ಚಾಮರಾಜನಗರ : ಬಿಜೆಪಿ ಹೈಕಮಾಂಡ್ ಆದೇಶದಂತೆ ಸಚಿವ ವಿ.ಸೋಮಣ್ಣ ಸ್ವಕ್ಷೇತ್ರವನ್ನು ಬಿಟ್ಟು ವರುಣ ಹಾಗೂ ಚಾಮರಾಜನಗರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವರುಣ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರದಿಂದ ಐದು ದಿನಗಳ ಕಾಲ ಸೋಮಣ್ಣ ವರುಣದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ . ಪತಿ ವರುಣ ಕ್ಷೇತ್ರದ ಜನರ ಮತ ಸೆಳೆಯುವಲ್ಲಿ ಬ್ಯುಸಿ ಆಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಪ್ರಚಾರದ ಅಖಾಡಕ್ಕೆ ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ಇಳಿದಿದ್ದಾರೆ.

ನನಗೆ ವೋಟು ಕೊಡಿ, ಐದು ವರ್ಷಗಳಲ್ಲಿ ಅಭಿವೃದ್ಧಿ ಅಂದರೆ ಏನು ಅಂತಾ ತೋರಿಸುತ್ತೇವೆ ಎಂದು ಹೇಳುವ ಮೂಲಕ ಶೈಲಜಾ ಸೋಮಣ್ಣ ಚಾಮರಾಜನಗರ ಜನತೆಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಮಹಿಳೆಯರ ಮತ ಸೆಳೆಯಲು ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ಚಾಮರಾಜನಗರದಲ್ಲಿ ಸೋಮಣ್ಣ ಪತ್ನಿಯನ್ನು ಮುಂದೆ ಬಿಟ್ಟಿದೆ. ಶೈಲಜಾ ಸೋಮಣ್ಣ ಈ ಹಿಂದೆ ಚಾಮರಾಜನಗರದಲ್ಲಿ ಬಿಜೆಪಿ ಬಂಡಾಯ ಶಮನದಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು.
ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಮನವೊಲಿಸುವ ಮೂಲಕ ಬಂಡಾಯ ಶಮನ ಮಾಡಿದ್ದರು . ಇದೀಗ ಚಾಮರಾಜನಗರದಲ್ಲಿಯೇ ಬೀಡು ಬಿಟ್ಟಿರುವ ಶೈಲಜಾ ಮತಯಾಚನೆ ಮಾಡುತ್ತಿದ್ದಾರೆ ,