ಚಿಕ್ಕಬಳ್ಳಾಪುರದಲ್ಲಿ (Chikkaballapur) ಕಾರು ಚಾಲಕ ಬಾಬು (Car driver babu) ಆತ್ಮಹತ್ಯೆಗೆ ಶರಣಾದ ಪ್ರಕರಣದ ತನಿಖೆಯನ್ನ ಪೊಲೀಸರು ತೀವ್ರಗೊಳಿಸಿದ್ದು, ಮೃತನ ಡೆತ್ ನೋಟ್ ನಲ್ಲಿ (Death note) ಸಂಸದ ಸುಧಾಕರ್ ಹೆಸರು ಉಲ್ಲೇಖ ಆಗಿರುವುದರಿಂದ, ಸಂಸದ ಸುಧಾಕರ್ ಮತ್ತು ಮೃತ ಬಾಬು ನಡುವಿನ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಕಾರು ಚಾಲಕ ಬಾಬು ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ಸಂಸದ ಸುಧಾಕರ್ ರನ್ನು ಭೇಟಿ ಮಾಡಲು, ಕರೆ ಮಾಫಿ ಸಂಪರ್ಕಿಸಲು ಪ್ರಯತ್ನಪಟ್ಟ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಡೆತ್‌ನೋಟ್‌ನಲ್ಲಿರೋ ಅಂಶಗಳ ಬಗ್ಗೆ ತನಿಖೆ ನಡೆಸಲಿದ್ದಾರೆ.

ಈ ಡೆತ್ ನೋಟ್‌ನಲ್ಲಿ ನೇರವಾಗಿ ಸುಧಾಕರ್ ಅವರ ಹೆಸರು ಉಲ್ಲೇಖಿಸಿರೋದ್ರಿಂದ, ಪೊಲೀಸರು ಈಗಾಗಲೇ ಸಂಸದ ಸುಧಾಕರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹೀಗಾಗ ತನಿಖೆ ವೇಳೆ ಸುಧಾಕರ್ ವಿರುದ್ಧ ಅಂಶಗಳು ಪತ್ತೆಯಾದರೆ ಸಂಸದ ಸುಧಾಕರ್ ಅರೆಸ್ಟ್ ಕೂಡ ಆಗುವ ಸಾಧ್ಯತೆಯಿದೆ.