”ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ದ ನಡೆಸಲಾಗುತ್ತಿರುವ ಪ್ರತಿಭಟನೆಯನ್ನು ಪ್ರಧಾನ ಮಂತ್ರಿಯ ಹೆಸರಿನಲ್ಲಿ ನಡೆಸಲಾಗುವುದು,” ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ, ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ಧಾರೆ.
“ನಾವು ರೈತರ ಪ್ರತಿಭಟನೆಯನ್ನು ಪ್ರಧಾನ ಮಂತ್ರಿಯ ಹೆಸರಿನಲ್ಲಿ ನಡೆಸುತ್ತೇವೆ. ಏಕೆಂದರೆ ಬಿಜೆಪಿಯು ಇದನ್ನೇ ಮಾಡುತ್ತಿದೆ,” ಎಂದು ವ್ಯಂಗ್ಯವಾಡಿದ ರಾಕೇಶ್ ಟಿಕಾಯತ್ ಇದೇ ಸಂದರ್ಭದಲ್ಲಿ ನಮ್ಮ ರೈತ ಹೋರಾಟದ ಹಾದಿ ವಿಭಿನ್ನವಾಗಿರುತ್ತದೆ,” ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
“ನಾವು ಪ್ರಧಾನ ಮಂತ್ರಿಗೆ ಪ್ರಚಾರ ನೀಡುತ್ತಿದ್ದೇವೆ,” ಎಂದು ಹೇಳಿದ ಟಿಕಾಯತ್,“ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮಾರಾಟ ಮಾಡುಲು ಹೊರಟಿದ್ದಾರೆ “ವಿದ್ಯುತ್, ನೀರು ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವಿಷವನ್ನು ನಾವು ಜನರಿಗೆ ತಲುಪಿಸಿಸುವ ಮೂಲಕ ಪ್ರಧಾನಿ ಮೋದಿಗೆ ಪ್ರಚಾರ ನೀಡಲಾಗುವುದು ಎಂದು ಮಾದ್ಯಮಕ್ಕೆ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿಯ ವಿರುದ್ದವಾಗಿ ರೈತರು ಪ್ರಚಾರ ಮಾಡುವುದಾಗಿ ಈ ಹಿಂದೆಯೇ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಈ ಹಿಂದೆ “2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ” ಅನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದರು.

ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟಿಕಾಯತ್, “ಮೂರು ಕೃಷಿ ಕಾನೂನುಗಳಲ್ಲಿ ರೈತ ವಿರೋಧಿ ಏನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಪ್ರಧಾನ ಮಂತ್ರಿಯ ದೊಡ್ಡ ಸುಳ್ಳು,” ಎಂದು ನರೇಂದ್ರ ಮೋದಿಯ ವಿರುದ್ದ ವಾಗ್ದಾಳಿ ನಡೆಸಿದರು.
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಾಗಿ ರೈತರು ಘೋಷಿಸಿದ್ದಾರೆ. ಮುಜಾಫರ್ನಗರಲ್ಲಿ ಇಂದು ನಡೆಯಬೇಕಾದ ಮೀಟಿಂಗ್ ಅನ್ನು ಸಹ ರದ್ದು ಪಡಿಸಲಾಗಿದೆ. ರೈತರ ಪ್ರತಿಭಟನಾ ಸಭೆಯ ನಂತರ, ಇಂತಹ ರೈತರ ಸಭೆ ಮತ್ತು ಹೊರಟಗಳನ್ನು ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲೂ ನಡೆಸಲಾಗುವುದು ಎಂದು ಟಿಕಾಯತ್ ಹೇಳಿದ್ದಾರೆ.
ಮೋದಿಯವರ ಮಂತ್ರಿ ಕಾರ್ಯಲಯ ವಾರಣಾಸಿಯಲ್ಲಿದೆ. ವಾರಣಾಸಿಯ ಪ್ರತಿ ಪಂಚಾಯತ್ಗಳಲ್ಲಿ ಹಾಗು ಲಕ್ನೋದಲ್ಲಿ ಸಭೆ ನಡೆಸಲಾಗುವುದು” ಎಂದು ಟಿಕಾಯತ್ ಅವರು ಮದ್ಯಮದವರಿಗೆ ತೀಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಗ್ರಾಮ ಗೋರಖಪುರದಲ್ಲಿ ಮಹಾ ಪಂಚಾಯತ್ ನಡೆಯುಲಿದೆ ಎಂದು ಹೇಳಿದರು ವಾಹ್ ಕಿಸಾನ್ ಕಾ ಶೆಹೆರ್, ಯೋಗಿ ಜಿ ಕಾ ತೋರ್ ಮಂದಿರ್ ಹೈ (ಆ ನಗರವು ರೈತರಿಗೆ ಸೇರಿದ್ದು. ಆದರೆ ಯೋಗಿಜಿ ಯ ದೇವಸ್ಥಾನ ಮಾತ್ರ ಇದೆ)”. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯ ಮಂತ್ರಿಯಾದ ನಂತರದಲ್ಲಿ ಶಿವನ ದೇವಾಲಯವನ್ನು ನಡೆಸುತ್ತಿದ್ದರು, ಅದ್ದರಿಂದ ಪಟ್ಟಣಕ್ಕೆ ಹೆಸರನ್ನು ಬಂದಿತು ಎಂದು ಹೇಳಲಾಗಿದೆ.
ರೈತರ ಸಭೆ ನೆಡೆಸಲು ಒಳ್ಳೆಯ ಸ್ಥಳ ಆಯ್ಕೆಯೂ ಬಹಳ ಮಖ್ಯವಾಗಿದೆ. ಎಂಟು ವರ್ಷಗಳ ಹಿಂದೆ ಮುಜಾಫರ್ ನಗರವು ಭಾರೀ ಹಿಂಸಾಚಾರಕ್ಕೆ ಒಳಗಾಗಿತ್ತು. ಇದ್ದರಿಂದ ಸುಮಾರು 60 ಮುಸಲ್ಮಾನರು ಮೃತಪಟ್ಟದ್ದರು ಎಂದು ಹೇಳಲಾಗಿದೆ.
ಮುಜಾಫರ್ ನಲ್ಲಿ, ಹಿಂದೂ – ಮುಸ್ಲಿಮರ ನಡುವೆ ಇದ್ದ ಅಂತರವು ,ಇಂದು ರೈತರ ಈ ಹೋರಾಟದಿಂದ ಅಂತರವು ಕಡಿಮೆಯಾಗಿದೆ. ಮೊಹಬ್ಬತ್ನಗರ (ಪ್ರೀತಿಯ ನಗರವಾಗಿದೆ) ಎಂದು ಕರೆಯಲಾಗಿದೆ. ಮತ್ತು ರಾಜ್ಯದ ಪ್ರತಿ ಗ್ರಾಮಕ್ಕೂ ಇಂತಹ ಪ್ರತಿಭಟನೆಗಳನ್ನು ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ – ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ 40 ರೈತ ಸಂಘಗಳ ಛತ್ರಿ ಸಂಸ್ಥೆಯಾಗಿದೆ. “ಮಹಾಪಂಚಾಯತ್” ಆಂದೋಲನವು “ಎಲ್ಲಾ ಜಾತಿಗಳು, ಧರ್ಮಗಳು, ರಾಜ್ಯಗಳು, ವರ್ಗಗಳು, ಸಣ್ಣ ವ್ಯಾಪಾರಿಗಳು ಮತ್ತು ಎಲ್ಲಾ ವಿಭಾಗಗಳು ಬೆಂಬಲವನ್ನು ಹೊಂದಿದೆ ಎಂದು ಹೇಳಿದ್ದಾರೆ.
“ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಈ ಹೋರಟವು ಹೀಗೆ ಮುಂದುವರಿಯುತ್ತದೆ” ಎಂದು ಟಿಕಾಯತ್ ಹೇಳಿದ್ದಾರೆ. ನಂತರ “ಸ್ವಾತಂತ್ರ್ಯಕ್ಕಾಗಿ ಹೋರಾಟವು 90 ವರ್ಷಗಳ ಕಾಲ ನಡೆಯಿತು, ಹಾಗಾಗಿ ನಮ್ಮ ಈ ಹೋರಟವು ಎಷ್ಟು ದಿನ ನಡೆಯುತ್ತದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.
“ಮೋರ್ಚಾದ ಏಕೈಕ ಉದ್ದೇಶವೆಂದರೆ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು. ಅದರಿಂದಾಗಿ ಹೊಸ ಸರ್ಕಾರವು ಮೋದಿ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿಲ್ಲ,” ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದರು.
“ನಾವು ಆಡಳಿತಾರೂಢ ಬಿಜೆಪಿಯೊಂದಿಗೆ ಯುದ್ಧದಲ್ಲಿದ್ದೇವೆ. ದೇಶದ ಒಬ್ಬ ರೈತ ಕೂಡ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಸಮರ್ಥರಾದವರನ್ನು ಬೆಂಬಲಿಸುವುದು ನಮ್ಮ ಸರಳ ತಂತ್ರ. ನಾವು ಇದನ್ನು ಬಂಗಾಳದಲ್ಲಿ ಪರಿಣಾಮಕಾರಿಯಾಗಿ ಮಾಡಿದ್ದೇವೆ ಮತ್ತು ಅದನ್ನು 2022 ರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪುನರಾವರ್ತಿಸುತ್ತೇವೆ,” ಎಂದು ರೈತ ಮುಖಂಡರು ಹೇಳಿದ್ದರು.





