ಚಿಕ್ಕಮಗಳೂರು (Chikkamaglore) ಜಿಲ್ಲೆಯಲ್ಲಿ ಕಾಡನೆಗಳ ಉಪಟಳ ನಿಲ್ಲುತ್ತಿಲ್ಲ. ಮಲೆನಾಡಿನಲ್ಲಿ ಹಾಡಗಲೇ ಕಾಣಿಸಿಕೊಳ್ಳುತ್ತಿರುವ ಆನೆಗಳು ಜನರಲ್ಲಿ ಆತಂಕ ಹುಟ್ಟಿಸಿವೆ.ಆನೆಗಳ ಹಾವಳಿಯಿಂದ ಎನ್.ಆರ್ ಪುರ (NR Pura) ತಾಲೂಕಿನ ಜನ ಹೈರಾಣಾಗಿ ಹೋಗಿದ್ದಾರೆ.
ಈ ಕಾಡಾನೆಗಳ ಭಯದಿಂದ ಕಾಫಿ (Coffee), ಭತ್ತ ಕಟಾವಿನ ಸಂದರ್ಭದಲ್ಲೂ ಕೂಡ ತಮ್ಮ ಜಮೀನಿಗೆ ಹೋಗಲು ರೈತರ ಹಿಂದೇಟು ಹಾಕುತ್ತಿದ್ದಾರೆ. ಎನ್.ಆರ್ ಪುರ ತಾಲೂಕಿನಲ್ಲಿ ಕಳೆದ ಒಂದು ತಿಂಗಳಲ್ಲಿ ಕಾಡನೆ ಇಬ್ಬರನ್ನು ಬಲಿ ಪಡೆದಿದೆ.
ಹೀಗಾಗಿ ಜನಪ್ರತಿನಿಧಿನಗಳು, ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು,ಜೇನುಕಟ್ಟೆಸರ ಗ್ರಾಮದಲ್ಲಿ ಕಾಡನೆ ಸಂಚಾರ ಹೆಚ್ಚಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ತಾಲೂಕಿನ ಗ್ರಾಮದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷವಾಗಿದೆ.
ಹೀಗಾಗಿ ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಜನ ಪ್ರತಿನಿಧಿಗಳು & ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.