
ಮಂಡ್ಯ : ಜೆಡಿಎಸ್ನವರಿಗೆ ತೆವಲು ಅನ್ನೋದಾ..? ಅಥವಾ ಮೈ ಪರಚಿಕೊಳ್ತಿದ್ದಾರೆ ಅನ್ನೋದಾ..? ಎಂದು ಜೆಡಿಎಸ್ ನಾಯಕರ ವಿರುದ್ಧ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಗುಡುಗಿದ್ದಾರೆ. ಜೆಡಿಎಸ್ನವರು ಸುಮ್ ಸುಮ್ನೆ ಮೈ ಪರ್ಚಿಕೊಂಡ್ರೆ ಏನ್ ಮಾಡೋಕ್ಕಾಗತ್ತೆ..? ಕೆಲವರು ವಿವಿ ಮುಚ್ಚಿ ಅಂತಾರೆ, ಕೆಲವರು ಬೇಡ ಅಂತಾರೆ. ಸಿಎಂ ಸಬ್ ಕಮಿಟಿ ಮಾಡಿದ್ದಾರೆ. ಅದರ ವರದಿ ಬರೋದಕ್ಕು ಮುನ್ನವೇ ಜೆಡಿಎಸ್ನವರು ಸುಮ್ ಸುಮ್ಮನೆ ಬಾವುಟ ಹಿಡಿದು ನಿಲ್ತಾರೆ. ಇದಕ್ಕೆ ಜೆಡಿಎಸ್ನವರಿಗೆ ತೆವಲು ಅನ್ನೋದಾ..? ಅಥವಾ ಮೈ ಪರಚಿಕೊಳ್ತಿದ್ದಾರೆ ಅನ್ನೋದಾ..? ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ ಕೃಷಿ ವಿವಿ ಸ್ಥಾಪನೆ ವಿಚಾರದಲ್ಲಿ ಸರ್ಕಾರ ಯೂಟರ್ನ್ ಹೊಡೆದ ಆರೋಪದ ಬಗ್ಗೆ ಮಾತನಾಡಿ, ಎಲ್ಲೂ ಇಲ್ಲದ ಮಾಹಿತಿಯನ್ನು ಮಂಡ್ಯ ಜೆಡಿಎಸ್ನವರು ಹುಟ್ಟಾಕ್ತಾರೆ ಎಂದಿರುವ ಸಚಿವರು, ನಾವು ಮಂಡ್ಯ ಕೃಷಿ ವಿವಿ ಬಗ್ಗೆ ಕ್ಯಾಬಿನೆಟ್ನಲ್ಲಿ ಅಪ್ರೂ ಮಾಡಿದ್ದೇವೆ. ಏನ್ ದುರಂತನೋ..? ಮಾಡೋ ಕೆಲ್ಸ ಎಲ್ಲಾ ನಾವೆ ಮಾಡ್ತೇವೆ. ಈ ಜಿಲ್ಲೆ ಜನರನ್ನ ಪ್ರೀತ್ಸೋರು ನಾವೆ. ಈ ಜಿಲ್ಲೆಯ ಅಭಿವೃದ್ಧಿ ಮಾಡ್ತಿರೋದು ನಾವೆ. ಈ ರಿತಿ ಇಲ್ಲ ಸಲ್ಲದನ್ನ ಮಾತನಾಡೋದು ಜನತಾದಳದ ಮಹಾ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

ದೇವರು ಟೀಕೆ ಮಾಡೋ ಅವಕಾಶವನ್ನು ಸದಾ ಜೆಡಿಎಸ್ ಅವರಿಗೆ ಕೊಡಲಿ. ಕೆಲಸ ಮಾಡೋ ಅವಕಾಶ ನಮಗೆ ಕೊಡಲಿ, ಟೀಕೆ ಮಾಡೋ ಅವಕಾಶ ಅವರಿಗೆ ಕೊಡಲಿ. ಟೀಕೆ ಮಾಡೋರಿಗೆ ನಮ್ಮ ಕೆಲಸವೇ ಉತ್ತರ ಎಂದಿದ್ದಾರೆ. ಹೆಚ್.ಡಿ ರೇವಣ್ಣ ಮಂಡ್ಯ ವಿಚಾರದಲ್ಲಿ ಪ್ರಶ್ನೆ ಮಾಡಿದ್ದಾರೆ. ಇಲ್ಲಿಯ ಜನ ಜನತಾದಳಕ್ಕೆ ಓಟ್ ಹಾಕಿಲ್ವಾ..? ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಇಷ್ಟೊತ್ತಿಗೆ ರೇವಣ್ಣ ಮನೆ ಬಳಿ ಪ್ರತಿಭಟನೆ ಮಾಡಬೇಕಿತ್ತು. ಇಡೀ ಮಂಡ್ಯ ಜನ ಜನತಾದಳಕ್ಕೆ ಬೆಂಬಲ ಕೊಟ್ರು. ನೀವು ಮಂಡ್ಯ ಬಗ್ಗೆ ಅಸಮಧಾನ ವ್ಯಕ್ತಪಡಿಸ್ತಿರಾ..? ಅಂತ ಪ್ರತಿಭಟನೆ ಮಾಡಬೇಕಿತ್ತು ಎಂದಿದ್ದಾರೆ.

ಕುಮಾರಸ್ವಾಮಿ ಕೂಡ ರೇವಣ್ಣನಿಗೆ ಈ ರೀತಿ ಮಾತಾಡಬೇಡ ಅಂತ ತಿಳುವಳಿಕೆ ಹೇಳಬೇಕಿತ್ತು. ಮಂಡ್ಯದವ್ರು ಕುಮಾರಸ್ವಾಮಿಯನ್ನ ಎಂಪಿ ಮಾಡಿದ್ದೇ ತಪ್ಪಾ..? ಇಲ್ಲಿನ ಜನರ ವೋಟು ಬೇಕು, ಶಕ್ತಿ ತುಂಬೋಕೆ ಮಂಡ್ಯ ಬೇಕು. ಕೆಲಸ, ಅಭಿವೃದ್ಧಿ, ಸಮಸ್ಯೆ ಬಂದಾಗ ಜಾರಿಕೊಳ್ತಾರೆ. ಮಂಡ್ಯದ ಜನ ಇವತ್ತಲ್ಲಾ ನಾಳೆ ಎಲ್ಲವನ್ನು ತಿಳಿದುಕೊಳ್ತಾರೆ ಎನ್ನುವ ಮೂಲಕ ಅಭಿವೃದ್ಧಿ ಮಾಡುವ ನಮ್ಮನ್ನು ಗೆಲ್ಲಿಸ್ತಾರೆ ಎಂದು ಪರೋಕ್ಷವಾಗಿ ಗುಡುಗಿದ್ದಾರೆ.