ಪ್ರಜ್ವಲ್ ರೇವಣ್ಣ (prajwal revanna) ಇಂದು ರಾಜ್ಯಕ್ಕೆ ಆಗಮಿಸಲಿರೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿಗೆ (bangalore) ಬಂದು ಶರಣಾಗದಿದ್ದರೆ, ಅರೆಸ್ಟ್ ಮಾಡಬೇಕಾದ ಎಲ್ಲಾ ಸಿದ್ಧತೆಯನ್ನ ಎಸ್‌ಐಟಿ (SIT) ಅಧಿಕಾರಿಗಳ ಮಾಡಿಕೊಂಡಿದ್ದಾರೆ. ಇನ್ನೂ ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಬಂದ್ರೇ, ನೇರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (HD Devegowda) ಮನೆ ಹೋಗಬಹುದು.
ಪ್ರಜ್ವಲ್ ತನ್ನ ತಾತ ದೇವೇಗೌಡರ ಬಳಿ ಬಂದು ಆರ್ಶೀವಾದ ಪಡೆದು ಎಸ್‌ಐಟಿ ಅಧಿಕಾರಿಗಳಿಗೆ ಶರಣಾಗುವ ಸಾಧ್ಯತೆ.ಎಸ್‌ಐಟಿ ಅಧಿಕಾರಿಗಳ ಮುಂದೆ ಶರಣಾಗುವ ಮುಂಚೆ ತಮ್ಮ ವಕೀಲರ (lawyer) ಜೊತೆ ಜಾಮೀನು ಅರ್ಜಿ ಬಗ್ಗೆ ಚರ್ಚೆ ಮಾಡಬಹುದು.ಆ ಬಳಿಕ ಎಸ್‌ಐಟಿ ಅಧಿಕಾರಿಗಳ ಮುಂದೆ ಪ್ರಜ್ವಲ್ ಶರಣಾಗುವ ಸಾಧ್ಯತೆ ಇದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ (Blue corner notice) ಜಾರಿಯಾಗಿದ್ದು, ಪ್ರಜ್ವಲ್ ಲೊಕೇಶನ್ (Location) ಪತ್ತೆಹಚ್ಚಿದ SIT, ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ.ಇದರ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಏರ್‌ಪೋರ್ಟ್‌ನಲ್ಲಿ (airport) ಹೈಅಲರ್ಟ್ ಘೋಷಿಸಲಾಗಿದೆ.ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವುದೇ ಏರ್‌ಪೋರ್ಟ್‌ಗೆ ಬಂದ ಬೆನ್ನಲ್ಲೇ ವಶಕ್ಕೆ ಪಡೆಯಲು ಎಸ್‌ಐಟಿ ಟೀಂ ಸಿದ್ದವಾಗಿದೆ.