ಮತಾಂತರ ಮಾಡುತ್ತಿದ್ದರು ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗದಗದ ಮುಳುಗುಂದ ನಾಕಾ ಬಳಿ ನಡೆದಿದೆ.
ಮೀನಾಜ್ ಭೇಫಾರಿ(35) ಕೊಲೆಗೀಡಾದ ಮಹಿಳೆ. ಬೆಳ್ಳಗ್ಗೆ ರಾಧಾಕೃಷ್ಣ ನಗರದ ಬೇಕರಿ ಒಂದರಿಂಧ ತಿನಿಸುಗಳನ್ನು ಖರೀದಿಸಿ ವಾಪಸ್ ಆಗುವ ವೇಳೆ ಬಂಧ ಮೂವರು ವ್ಯಕ್ತಿಗಳು ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಆರೋಪಿಗಳು ಘಟನೆ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾರೆ. ಚೇತನ್ ಹುಳ್ಳಕಣ್ಣನವರ, ಶ್ರೀನಿವಾಸ್ ಶಿಂಧೆ, ಕುಮಾರ ಮಾರಬಸರಿ ಕೊಲೆ ಮಾಡಿರುವ ವ್ಯಕ್ತಿಗಳು.
ಮೊದಲಿಗೆ ಹಿಂದೂ ಧರ್ಮದಲ್ಲಿದ್ದ ಮಹಿಳೆಯ ಮೂಲ ಹೆಸರು ಶೋಭಾ ಲಮಾಣಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಮೀನಾಜ್ ಭೇಫಾರಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.