• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಮಹಿಳೆಯರು ಅಂಡರ್‌ 19 ವರ್ಲ್ಡ್‌ ಕಪ್‌ ಗೆದ್ರು.. ಪುರುಷರು ಸರಣಿ ಗೆದ್ರು..

ಕೃಷ್ಣ ಮಣಿ by ಕೃಷ್ಣ ಮಣಿ
February 3, 2025
in ಕ್ರೀಡೆ, ದೇಶ
0
ಮಹಿಳೆಯರು ಅಂಡರ್‌ 19 ವರ್ಲ್ಡ್‌ ಕಪ್‌ ಗೆದ್ರು.. ಪುರುಷರು ಸರಣಿ ಗೆದ್ರು..
Share on WhatsAppShare on FacebookShare on Telegram

ಭಾರತ ಅಂಡರ್‌‌ 19 ವನಿತೆಯರ ಕ್ರಿಕೆಟ್‌ ತಂಡ ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ. ಈ ಹಿಂದೆ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದ್ದ ಕಿರಿಯರ ತಂಡ, ಇದೀಗ ಎರಡನೇ ಆವೃತ್ತಿಯಲ್ಲೂ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ. ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ವು. ಹರಿಣಗಳ ವಿರುದ್ಧ 9 ವಿಕೆಟ್‌‌ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ADVERTISEMENT

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 20 ಓವರ್​ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್​ಗಳನ್ನು ಮಾತ್ರ ಗಳಿಸಿತು. ಭಾರತದ ಪರ ಬೌಲರ್ಸ್​ ಮಿಂಚಿನ ಬೌಲಿಂಗ್ ಮಾಡಿ ಆಫ್ರಿಕಾ ತಂಡವನ್ನು ಹೆಡೆಮುರಿ ಕಟ್ಟಿದ್ರು. ತಂಡದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದ್ರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ 2 ವಿಕೆಟ್ ಪಡೆದರು.

CP Yogeshwara​ ಜೊತೆ ವಾಟರ್​ ಬೈಕ್ ರೈಡ್​ ಮಾಡಿದ DK Suresh​..  #pratidhvani

ಕೇವಲ 83 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾದ ಯುವತಿಯರು, 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದ್ರು. ಬೌಲಿಂಗ್​ನಲ್ಲೂ ಮಿಂಚಿದ್ದ ತ್ರಿಷಾ, ಬ್ಯಾಟಿಂಗ್​ನಲ್ಲೂ 8 ಫೋರ್ ಸಮೇತ 44 ರನ್​ ಸಿಡಿಸಿದರು. ಸಾನಿಕಾ ಚಲ್ಕೆ 26 ರನ್​ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು 84 ರನ್​ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.

ಇಂಗ್ಲೆಂಡ್​ ವಿರುದ್ಧದ 5ನೇ ಹಾಗೂ ಕೊನೆ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ದಿಗ್ವಿಜಯ ಸಾಧಿಸಿದೆ. ಬರೋಬ್ಬರಿ 150 ರನ್​ಗಳ ಜಯ ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಅಭಿಷೇಕ್​ ವಿಶ್ವದಾಖಲೆ ಶತಕದೊಂದಿಗೆ 247 ರನ್​ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್10.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟ್ ಆಗಿದೆ.ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ಕೊನೆ ಒಂದ್ಯದ ಹೀರೋ ಅಭಿಷೇಕ್ ಶರ್ಮಾ. ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ ಅಭಿಷೇಕ್ ಶರ್ಮಾ, ಅತಿ ವೇಗದ ಶತಕ ಬಾರಿಸಿದ 3ನೇ ಆಟಗಾರನಾದರು. ರೋಹಿತ್ ಶರ್ಮಾ & ಡೇವಿಡ್ ಮಿಲ್ಲರ್​ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಾಗೇ ಟಿ-20ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಅಂದರೆ 13 ಸಿಕ್ಸರ್ ಬಾರಿಸಿದ್ದರು ಅಭಿಷೇಕ್. ಅಷ್ಟೇ ಅಲ್ಲ ಟಿ-20ನಲ್ಲಿ ಭಾರತದ ಪರ ಅತಿ ಹೆಚ್ಚು ರನ್​ ಅಂದರೆ 135 ಬಾರಿಸಿದ ದಾಖಲೆ ಅಭಿಷೇಕ್ ಶರ್ಮಾ ಪಾಲಾಯ್ತು.

Tags: icc u19 women's world cupicc under 19 womens t20 world cup liveicc women's t20 world cup 2023india women u19 vs south africa women u19 livepoints table u19 women t20 world cup 2023u19 cricket world cupu19 womens t20 world cup final liveu19 world cupwomen t20 world cup 2023 points tablewomen u19 world cup 2025 live kaise dekhewomen world cup 2023womens t20 world cup 2025 live
Previous Post

ರಾಜಕೀಯ ಸಲಹೆಗಾರನ ರಾಜೀನಾಮೆ ಅಂಗೀಕಾರ ಆಗುತ್ತಾ..?

Next Post

ತುಳಸಿ: ಆರೋಗ್ಯದ ಪ್ರಕೃತಿಯ ವರದಾನ

Related Posts

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌
Top Story

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

by ಪ್ರತಿಧ್ವನಿ
April 21, 2026
0

ಕೃಷ್ಣಗಿರಿ : ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ. ಇದನ್ನು ಅರಿತೇ ಪನ್ನೀರ್‌ ಸೆಲ್ವಂ ಡಿಎಂಕೆ ಸೇರಿದ್ದಾರೆ ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.‌ https://youtu.be/Qq4ttLUbePI?si=fsnxrvw_HfnTQXm3 ತಮಿಳುನಾಡಿನ...

Read moreDetails
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ತುಳಸಿ: ಆರೋಗ್ಯದ ಪ್ರಕೃತಿಯ ವರದಾನ

ತುಳಸಿ: ಆರೋಗ್ಯದ ಪ್ರಕೃತಿಯ ವರದಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada