ರಾಜ್ಯ ರಾಜಕಾರಣದಲ್ಲಿ 2023ರ ಚುನಾವಣಾ ಕಾವು ಪಡೆದುಕೊಳ್ಳುತ್ತಿದ್ದು ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಎಎಪಿ-ಜೆಡಿಎಸ್ ತಮ್ಮದೇ ತಂತ್ರಗಾರಿಕೆ ಹೆಣೆಯುವುದರಲ್ಲಿ ನಿರತವಾಗಿವೆ.
ಇನ್ನು ಗಣಿ-ಧನಿ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿ ಡಿಸೆಂಬರ್ 25ರಂದು ತಮ್ಮ ಮುಂದಿನ ರಾಜಕೀಯ ನಡೆಯನ್ನು ಘೋಷಿಸುವುದಾಗಿ ಹೇಳಿದ್ದರು ಮತ್ತು ಅದಕ್ಕೆ ಪೂರಕವೆಂಬಂತೆ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪತಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದರು.
ಇನ್ನು ಜರ್ನಾದನ ರೆಡ್ಡಿ ಹೊಸ ಪಕ್ಷ ಕಟ್ಟುತ್ತಾರ ಅಥವಾ ಬಿಜೆಪಿಯಲ್ಲೇ ಉಳಿಯುತ್ತರಾ ಎಂಬ ಕುತೂಹಲ ಮೂಡಿಸಿದ್ದು ಸುದ್ದಿಗೋಷ್ಠಿಯಲ್ಲಿ ಅದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಈ ಹಿಂದೆ ಜರ್ನಾದನ್ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾಗ ಶ್ರೀರಾಮುಲು-ಬಿ.ಎಸ್.ಯಡಿಯೂರಪ್ಪರನ್ನು ಹೊರತುಪಡಿಸಿದ್ದರೆ ಉಳಿದೆಲ್ಲ ನಾಯಕರು ಅಂತರವನ್ನ ಕಾಯ್ದುಕೊಂಡಿದ್ದರು ಮತ್ತು ರೆಡ್ಡಿಯನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಿದ್ದರು.
ಇನ್ನು ಡಿಸೆಂಬರ್ 25ರ ಭಾನುವಾರದಂದು ತಮ್ಮ ಹೊಸ ಪಕ್ಷ ಕಲ್ಯಾಣ ಪ್ರಗತಿ ಪಕ್ಷವನ್ನ ಘೋಷಿಸಿದ್ದಾರೆ ಮತ್ತು ಗಂಗಾವತಿಗೆ ತಮ್ಮ ಪತ್ನಿ ಅರುಣಾ ಲಕ್ಷ್ಮೀ, ಗದಗದಿಂದ ಜರ್ನಾದನ ರೆಡ್ಡಿ ಸ್ಪರ್ದಿಸುವುದಾಗಿ ಘೋಷಿಸಿದ್ದಾರೆ.
ಜನವರಿ 11ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶವನ್ನ ನಡೆಸಿ ಪಕ್ಷದ ಅಭ್ಯರ್ಥಿಗಳನ್ನ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಚಿವ ಶ್ರೀರಾಮುಲುಗೆ ಬಿಜೆಪಿ ಹೈಕಮಾಂಡ್ ನೀಡಿದ್ದ ಟಾಸ್ಕ್‌ನಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ.












