ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹದೇವಪುರದಲ್ಲಿ ಕಳೆದ ಎರಡು ತಿಂಗಳ ಹಿಂದೆಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
23 ವರ್ಷದ ಅನುಷಾ ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿ ಅನುಷಾ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರವೀಣ್ ಹಾಗೂ ಅನುಷಾ ಮಂಡ್ಯ ಜಿಲ್ಲೆಯ ಮಳ್ಳವಳಿ ಮೂಲದವರು. ಆದ್ರೆ ಅವರು ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಯ್ಯಪಾಳ್ಯದಲ್ಲಿ ವಾಸವಾಗಿದ್ದರು. ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್ ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಪತಿಯ ಕುಟುಂಬದರಿಂದ ಯುವತಿಗೆ ಹಲ್ಲೆ, ಮತ್ತು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.