ಜಗದ್ವಿಖ್ಯಾತ ಐಪಿಎಲ್ 2024 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶುಕ್ರವಾರ ಚೆನ್ನೈನ ಚೆಪಾಕ್ ಅಂಗಳದಲ್ಲಿ ಐಪಿಎಲ್‌ಗೆ ಚಾಲನೆ ಸಿಗಲಿದೆ. ಈ ಟೂರ್ನಿಗಾಗಿ ಸ್ಟಾರ್ ಆಟಗಾರರು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಲಖ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಉಜ್ಜಯಿನಿಯ ಮಹಾಕಾಲೇಶ್ವರ ಆಶಿರ್ವಾದ ಪಡೆಡಿದ್ದಾರೆ.ಕನ್ನಡಿಗ ಕೆಎಲ್ ರಾಹುಲ್ ಮಹಾಕಾಲೇಶ್ವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ರಾಹುಲ್ ಟೆಂಪಲ್‌ಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಸತತ ಎರಡು ಬಾರಿ ಲಖ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ತಂಡಕ್ಕೆ ಚೊಚ್ಚಲ ಟ್ರೋಫಿ ಕೈಗೆತ್ತಿಕೊಳ್ಳುವ

ಕನಸು ಕಾಣುತ್ತಿದ್ದಾರೆ.
ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಬಹು ದಿನಗಳಿಂದ ಅಂಗಳದಿಂದ ದೂರ ಉಳಿದಿದ್ದರು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ರಾಹುಲ್, ಗಾಯಕ್ಕೆ ತುತ್ತಾದರು. ಅಲ್ಲಿಂದ ಇವರು ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಬಳಿಕ ಎನ್‌ಸಿಎ ಇವರನ್ನು ಫಿಟ್ ಎಂದು ಘೋಷಿಸಿದ ಬೆನ್ನಲ್ಲೆ, ಲಖ್ನೋ ತಂಡವನ್ನು ಸೇರಲು ತಯಾರಿ ನಡೆಸಿದ್ದಾರೆ.