ಪುರುಷೋತ್ತಮ್ ಬಿಳಿಮಲೆ ಇವರಿಗೊಂದು ಸಲಹೆ
ರಾಷ್ಟ್ರೋತ್ಥಾನ ಪರಿಷತ್ ಮತ್ತು ಆರ್ ಎಸ್ ಎಸ್ ಸಂಘ ಪರಿವಾರದ ಸಂಘ-ಸಂಸ್ಥೆಗಳಿಗೆ ಅಕ್ರಮವಾಗಿ, ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ ಬಗ್ಗೆ ದಿ ಫೈಲ್ ಸರಣಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪುರುಷೋತ್ತಮ್ ಬಿಳಿ ಮಲೆ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಲು ಪ್ರಾರಂಭಿಸಿದ್ದಾರೆ
ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಪಡೆದುಕೊಂಡು ದಾಖಲೆ ಸಹಿತ ರಾಷ್ಟ್ರೋತ್ಥಾನ ಪರಿಷತ್ತಿನ ಸಂಘ ಪರಿವಾರಕ್ಕೆ ಸೇರಿದ ಹಲವಾರು ಸಂಘ ಸಂಸ್ಥೆಗಳಿಗೆ ಗೋಮಾಳ ಮತ್ತು ಸರ್ಕಾರದ ಜಮೀನುಗಳನ್ನು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿ ಜಮೀನುಗಳನ್ನು ಹಿಂದಿನ ಸರ್ಕಾರ ಮಂಜೂರು ಮಾಡಿದ ಬಗ್ಗೆ ವಿಸ್ತೃತ ವರದಿಯನ್ನು ಮಾಡಿತ್ತು.
ಸರಣಿ ಸಂಚಿಕೆಗಳನ್ನು ಪ್ರಕಟಿಸಿದ *ದಿ ಫೈಲ್ ನ ಆಧಾರದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಧ್ವನಿ ಎತ್ತಿದ್ದವು.
ಆದರೆ ಈಗ ಸರ್ಕಾರದ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ಪುರುಷೋತ್ತಮ ಬಿಳಿ ಮಲೆ ಅವರು ಭಾಗವಹಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ *ಆರ್ ಎಸ್ ಎಸ್ ಬಳಿ ಇರುವ ಸರ್ಕಾರಿ ಜಮೀನುಗಳ ಬಗ್ಗೆ ಚರ್ಚೆ ಯಾಕೆ ಇಲ್ಲ ಎಂಬ ವಿಷಯದ ಕಿಡಿಯನ್ನು ಹೊತ್ತಿಸಿದ್ದಾರೆ.
ಆದರೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸರ್ಕಾರದ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪುರುಷೋತ್ತಮ ಬಿಳಿ ಮಲೆಯವರು ರಾಜ್ಯದ ಕಂದಾಯ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದು ಈ ಹಿಂದೆ ರಾಷ್ಟ್ರೋತ್ಥಾನ ಪರಿಷತ್ ಮತ್ತು ಆರ್ ಎಸ್ ಎಸ್ ಸಂಘ ಪರಿವಾರದವರಿಗೆ ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿಗಳನ್ನು ಧಿಕ್ಕರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ ಈ ಹಿಂದೆ ಮಂಜೂರಾದ ಎಲ್ಲಾ ಜಮೀನುಗಳನ್ನು ಸರ್ಕಾರ ವಾಪಸು ಪಡೆದುಕೊಳ್ಳುವಂತೆ ಪತ್ರ ಬರೆಯಬೇಕೆಂದು *ನೈಜ ಹೋರಾಟಗಾರರ ವೇದಿಕೆ ಯು ಪುರುಷೋತ್ತಮ್ ಬಿಳಿ ಮಲೆಯವರಿಗೆ ವಿನಯ ಪೂರ್ವಕವಾಗಿ ಆಗ್ರಪಡಿಸುತ್ತಿದೆ.
ಯಾವುದೇ ಸರ್ಕಾರಗಳು ತಮ್ಮದೇ ಆದೇಶವನ್ನು ಪುನರ್ ಪರಿಶೀಲನೆ ನಡೆಸಿ ಸಾರ್ವಜನಿಕರ ತೆರಿಗೆ ಹಣದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಇಂತಹ ಆದೇಶಗಳನ್ನು ಮರುಪರಿಶೀಲನೆ ಮಾಡಿ ಹಿಂಪಡೆಯುವ ಅಧಿಕಾರ ಇರುವುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ್ ಬಿಳಿ ಮಲೆಯವರು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಯವರಿಗೆ ಈ ಬಗ್ಗೆ ಹಿಂದಿನ ಸರ್ಕಾರ ಮಾಡಿರುವ ಆದೇಶಗಳನ್ನು ಹಿಂಪಡೆಯುವಂತೆ ಒತ್ತಾಯ ಮಾಡಬೇಕೆಂದು ಈ ಮೂಲಕ ನೈಜ್ಯ ಹೋರಾಟಗಾರರ ವೇದಿಕೆ ಮತ್ತೊಮ್ಮೆ ಅಗ್ರಹ ಪಡಿಸುತ್ತಿದೆ.
,ಹೆಚ್ ಎಂ ವೆಂಕಟೇಶ್
ಹಿರಿಯ ಸಾಮಾಜಿಕ ಹೋರಾಟಗಾರರು
ನೈಜ ಹೋರಾಟಗಾರರ ವೇದಿಕೆ ಬೆಂಗಳೂರು