ಇಸ್ರೇಲ್ ಜೊತೆಗಿನ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿ ‘ಮೋದಿ ಸರ್ಕಾರ ದೇಶದ್ರೋಹ ಮಾಡಿದೆ’ ಎಂದು ಹೇಳುವ ವರದಿಯ ಕುರಿತು ರಾಹುಲ್ ಗಾಂಧಿ ಶನಿವಾರ (ಜನವರಿ 29, 2022) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ನಮ್ಮ ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಪೆಗಾಸಸ್ ಅನ್ನು ಖರೀದಿಸಿದೆ ಎಂದು ಆರೋಪಿಸಿದ್ದಾರೆ.
Also Read : ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ನಮ್ಮ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿದೆ. ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗಗಳು ಈ ಫೋನ್ ಕದ್ದಾಲಿಕೆಗಳಿಂದ ಗುರಿಯಾಗಿವೆ. ಇದು ದೇಶದ್ರೋಹ ಕೆಲಸವಾಗಿದ್ದು ಮೋದಿ ಸರ್ಕಾರ ದೇಶದ್ರೋಹ ಮಾಡಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ನ ವರದಿಯ ಪ್ರಕಾರ, 2017 ರಲ್ಲಿ ಭಾರತ ಮತ್ತು ಇಸ್ರೇ ಲ್ ನಡುವೆ ನಡೆದ ಸುಮಾರು 2 ಶತಕೋಟಿ ಡಾಲರ್ ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಒಪ್ಪಂದದಲ್ಲಿ ಇಸ್ರೇಲಿ ಗೂಢಚಾರಿಕೆ ತಂತ್ರಾಂಶ ಪೆಗಾಸಸ್ ಮತ್ತು ಕ್ಷಿಪಣಿವ್ಯ ವಸ್ಥೆಯು ಕೇಂದ್ರ ಬಿಂದುವಾಗಿದ್ದವು ಎಂದಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಮೋದಿ ಸರ್ಕಾರ ಭಾರತದ ಶತ್ರುಗಳಂತೆ ವರ್ತಿಸಿದ್ದು ಭಾರತೀಯ ನಾಗರಿಕರ ವಿರುದ್ಧ ಯುದ್ಧ ಅಸ್ತ್ರವನ್ನು ಏಕೆ ಬಳಸಿದೆ? ಎಂದು ಪ್ರಶ್ನಿಸಿದ್ದಾರೆ.
ಪೆಗಾಸಸ್ ಅನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮಾನವಾಗಿದೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ನ್ಯಾಯವನ್ನು ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಖರ್ಗೆ ಹೇಳಿದರು.
ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್, ಬಿಜೆಪಿ ಸರ್ಕಾರವು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಭಾರತದ ನಾಗರಿಕರ ಮೇಲೆ ಕಣ್ಣಿಡಲು ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು ಬಳಸಿದೆ ಎಂಬುದಕ್ಕೆ ಇದು “ನಿರಾಕರಿಸಲಾಗದ ಪುರಾವೆ” ಎಂದು ಹೇಳಿದರು.
ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಟ್ವೀಟ್ ಮಾಡಿದ್ದು, “ಭಾರತದ ನಾಗರೀಕರರು ಪಾವತಿಸಿದ ₹ 300 ಕೋಟಿ ತೆರಿಗೆ ಹಣದಿಂದ ಇಸ್ರೇಲಿನ ಸ್ಪೈವೇರ್ ಪೆಗಾಸಸ್ ಖರೀದಿಸಿ ಚಂದಾದಾರರಾಗಿದ್ದಾರೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಮೋದಿ ಸರ್ಕಾರ ಇಂದು ತಳ್ಳಿಹಾಕಬೇಕು ಎಂದು ಹೇಳಿದ್ದಾರೆ.
ಭಾರತೀಯ ಸಚಿವರು, ರಾಜಕಾರಣಿಗಳು, ಕಾರ್ಯಕರ್ತರು, ಉದ್ಯಮಿಗಳು ಮತ್ತು ಪತ್ರಕರ್ತರು ಸೇರಿದಂತೆ ಅನೇಕ ಜನರು ಎನ್ಎಸ್ಒ ಗ್ರೂಪ್ನ ಫೋನ್ ಹ್ಯಾಕಿಂಗ್ ಸಾಫ್ಟ್ವೇರ್ನಿಂದ ಸಂಭಾವ್ಯವಾಗಿ ಗುರಿಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ತನಿಖಾ ಒಕ್ಕೂಟವು ಕಳೆದ ವರ್ಷ ಹೇಳಿಕೊಂಡಿರುವುದು ಗಮನಾರ್ಹವಾಗಿದೆ.
Also Read : ಪೆಗಾಸಸ್ ಗೂಢಚಾರಿಕೆ : ತಜ್ಞರ ಸಮಿತಿ ನೇಮಿಸಿದ ಸುಪ್ರೀಂ –ಕೇಂದ್ರಕ್ಕೆ ಹಿನ್ನಡೆ
ಆದಾಗ್ಯೂ, ಈ ವಿಷಯದಲ್ಲಿ ತನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ಸರ್ಕಾರ ನಿರಾಕರಿಸಿದೆ. ತರುವಾಯ, ಭಾರತದಲ್ಲಿ ಉದ್ದೇಶಿತ ಕಣ್ಗಾವಲುಗಾಗಿ ಪೆಗಾಸಸ್ನ ಬಳಕೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂರು ಸದಸ್ಯರ ಸ್ವತಂತ್ರ ತಜ್ಞರ ಸಮಿತಿ ರಚಿಸಿದೆ.