ಪ್ರಿಯಕರನ ಜೊತೆ ಸೇರಿ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಭೋಗನಹಳ್ಳಿ ಕೆರೆ ಬಳಿ ನಡೆದಿದೆ.

ಭೋಗನಹಳ್ಳಿ ಕೆರೆ ಬಳಿಯ ಲೇಬರ್ ಶೆಡ್ ಪತಿ ತಿಪ್ಪೇಶ ಹಾಗೂ ಪತ್ನಿ ನಾಗರತ್ನ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ರು. ನೀಲಗಿರಿ ತೋಪಿನ ಮಧ್ಯದಲ್ಲಿ ಪ್ರಿಯಕರ ಜೊತೆಗೂಡಿ ನಾಗರತ್ನ ಪತಿಯನ್ನ ಕೊಲೆ ಮಾಡಿಸಿದ್ದಾಳೆ. ತೋಪಿನ ಮಧ್ಯೆದಲ್ಲಿ ಬಿದ್ದಿದ್ದ ಶವ ಕಂಡು ಪತ್ನಿಗೆ ಸ್ಥಳೀಯರು ವಿಷಯ ತಿಳಿಸಿದ್ರು.
ಈ ವೇಳೆ ಏನು ಗೊತ್ತಿಲ್ಲದವಳಂತೆ ಬಂದು ಪತ್ನಿ ಕಣ್ಣೀರು ಸುರಿಸಿ ನಾಟಕವಾಡಿದ್ದಳು. ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆಗೆ ಸುಪಾರಿ ಕೊಟ್ಟಿರೋದು ಬೆಳಕಿಗೆ ಬಂದಿದೆ. ಪತ್ನಿ ನಾಗರತ್ನ ಸೇರಿದಂತೆ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.