ಶಿವಮೊಗ್ಗ : ಡಿ.ಕೆ. ಶಿವಕುಮಾರ್ ಗೆ, ಸಿದ್ಧರಾಮಯ್ಯಗೆ ಭಾಷೆಗಳ ಬಗ್ಗೆ ಹಿಡಿತವೇ ಇಲ್ಲ. ಇವರನ್ನು ಈಗಾಗಲೇ ರಾಜ್ಯದ ಜನರು ತಿರಸ್ಕಾರ ಮಾಡಿದ್ದಾರೆ. ತಿರಸ್ಕಾರ ಮಾಡಿದ ಮುಖಗಳನ್ನು ಇಟ್ಟುಕೊಂಡು ಮತ್ತೆ ಹೋದರೆ, ಜನರು ಪುರಸ್ಕರಿಸುತ್ತಾರಾ…!? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಕುರಿತು ಮಾತನಾಡಿ, ಮೊದಲು ನರೇಂದ್ರ ಮೋದಿಗೆ ನರಹಂತಕ ಎಂದರು. ಬಳಿಕ ಪರ್ಸಂಟೇಜ್ ವ್ಯವಹಾರ ಎಂದು ಟೀಕೆ ಮಾಡಿದರು. ಈಗ ಪೇ ಸಿಎಂ ಎಂದು ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನ ಇವೆಲ್ಲಾ ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಚುನಾವಣೆಯಲ್ಲಿ ಕೊಡುತ್ತಾರೆ. ನಾವು ಏನು ಅಭಿವೃದ್ಧಿ ಮಾಡಿದ್ದೆವೆ ಎಂದು ಜನ ಗಮನಿಸುತ್ತಿದ್ದಾರೆ. ಟೀಕೆ ಮಾಡುವ ಪದಗಳು ಸರಿಯಿಲ್ಲ. ನಮಗೂ ಆ ಭಾಷೆ ಬಳಸಲು ಬರುತ್ತದೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ನಾಯಕರಿಲ್ಲದೇ ನಾಯಕರಿಲ್ಲದೇ ಕಾಂಗ್ರೆಸ್ ಸೊರಗುತ್ತಿದೆ
ಪದೇ ಪದೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುವ ಬಗ್ಗೆ ಕಾಂಗ್ರೆಸ್ ಟೀಕೆ ಕುರಿತು ಪ್ರತಿಕ್ರಿಯಿಸಿ, ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಎಲ್ಲೆಡೆ ಹೋಗ್ತಾರೆ. ಸಮಾವೇಶಗಳನ್ನು ಮಾಡಿಕೊಂಡು ಅವರಿಬ್ಬರು ಓಡಾಡ್ತಿದ್ದಾರೆ. ಅವರಿಬ್ಬರು ಬಾಯಿಗೆ ಬಂದಂತೆ ಮಾತಾಡ್ತಾ ಓಡಾಡ್ತ ಇದ್ದಾರೆ. ರಾಷ್ಟ್ರೀಯ ನಾಯಕರಿಲ್ಲದೇ ಕಾಂಗ್ರೆಸ್ ಸೊರಗುತ್ತಿದೆ. ನಮ್ಮಲ್ಲಿ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಕೂಡ ಇದ್ದಾರೆ. ರಾಜ್ಯಕ್ಕೆ ಪಕ್ಷ ಸಂಘಟನೆಗೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಹಾಗೂ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ ಎಂದು ತಿರುಗೇಟು ನೀಡಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸೋಲಲಿದ್ದಾರೆ
ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಸಿದ್ಧರಾಮಯ್ಯರಿಗೆ ಯಡಿಯೂರಪ್ಪ ಹೇಳಿದ್ದರು. ಆ ಮಾತನ್ನು ಕೂಡ ಅವರು ಕೇಳುತ್ತಿಲ್ಲ. ಏನೋ ಹಿರಿಯರಾಗಿ ಸಲಹೆ ಕೊಟ್ಟಿದ್ದರು. ಅದನ್ನು ಕೂಡ ಅವರು ತಿರಸ್ಕರಿಸಿದ್ದಾರೆ. ಹಿರಿಯರ ಮಾರ್ಗದರ್ಶನ ಬೇಕು ಎಂದರೆ, ಅವರ ಮಾತು ಕೇಳಬಹುದಿತ್ತು. ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರ ಯಾವುದೆಂದೇ ಗೊತ್ತಿಲ್ಲ. ಆದರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದೇ ವೇಳೆ ಹೈ ಕಮಾಂಡ್ ಹೇಳಿದ ಕಡೆ ಸ್ಪರ್ಧಿಸುವುದಾಗಿ ಹೇಳುತ್ತಾರೆ. ಹಾಗಾದರೆ ಹೈ ಕಮಾಂಡ್ ಕೋಲಾರದಿಂದ ಸ್ಪರ್ಧಿಸಲು ಸೂಚಿಸಿದೆಯೇ…? ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದೂ ಇಲ್ಲ. ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮುನಿಯಪ್ಪ ಮತ್ತು ಶ್ರೀನಿವಾಸ್ ಪ್ರಸಾದ್ ಅವರೇ ಸಿದ್ದರಾಮಯ್ಯ ಗೆಲ್ಲಲು ಬಿಡುವುದಿಲ್ಲ. ಇವರೆಲ್ಲರ ಸೋಲಿಗೆ ಸಿದ್ದರಾಮಯ್ಯ ಕಾರಣವಾಗಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಜಮೀರ್ ಅಹ್ಮದ್ ರ ಚಾಮರಾಜನಗರ ಕ್ಷೇತ್ರ ಸುರಕ್ಷಿತ. ಏಕೆಂದರೆ ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ಅವರು ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಉಳಿದಂತೆ ರಾಜ್ಯದ 223 ಕ್ಷೇತ್ರದಲ್ಲಿಯೂ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದರು.
ಎಂಎಲ್ಸಿ ವಿಶ್ವನಾಥ್ ಕಾಂಗ್ರೆಸ್ ಗೆ ಹೋಗುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂತೋಷ ಅವರು ಕಾಂಗ್ರೆಸ್ ಸೇರಿದಂತೆ ಎಲ್ಲಿಗಾದರೂ ಹೋಗಲಿ, ಬೇಡ ಎಂದವರು ಯಾರು.ನಾವು ಯಾವ ಮಠಾಧೀಶರನ್ನೂ ಪಕ್ಷಕ್ಕೆ ಆಹ್ವಾನಿಸಿಲ್ಲ. ಅದು ವಿಶ್ವನಾಥ್ ಗೆ ಗೊತ್ತಿರಬಹುದು ಎಂದು ತಿಳಿಸಿದರು.
ನಾಳೆಯಿಂದ ವಿಜಯ ಸಂಕಲ್ಪ ಯಾತ್ರೆ
ನಾಳೆಯಿಂದ ವಿಜಯ ಸಂಕಲ್ಪ ಯಾತ್ರೆ ನಾಲ್ಕು ದಿಕ್ಕುಗಳಿಂದ ಪ್ರಾರಂಭವಾಗಲಿದೆ. ಚಾಮರಾಜನಗರದಿಂದ ನಾಳೆ(ಮಾರ್ಚ್ 1) ವಿಜಯ ಸಂಕಲ್ಪ ಯಾತ್ರೆ ಹೊರಡಲಿದ್ದು, ಜೆ.ಪಿ. ನಡ್ಡಾ ಅವರು ಈ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.