ವಿಜಯಪುರದಲ್ಲಿ (Vijayapura) ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ವೇಳೆ ಎಐಸಿಸಿ ಅಧ್ಯಕ್ಷ (AICC) ಮಲ್ಲಿಕಾರ್ಜುನ ಖರ್ಗೆ (Mallikarjuna kharge) ತಮಗೆ ಈ ಹಿಂದೆ ಯಾವ ರೀತಿ ಸಿಎಂ ಸ್ಥಾನ ಕೈತಪ್ಪಿತು ಎಂಬ ಕುರಿತು ನೀಡಿದ ಹೇಳಿಕೆ, ವ್ಯಕ್ತಪಡಿಸಿದ ಬೇಸರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.

ಇದಕ್ಕೆ ಕಾರಣವಿದೆ..ಇನ್ನು 7 ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ರಾಜ್ಯಸಭಾ ಅವಧಿ ಮುಕ್ತಾಯವಾಗಲಿದೆ .ರಾಜ್ಯಸಭಾ ಅವಧಿ ಮುಗಿಯುವ ಹೊತ್ತಲ್ಲೇ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಿಎಂ ಸ್ಥಾನದ ಆಕಾಂಕ್ಷೆ ಹೊರ ಹಾಕಿರುವುದು ಈ ಸಂಚಲನಕ್ಕೆ ಕಾರಣವಾಗಿದೆ.

ಹೌದು, ಐದೂ ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವ ನಡುವೆಯೂ, ಸಿಎಂ ಗಾದಿ ಕೈತಪ್ಪಿರುವುದನ್ನ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿರುವುದು..ಖರ್ಗೆ ರಾಜ್ಯ ರಾಜಕಾರಣ ಪ್ರವೇಶಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎನ್ನಲಾಗುತ್ತಿದೆ.
ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಮುಂದಿನ ರಾಜಕೀಯ ನಿರ್ಧಾರವನ್ನು ಖರ್ಗೆಯವರೇ ನಿರ್ಧರಿಸುತ್ತಾರೆ. ಇದಕ್ಕೆ ರಾಹುಲ್ ಗಾಂಧಿ ಒಪ್ಪಬಹುದು ಎಂದು ಹೇಳಿರೋದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.