ಲೋಕಸಭಾ(Loka Saba) ಚುನಾವಣೆಯ ಮಹಾಸಮರಕ್ಕೆ ರಾಜಕೀಯ(Political) ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಬಲಿಷ್ಠ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಎದುರಾಳಿಗಳಿಗೆ ಟಕ್ಕರ್ ಕೊಡುವ ಲೆಕ್ಕಾಚಾರದಲ್ಲಿವೆ.
ಇಂತದ್ದೇ ಮಹತ್ವದ ರಾಜಕೀಯ ಲೆಕ್ಕಾಚಾರ ಇದೀಗ ಮೈಸೂರು(Mysore)- ಕೊಡಗು(Kodagu) ಲೋಕಸಭಾ ಕ್ಷೇತ್ರದಲ್ಲೂ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವ ಮೈಸೂರು ಲೋಕಸಭಾ ಕ್ಷೇತ್ರ ಸದ್ಯಕ್ಕೆ ಬಿಜೆಪಿ(BJP) ಪಾಲಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಬಿಂಬಿತವಾಗಿದೆ.

ಕಳೆದೆರಡು ಅವಧಿಯಲ್ಲೂ ಗೆದ್ದು ಬೀಗಿರುವ ಬಿಜೆಪಿ(BJP) ಅಭ್ಯರ್ಥಿ ಪ್ರತಾಪ್ ಸಿಂಹ(Prathap Simha) ಸದ್ಯಕ್ಕಂತೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ 2024ರ ಚುನಾವಣೆಯಲ್ಲೂ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದರೆ. ಬಿಜೆಪಿ ಸಂಸದನಿಗೆ ಟಕ್ಕರ್ ನೀಡಲು ಲೆಕ್ಕಾಚಾರ ನಡೆಸುತ್ತಿರುವ ʻಕೈʼ ನಾಯಕರು, ಇದಕ್ಕಾಗಿ ಸೆಲೆಬ್ರಿಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡ ಬಗ್ಗೆ ಸದಸ್ಯಕ್ಕಂತೂ ಚರ್ಚೆ ಶುರುವಾಗಿದ್ದು, ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ನಟ ಡಾಲಿ ಧನಂಜಯ್(Dhananjaya) ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಹೇಳಿಬರುತ್ತಿದೆ.

ಮೈಸೂರಿನ ರಾಜಕೀಯ ರಂಗದಲ್ಲಿ ಹೀಗೊಂದು ಚರ್ಚೆ ಮಹತ್ವದ ಚರ್ಚೆ ನಡೆಯುತ್ತಿದ್ದು, ಸಂಸದ ಪ್ರತಾಪ್ ಸಿಂಹ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಈ ಎಲ್ಲಾ ಲೆಕ್ಕಾಚಾರಗಳು ನಿಜವಾಗಿ ನಟ ಧನಂಜಯ್ ಅಭ್ಯರ್ಥಿಯಾದರೆ ಮೈಸೂರು ಲೋಕಸಭಾ ಕ್ಷೇತ್ರ ವಿಭಿನ್ನ ರೀತಿಯಲ್ಲಿ ರಂಗು ಪಡೆಯಲಿದೆ.

ಮೈಸೂರಿನೊಂದಿಗೆ ತಮ್ಮದೇ ನಂಟು ಹೊಂದಿರುವ ಹಾಗೂ ಮೈಸೂರಿಗರಿಗೆ ಚಿರಪರಿಚಿತರಾಗಿರುವ ನಟ ಧನಂಜಯ, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದಾರೆ. ಜನಪ್ರಿಯ ನಟನಾಗಿರುವ ಕಾರಣಕ್ಕೆ ಕಾಂಗ್ರೆಸ್‌ಗೆ ಪ್ರಚಾರ ನಿರಾಯಾಸವಾಗಲಿದ್ದು, ಜಾತಿ ಲೆಕ್ಕಚಾರದಲ್ಲೂ ಹೊಸ ಸಮೀಕರಣ ಶುರುವಾಗಲಿದೆ. ಎಸ್ಸಿ, ಕುರುಬ, ಮುಸ್ಲಿಂ ಕಾಂಗ್ರೆಸ್ ಪಾಲಿನ ಸಾಂಪ್ರದಾಯಿಕ ಮತಗಳಾದರೆ, ನಟ ಡಾಲಿ ಧನಂಜಯ ಅಭ್ಯರ್ಥಿಯಾದರೆ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ಪಾಲಾಗಲಿದೆ ಎಂಬುದು ಕೈ ನಾಯಕರ ಲೆಕ್ಕಾಚಾರ.
#LokaSaba #MPelection #DaaliDhananjaya #Prathapsimha #Congress #Siddaramaiah











