• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ನಿಖಿಲ್‌ ಸೋಲಿಗೆ ಯಾರು ಕಾರಣ? ಮಗನ ರಾಜಕೀಯ ಭವಿಷ್ಯಕ್ಕೆ ತಾಯಿ ಕೊಳ್ಳಿ.!

ಪ್ರತಿಧ್ವನಿ by ಪ್ರತಿಧ್ವನಿ
May 14, 2023
in ಅಂಕಣ, ರಾಜಕೀಯ
0
ನಿಖಿಲ್‌ ಸೋಲಿಗೆ ಯಾರು ಕಾರಣ? ಮಗನ ರಾಜಕೀಯ ಭವಿಷ್ಯಕ್ಕೆ ತಾಯಿ ಕೊಳ್ಳಿ.!
Share on WhatsAppShare on FacebookShare on Telegram

 ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಅಚ್ಚರಿ ಫಲಿತಾಂಶಗಳು ಬಂದಿವೆ. ಆ ಮೂಲಕ ಮತದಾರನ ಆಯ್ಕೆಗಳ ಬಗ್ಗೆ ಸುಲಭದ ಲೆಕ್ಕಾಚಾರ ಹಾಕುವ ಹಾಗಿಲ್ಲ ಎಂಬ ಸಂದೇಶ ಮತ್ತೆ ರವಾನೆಯಾಗಿದೆ.  ಜೆಡಿಎಸ್ ಭದ್ರಕೋಟೆಯಾದ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಮೂರರಲ್ಲಿ ಸೋತಿರುವುದು ಜೆಡಿಎಸ್‌ಗೆ ಅನಿರೀಕ್ಷಿತವಾಗಿದೆ.

ADVERTISEMENT

ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತು, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿಜಯ ಸಾಧಿಸಿರುವುದು ಜೆಡಿಎಸ್‌ಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಒಂದರ್ಥದಲ್ಲಿ ಗೆಲುವಿನ ಬಗ್ಗೆ ಪಕ್ಷಕ್ಕಿದ ಅತಿಯಾದ ಆತ್ಮವಿಶ್ವಾಸವೇ ಪಕ್ಷಕ್ಕೆ ಮುಳ್ಳಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್‌ ಅಭ್ಯರ್ಥಿ ಗೆಲುವನ್ನು ಸ್ವತಃ ಕಾಂಗ್ರೆಸಿಗರೂ ನಿರೀಕ್ಷಿಸಿರಲಿಲ್ಲ. ಹಾಗಾಗಿ, ಗೆಲುವಿನ ಕ್ಷೇತ್ರ ಎಂದು ಜೆಡಿಎಸ್‌ ರಾಮನಗರವನ್ನು ನಿರ್ಲಕ್ಷ್ಯ ಮಾಡಿತ್ತು ಎನ್ನಲಾಗಿದೆ.  

ಅದೂ ಅಲ್ಲದೆ, ಈ ಬಾರಿ ಕಾಂಗ್ರೆಸ್‌ ಗೆದ್ದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ಒಕ್ಕಲಿಗ ಸಮುದಾಯದ ಮತದಾರರು ಕಾಂಗ್ರೆಸ್‌ ಕಡೆ ಒಲವು ತೋರಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ, ಜೆಡಿಎಸ್‌ ನೀರಸ ಫಲಿತಾಂಶ ನೀಡಿದೆ. ಇನ್ನು, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಭರವಸೆಗಳು ಸಹ ಪ್ರಮುಖ ಪಾತ್ರ ವಹಿಸಿವೆ. ಅದರಲ್ಲೂ ಈ ಬೆಲೆ ಏರಿಕೆಯ ಸಮಯದಲ್ಲಿ ಉಚಿತ ವಿದ್ಯುತ್‌, ಧನಸಹಾಯ ಮೊದಲಾದ ಅಂಶಗಳು ಮತದಾರರನ್ನು ಕಾಂಗ್ರೆಸ್‌ ಸೆಳೆಯಲು ಸಹಾಯ ಮಾಡಿದೆ.

ಕಾಂಗ್ರೆಸ್ ಪಾಲಾಗಿರುವ ದಲಿತ, ಕುರುಬ ಮತ್ತು ಅಲ್ಪಸಂಖ್ಯಾತರ ಮತಗಳು ಕ್ರೋಡೀಕರಣಗೊಂಡಿರುವುದು ಮತ್ತೊಂದು ಕಾರಣ. ಸಿದ್ದರಾಮಯ್ಯ ಕಾರಣಕ್ಕೆ ಕುರುಬ, ದಲಿತ, ಮುಸ್ಲಿಂ ಮತಗಳು ಕ್ರೋಢೀಕರಣಗೊಂಡಿದೆ. ಕಾಂಗ್ರೆಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವೂ ಹೊಸ ಭರವಸೆಯನ್ನು ಮೂಡಿಸಿದೆ.

ರಾಮನಗರದ ಜೆಡಿಎಸ್‌ ಕಾರ್ಯಕರ್ತರಿಗೆ ನಿಕಟಪೂರ್ವ ಶಾಸಕಿ ಅನಿತಾ ಕುಮಾರಸ್ವಾಮಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿರುವುದೂ ನಿಖಿಲ್ ಸೋಲಿಗೆ ಕಾರಣ ಎಂಬ ಮಾತುಗಳೂ ಕೇಳೀ ಬಂದಿದೆ.  ಮಗನ ರಾಜಕೀಯ ಭವಿಷ್ಯವನ್ನು ರೂಪಿಸಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿದರಾದರೂ ಅದು ಮಗನಿಗೆ ನಷ್ಟವನ್ನೇ ತಂದೊಡ್ಡಿದೆ. ಕ್ಷೇತ್ರದಲ್ಲಿ ಅನಿತಾ ಅವರು ಏನೂ ಮಾಡಿಲ್ಲ ಮತ್ತು ಮತದಾರರಿಗೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಆರೋಪವೂ ಇತ್ತು, ಹಾಗಾಗಿ, ನಿಖಿಲ್‌ ಗೆ ಮತಹಾಕದೆ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅದೇ ವೇಳೆ ಇಕ್ಬಾಲ್‌ ಹುಸೇನ್‌ ಕ್ಷೇತ್ರದಲ್ಲಿ ಹಲವು ತಿಂಗಳ ಮೊದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿದ್ದರು, ಇದೂ ಅವರಿಗೆ ವರದಾನವಾಗಿದೆ

ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮಾಡಿ ತಮ್ಮ ಕ್ಷೇತ್ರಗಳತ್ತ ಗಮನ ಹರಿಸುವಿಕೆ ಕಡಿಮೆ ಮಾಡಿರುವುದು ಕೂಡಾ ರಾಮನಗರದಲ್ಲಿ ಎಫೆಕ್ಟ್‌ ಬಿದ್ದಿದೆ.

Tags: anitha kumaraswamyJDSNikhil Kumaraswamyramanagara
Previous Post

ʻನಾನೆಂದೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆʼ: ನಿಖಿಲ್‌ ಕುಮಾರಸ್ವಾಮಿ

Next Post

ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್​ ಮ್ಯಾಸರ್​

Related Posts

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..
Top Story

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ...

Read moreDetails
ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್​ ಮ್ಯಾಸರ್​

ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್​ ಮ್ಯಾಸರ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada