ದಸರಾ ಹಬ್ಬಕ್ಕಂತೂ ವೇತನ ಸಿಗಲಿಲ್ಲ. ದೀಪಾವಳಿಗಾದ್ರೂ ತಮ್ಮ ಬಾಕಿ ವೇತನ ಸಿಗುತ್ತದೆಯೇ ಎಂದು ಕಾದು ಕುಳುತಿವೆ ಈ ಶ್ರಮಜೀವಗಳು. ಅಂದಹಾಗೆ ಇವರೇನಾದ್ರೂ ಮತ್ತೆ ಹೋರಾಟ ಮಾಡಲು ಶುರು ಮಾಡಿದ್ರೆ ನಮ್ಮ ರಕ್ಷಕವಚಕ್ಕೆ ಕಷ್ಟವಾಗುತ್ತೆ. ಹೌದು, 108 ಸಿಬ್ಬಂದಿಗಳಿಗೆ ಇನ್ನೂ ಸಂಬಳ ಕ್ಲಿಯರ್ ಆಗಿಲ್ಲ.
108 ರಕ್ಷಾ ಕವಚ ಮೂರುವರೆ ಸಾವಿರ ಸಿಬ್ಬಂದಿಗಿಲ್ಲ ವೇತನ
108 ರಕ್ಷಾ ಕವಚ ಆಂಬುಲೆನ್ಸ್ ಸಿಬ್ಬಂದಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮ ಸೇವೆ ಮಾಡುವ ಆರೋಗ್ಯ ಸಿಬ್ಬಂದಿಗಳು. ಆದರೆ ಇವರಿಗೆ ಸಮರ್ಪಕವಾಗಿ ವೇತನ ಸಿಗುತ್ತಿಲ್ಲ. ದಸರಾ ಹಬ್ಬ ಆಯಿತು. ಇದೀಗ ದೀಪಾವಳಿಗಾದ್ರೂ 108 ಸಿಬ್ಬಂದಿಗೆ ಸಂಬಳ ಸಿಗುತ್ತಾ ಎಂದು ಕಾದುಕುಳಿತಿದ್ದಾರೆ. ಕೊಟ್ಟು ಮಾತು ಜಿವಿಕೆ ಕಂಪನಿ ತಪ್ಪುತ್ತಿದೆ. ದೇವರ ವರ ಕೊಟ್ರೂ ಪೂಜಾರ ಕೊಡುತ್ತಿಲ್ಲ ಎಂಬಂತೆ ಸರ್ಕಾರ ಅನುದಾನ ಕೊಟ್ರೂ ಜಿವಿಕೆ ಮಾತ್ರ ವೇತನ ಕೊಡಲು ಮೀನಾಮೇಷ ಎಣಿಸುತ್ತಿದೆ.
ರಾಜ್ಯದಲ್ಲಿ 108 ರಕ್ಷಾ ಕವಚ ಯೋಜನೆಯಡಿ ಆಂಬುಲೆನ್ಸ್ ವಾಹನದಲ್ಲಿ ಕಾರ್ಯ ನಿರ್ವಹಿಸುವ ಮೂರುವರೆ ಸಾವಿರ ಸಿಬ್ಬಂದಿಗೆ ವೇತನ ಸಿಗುತ್ತಿಲ್ಲ. ಕಳೆದೆರಡು ತಿಂಗಳಿನಿಂದ ಸಂಬಳಕ್ಕೆ ಹೋರಾಟ ಮುಂದುವರೆದಿದೆ. ಕಳೆದ ತಿಂಗಳು ಸಾಮೂಹಿಕ ರಜೆ ಎಚ್ಚರಿಕೆಗೆ ಎಚ್ಚೆತ್ತು ಆರೋಗ್ಯ ಇಲಾಖೆ ಸಭೆ ನಡೆಸಿತ್ತು. ಸಭೆಯಲ್ಲಿ 28 ಕೋಟಿಯಲ್ಲಿ ಮೊದಲ ಕಂತು 8 ಕೋಟಿ ಸರಕಾರ ಕೊಟ್ಟಿದೆ. ಆದರೆ ಇದರಲ್ಲಿ ಒಂದು ತಿಂಗಳು ಹಳೆಯ ವೇತನ ಕೊಡುವುದಾಗಿ ಜಿಬಿಕೆ ಸಿಬ್ಬಂದಿಗೇಳಿ ಹೊಸ ವರಾತೆ ತೆಗೆದಿದೆ. ಕಳೆದ ಮೂರು ವರುಷ ಗ್ರಾಚುವ್ಯುಟಿ, ಪರಿಷ್ಕೃತ ವೇತನಕ್ಕಾಗಿ ಹೋರಾಟ ಮಾಡಲಾಗುತ್ತಿತ್ತು. ಪರಿಷ್ಕತ ವೇತನ ಕೊಡಲು ಜಿವಿಕೆ ಕಳ್ಳಾಟವಾಡುತ್ತಿದೆ. ಸರ್ಕಾರ ಹೇಳಿದಂತೆ ಪರಿಷ್ಕೃತ ವೇತನ ಕೊಡದಿದ್ದರೆ ಮತ್ತೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡುತ್ತಿದ್ದಾರೆ.
ಆರೋಗ್ಯ ಇಲಾಖೆಯ ಸೂಚನೆಗೂ ಕ್ಯಾರೆ ಎನ್ನದ ಜಿವಿಕೆ ಕಂಪನಿ ದಸರಾ ಹಬ್ಬಕ್ಕೂ ಆಂಬುಲೆನ್ಸ್ ಸಿಬ್ಬಂದಿಗೆ ವೇತನ ಕೊಟ್ಟಿಲ್ಲ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ದೀಪಾವಳಿ ಹಬ್ಬದೊಳಗೆ ಜಿವಿಕೆ ಮೂಲಕ ವೇತನ ಕೊಡಿಸುವಂತೆ ಮನವಿ ಮಾಡುತ್ತಿವೆ.