ಸಿಎಂ ಸಿದ್ದರಾಮಯ್ಯ (Cm siddaramaiah) ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ಕಳೆದ ಒಂದು ವರ್ಷದಿಂದ ಜಾರಿಗೆ ತಂದಿರುವ ಗೃಹಲಕ್ಷ್ಮೀ (Gruha lakshmi) ಯೋಜನೆಯಿಂದ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ.
ಈ ರೀತಿ ಸರ್ಕಾರದಿಂದ ಬಂದ ಹಣವನ್ನು ಪ್ರತಿ ತಿಂಗಳು ಕೂಡಿಟ್ಟು, ವೃದ್ಧ ಮಹಿಳೆಯೊಬ್ಬರು ತನ್ನ ಪುತ್ರನಿಗೆ ಬೈಕ್ (Bike) ಕೊಡಿಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯಲ್ಲಿ ತಾಯಿಯೊಬ್ಬರು ಈ ರೀತಿ ತನ್ನ ಮಗನಿಗೆ ಬೈಕ್ ಕೊಡಿಸುವ ಮೂಲಕ ದಸರಾ ಹಬ್ಬ ಆಚರಿಸಿದ್ದಾರೆ.
ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ಗೃಹಲಕ್ಷ್ಮಿ ಹಣದಲ್ಲಿ ಬೈಕ್ ಕೊಡಿಸಿದ್ದಾರೆ. ಆಯುಧ ಪೂಜೆಯ ವಿಶೇಷ ದಿನದಂದೇ ಶೋ ರೂಮಿನಿಂದ ಬೈಕ್ ಪಡೆದು, ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಈ ಹಿನ್ನಲೆ ಗೃಹಲಕ್ಷ್ಮಿ ಯೋಜನೆಗೆ ಮಹಿಳೆ ಧನ್ಯವಾದ ಹೇಳಿದ್ದಾರೆ.