ಮಹಾರಾಷ್ಟ್ರದಲ್ಲಿ ಶಿವಸೇನೆ ರೆಬೆಲ್ ಶಾಸಕರೊಂದಿಗೆ ಸರ್ಕಾರ ರಚಿಸಿದ ನಂತರ ತನ್ನ ಆತ್ಮ ವಿಶ್ವಾಸವನ್ನ ಹೆಚ್ಚಿಸಕೊಂಡಿರುವ ಬಿಜೆಪಿ ಹೈ ಕಮಾಂಡ್ ದಕ್ಷಿಣದ ರಾಜ್ಯಗಳ ಮೇಲೆ ವಿಶೇಷವಾಗಿ ತೆಲಂಗಾಣದ ಮೇಲೆ ತನ್ನ ದೃಷ್ಟಿಯನ್ನ ನೆಟ್ಟಿದೆ. ಶನಿವಾರ ಶುರುವಾಗುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದಕ್ಕೆ ಉತ್ತಮ ನಿದರ್ಶನವಾಗಿದೆ.
ಇದು 2014ರಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರ ರಾಜಧಾನಿ ದೆಹಲಿಯ ಹೊರತಾಗಿ 3ನೇ ಭಾರೀ ಹೊರರಾಜ್ಯದಲ್ಲಿ ಸಭೆಯನ್ನು ನಡೆಸುತ್ತಿದೆ. 18 ವರ್ಷಗಳ ನಂತರ ಬಿಜೆಪಿ ರಾಜ್ಯ ರಾಜಧಾನಿ ಹೈದರಬಾದಿನಲ್ಲಿ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ.
ಹೊಸ ಜಲಾನಯನ ಪ್ರದೇಶವಾದ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಸಲುವಾಗಿ ಜುಲೈ 3ರಂದು ಪ್ರಧಾನಿ ನರೇಂದ್ರ ಮೋದಿ ಹೈದರಬಾದಿನಲ್ಲಿ ತೆಲಂಗಾಣದ ಸಂಸ್ಕೃತಿ, ಸಂಪ್ರದಾಯದ ಕುರಿತಾಗಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ತೆಲಂಗಾಣದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಹೆಣಗಾಡುತ್ತಿರುವ ಸಮಯದಲ್ಲಿ ಕೆ.ಚಂದ್ರಶೇಖರ್ ನೇತೃತ್ವದ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಕೇಸರಿ ಪಾಳಯಕ್ಕೆ ಸವಾಲೆಸೆಯಲು ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಸಮಾವೇಶದ ಪೂರ್ವಭಾವಿ ಸಿದ್ದತೆಯಾಗಿ 119 ವಿಧಾನಸಭಾ ಕ್ಷೇತ್ರಗಳ ನಾಯಕರೊಂದಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಈಗಾಗಲೇ ಸಭೆ ನಡೆಸಿದ್ದು ಇದಕ್ಕೆ ಪೂರಕವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ನಡೆದ ಚುನಾವಣ ಫಲಿತಾಂಶವನ್ನ ನೋಡಿದರೆ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಹೈದರಾಬದ್ ಮುನ್ಸಿಪಾಲ್ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಗೆದ್ದು ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆದಿತ್ತು. 2019ರ ಸಾರ್ವತ್ರಿಕ ಚುನಾವಣೆಯಲ್ಲು ಬಿಜೆಪಿ 17 ಸ್ಥಾನಗಳ ಪೈಕಿ 4ರಲ್ಲಿ ಗೆದ್ದು ಉತ್ತಮ ಸಾಧನೆ ಮಾಡಿತ್ತು.
ಶನಿವಾರ ಮಧ್ಯಾಹ್ನ ಆರಂಭವಾಗುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಭಾಷಣದೊಂದಿಗೆ ಪ್ರಾಂಭವಾದರೆ ಮೋದಿಯವರ ಭಾಷಣದಿಂದ ಭಾನುವಾರ ಸಂಜೆ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.
ಸಭೆಯಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳ ಸಾಂಸ್ಥಿಕ ಪಟ್ಟಿಯ ವರದಿಯನ್ನು ರಾಜ್ಯಗಳ ನಾಯಕರು ಬಿಜೆಪಿ ವರಿಷ್ಠರಿಗೆ ಸಲ್ಲಿಸಲಿದ್ದಾರೆ.