ಸುಮ್ಮನಹಳ್ಳಿ ಬ್ರಿಜ್ ಸಮೀಪ ತಮ್ಮ ಬೈಕ್ ಗೆ ಬಸ್ ಟಚ್ ಆಗಿದ್ದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಮಹಿಳೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಸುಮನಹಳ್ಳಿ ಬ್ರಿಡ್ಜ್ ಬಳಿ ಬಸ್ ಅಡ್ಡಗಟ್ಟಿ ಒಳ ಹತ್ತಿದ ಮಹಿಳೆ ಚಾಲಕನನ್ನ ಎಳೆದು ಹಲ್ಲೆ ನಡೆಸಿದ್ದಾಳೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಿಂದ ಕೆ.ಆರ್ ಮಾರ್ಕೆಟ್‌ಗೆ ಹೋಗ್ತಿದ್ದ ಬಸ್ ಸವಿತಾ ಎಂಬ ಮಹಿಳೆ ವಾಹನಕ್ಕೆ ಟಚ್ ಆಗಿತ್ತು. ಇದ್ರಿಂದ ಕೋಪಗೊಂಡ ಮಹಿಳೆ ಬಸ್ ಹತ್ತಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬಸ್‌ನಲ್ಲೇ ಡ್ರೈವರ್ ಅಮರೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಈಗ ಖಾಸಗಿ ಆಸ್ಪತ್ರೆಯಲ್ಲಿ ಚಾಲಕ ಅಮರೇಶ್‌ಗೆ ಚಿಕಿತ್ಸೆ ನೀಡಲಾಗ್ತಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಾಗಿದ್ದು, ಮಹಿಳೆಯಿಂದಲೂ ಬಿಎಂಟಿಸಿ ಚಾಲಕನ ವಿರುದ್ಧ ದೂರು ದಾಖಲಾಗಿದೆ.