• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ

ಪ್ರತಿಧ್ವನಿ by ಪ್ರತಿಧ್ವನಿ
November 15, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ
Share on WhatsAppShare on FacebookShare on Telegram

ಎಂಬುವುದನ್ನು ಫಲಿತಾಂಶ ನಿರ್ಧಾರ ಮಾಡುತ್ತದೆ. ಆದರೆ, ಈ ಚುನಾವಣೆಯಲ್ಲಿ ಅವರು ಸೋತರೂ ಗೆದ್ದರೂ ಕ್ಷೇತ್ರದ ಒಕ್ಕಲಿಗರು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯ ಹಲಸುವ ರೀತಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನೀಡಿರುವ “ಕರಿಯ” “ಖರೀದಿ” ಹೇಳಿಕೆಗಳು ಬಳಕೆಯಾಗುವುದರಲ್ಲಿ ಸಂಶಯವಿಲ್ಲ.

ADVERTISEMENT

ಮುಸ್ಲಿಮರ ಮಾಸ್‌ ಲೀಡರ್ ಆಗಲು ಹವಣಿಸುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ನೀಡುತ್ತಿರುವ ಹೇಳಿಕೆಗಳು ಹಾಗೂ ಅಪ್ರಬುದ್ಧ ನಡೆಗಳು ಮುಸ್ಲಿಮ್ ಸಮುದಾಯಕ್ಕೆ ನಷ್ಟ ಉಂಟು ಮಾಡಿದೆಯೇ ಹೊರತು ಲಾಭವಂತೂ ಅಲ್ಲ. ನನಗೆ ತಿಳಿದಿರುವಂತೆ ವೈಯಕ್ತಿಕವಾಗಿ ಜಮೀರ್‌ ಅವರು ಮತೀಯವಾದಿ ಅಲ್ಲದಿದ್ದರೂ ಅವರ ಚುನಾವಣಾ ರಾಜಕೀಯ ಶೈಲಿ ಸಮಸ್ಯಾತ್ಮಕವಾಗಿದೆ. ಅಭದ್ರತೆಯಲ್ಲಿ ಬಳಲುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಇಂತಹ ನಾಯಕತ್ವ ಅಪಾಯಕಾರಿಯಾಗಬಲ್ಲದು.

ಮುಸ್ಲಿಮರ ಇಂದಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಖ್ಯಾತ ಚಿಂತಕರಾದ ಯೋಗೇಂದ್ರ ಯಾದವ್ ವಿಶ್ಲೇಷಣೆ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮುಸ್ಲಿಮರು ಓದಲೇ ಬೇಕಿದೆ. ಮುಸ್ಲಿಮರು ಬದುಕುಳಿಯಲು ಮತ ಹಾಕುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂಬ ವಾಸ್ತವ ಅಂಶವನ್ನು ಅವರು ತಮ್ಮ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಮುಸ್ಲಿಮ್ ನಾಯಕತ್ವದ ಕೊಡುಗೆ ಬಗ್ಗೆ ವಿವರಿಸಿದ್ದಾರೆ.

D. K Suresh : ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುವುದೇಕೆ? : ಡಿ.ಕೆ.ಸುರೇಶ್  #pratidhvani

ಮುಸ್ಲಿಮ್ ಸಮುದಾಯದ ದೊಡ್ಡ ಕೊರತೆಯೇ ರಾಜಕೀಯ ನಾಯಕತ್ವ. ಅಬ್ದುಲ್ ನಜೀರ್ ಸಾಬ್, ಜಾಫರ್ ಶರೀಫ್, ಅಜೀಝ್ ಸೇಠ್ ಅವರಂತಹ ನಾಯಕತ್ವವೂ ಇವಾಗ ಇಲ್ಲದಂತಾಗಿದೆ. ಅಬ್ದುಲ್ ನಜೀರ್ ಸಾಬ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುವುದು ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಗೆ ಕೊಟ್ಟ ಕೊಡುಗೆಗಳಿಂದ. ಅಧಿಕಾರ ವಿಕೇಂದ್ರೀಕರಣ ಹಾಗೂ ಪಂಚಾಯತ್ ರಾಜ್ ಪುನಶ್ಚೇತನಕ್ಕೆ ಅವರು ಹೊಂದಿದ್ದ ಬದ್ಧತೆ, ನಿಲುವು ಇತಿಹಾಸದಲ್ಲಿ ದಾಖಲೆಯಾಗಿದೆ. ಎಲ್ಲಾ ಸಮುದಾಯದ ಜನರು ನೆನಪಿನಲ್ಲಿ ಇಡುವಂತಹ ಶುದ್ಧ ಕುಡಿಯುವ ನೀರು, ಜನತಾ ವಸತಿ ಯೋಜನೆಗಳು, ಅಂತ್ಯೋದಯ ಕಾರ್ಯಕ್ರಮಗಳು ಅವರ ಕಾಲದಲ್ಲಿ ಅನುಷ್ಠಾನಗೊಂಡಿದ್ದವು. ಅದಕ್ಕಾಗಿಯೇ ಅವರು ನೀರ್‌ ಸಾಬ್ ಆದರು.

ಆದರೆ ಜಮೀರ್ ಅವರಂತಹ ನಾಯಕತ್ವ ಇಂತಹ ಚಿಲ್ಲರೆ ಹೇಳಿಕೆಗಳು, ಗಂಭೀರತೆ ಇಲ್ಲದ ಹಾಗೂ ಸಮುದಾಯಕ್ಕೆ ಮತ್ತಷ್ಟು ಹಾನಿ ಉಂಟು ಮಾಡುವಂತಹ ನಡವಳಿಕೆಗಳಿಂದಲೇ ಗುರುತಿಸಿಕೊಳ್ಳುತ್ತಿದೆ. ಇದನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಮೇಲೆ ಮತ್ತಷ್ಟು ಜರಿಯಲು ಕಾತುರರಾಗಿರುವವರಿಗೂ ಜಮೀರ್ ಪದೇ ಪದೇ ಆಹಾರವನ್ನು ಒದಗಿಸುತ್ತಿದ್ದಾರೆ.

ಯೋಗೇಂದ್ರ ಯಾದವ್ ಅವರು ತಮ್ಮ ಲೇಖನದಲ್ಲಿ ಅವರ ಸಹೋದ್ಯೋಗಿ ಹಿಲಾಲ್ ಅಹ್ಮದ್ ಅವರ ಚಿಂತನೆ, ನಿಲುವುಗಳ ಬಗ್ಗೆ ಉಲ್ಲೇಖಿಸುತ್ತಾರೆ. ಮುಸ್ಲಿಮರ ಇಂದಿನ ಸವಾಲುಗಳನ್ನು ಎದುರಿಸಲು ಹಿಲಾಲ್ ಅಹ್ಮದ್ ಕಂಡುಕೊಂಡ ದಾರಿಗೆ ಸಂಕೇತ ಎಂಬಂತೆ ಅವರ ಕಚೇರಿಯಲ್ಲಿದ್ದ ಪವಿತ್ರ ಕಾಬಾ, ಮಹಾತ್ಮ ಗಾಂಧಿ ಮತ್ತು ಚೆ ಗುವೆರಾ ಚಿತ್ರಗಳ ಬಗ್ಗೆಯೂ ಗಮನ ಸೆಳೆಯುತ್ತಾರೆ. ಇದು ನಿಜಕ್ಕೂ ಚಿಂತನಾರ್ಹ ವಿಚಾರ.

ಹೀಗಾಗಿ, ಧರ್ಮಾಚರಣೆಯ ಜೊತೆ ಜೊತೆಗೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಆದರ್ಶ, ಆಶಯಗಳನ್ನು ಮುಂದಿಟ್ಟುಕೊಂಡು ಜಾತ್ಯತೀತ ರಾಜಕಾರಣದ ನೆಲೆಯನ್ನು ಮುಸ್ಲಿಮರು ಕಂಡು ಕೊಳ್ಳಬೇಕಾಗಿರುವುದು ಇಂದಿನ ಅಗತ್ಯತೆ.

  • ಇರ್ಷಾದ್ ಉಪ್ಪಿನಂಗಡಿ
Tags: BJPchannapatnachannapatna by electionchannapatna by election 2024channapatna by election candidatechannapatna by election datechannapatna by election meetingchannapatna by election newschannapatna by election votingchannapatna by polls votingchannapatna by- electionchannapatna byelectionchannapatna electionchannapatna election 2024channapatna re electionCongress Partykarnataka by election 2024tv9 kannada by election newsಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಚನ್ನಪಟ್ಟಣ ಫಲಿತಾಂಶದ ಬಗ್ಗೆ DK ಸುರೇಶ್ ತುರ್ತು ಸುದ್ದಿಗೋಷ್ಠಿ

Next Post

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ -ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ -ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada