್ತದೆ ಹಾಗೂ ಸತ್ತ ಡೆಡ್ ಸ್ಕಿಲ್ ಡೆಡ್ ಸ್ಕಿನ್ ಅನ್ನ ತೆಗೆದುಹಾಕುತ್ತದೆ. ಆದರೆ ಗಾಯ ಹಸಿ ಇದ್ದಾಗಲೇ ನಿಂಬೆ ರಸವನ್ನ ಹಚ್ಚುವುದರಿಂದ ಉರಿ ಹೆಚ್ಚಾಗುತ್ತದೆ.
ತುಪ್ಪ
ಬಿದ್ದ ಗಾಯದ ಗುರುತನ್ನ ಹೋಗಲಾಡಿಸುವುದಕ್ಕೆ ತುಪ್ಪ ಉತ್ತಮ ಮನೆ ಮದ್ದು. ಮಾಯವಾದ ಎರಡು ದಿನದ ನಂತರ ಆ ಜಾಗದಲ್ಲಿ ತುಪ್ಪವನ್ನು ಹಚ್ಚುವುದರಿಂದ ಕಲೆಗಳು ಶಮನವಾಗುವುದು ಪಕ್ಕ.
ಅಲೋವೆರಾ ಜೆಲ್
ಯಾವುದೇ ಒಂದು ಚರ್ಮದ ಕಲೆಗಳನ್ನ ಹೋಗಲಾಡಿಸುವುದಕ್ಕೆ ಅಲೋವೆರ ಜೆಲ್ ಉತ್ತಮ ಮನೆ ಮದ್ದು. ಚರ್ಮದ ಹೊಳಪನ್ನ ಹೆಚ್ಚಿಸುತ್ತದೆ ಡೆಡ್ ಸ್ಕಿನ್ ತೆಗೆದು ಹಾಕುತ್ತದೆ.