ಬೆಂಗಳೂರು: ಪತ್ನಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಲ್ಲದೇ ಆಕೆಗೆ ವಂಚಿಸಿ ಪ್ರೇಯಸಿಯೊಂದಿಗೆ ಚೆಲ್ಲಾಟ ಆಡುತ್ತಿದ್ದ ಟೆಕ್ಕಿ ಪತಿಯನ್ನ DCRE ಪೊಲೀಸರು ಬಂಧಿಸಿದ್ದಾರೆ.
ಟೆಕ್ಕಿ ಜೆಡ್ರೆಲಾ ಜಾಕೂಬ್ ಆರೂಪ್ ಎಂಬಾತ ಕಳೆದ ಎರಡು ವರ್ಷಗಳಿಂದ ಪತ್ನಿಯೊಂದಿಗೆ ಬೆಂಗಳೂರಲ್ಲಿ ವಾಸ ಮಾಡುತ್ತಿದ್ದ. ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಟಿತ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದ ಪತ್ನಿ ತನ್ನ ಪತಿಗೆ ಕೆಲಸ ಇಲ್ಲದ ಕಾರಣ ತನ್ನ ಕೆಲಸ ಬಿಟ್ಟುಕೊಟ್ಟಿದ್ದಳು. ಆದರೆ
ಒಂದು ಮಗುವಾದ ಬಳಿಕ ಪತ್ನಿಗೆ ಜಾತಿನಿಂದನೆ ಮಾಡಿ ಕಿರುಕುಳ ನೀಡುತ್ತಿದ್ದು, ಗರ್ಭಪಾತವಾಗುವಂತೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದನಂತೆ.
ಇಷ್ಟಲ್ಲದೇ ಪತ್ನಿಗೆ ಮೋಸ ಮಾಡಿ ಪರಸ್ತ್ತೀ ಸಹವಾಸ ಮಾಡಿ ಆಕೆಯ ಜೊತೆ ರೀಲ್ಸ್ ಮಾಡಿ ಹರಿಬಿಡುತ್ತಿದ್ದ. ಈ ಹಿನ್ನೆಲೆ ಪತಿ ವಿರುದ್ಧ ಪತ್ನಿ ಅಟ್ರಾಸಿಟಿ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದರು. ಪತ್ನಿ ಮಾಹಿತಿ ಆಧಾರದಲ್ಲಿ ಆರೋಪಿ ಹುಡುಕಿ ಹೊರಟ ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಪಶ್ಚಿಮ ಠಾಣಾ ಪೊಲೀಸರಿಗೆ ಆರೋಪಿ ಪ್ರೇಯಸಿ ಜೊತೆ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆತನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












